1. ಬ್ಯಾಕ್‌ಗ್ರೌಂಡ್ ಆ್ಯಪ್ಸ್ ಬಂದ್
ಸ್ಮಾರ್ಟ್‌ಫೋನ್, ಒಂದಷ್ಟು ಸಮಯದ ನಂತರ ಆ್ಯಪ್‌ಗ್ಳಿಂದ ತುಂಬಿಹೋಗುತ್ತವೆ. ಈಗಿನ ಮೊಬೈಲ್‌ಗಳಲ್ಲಿ ಇಂಟರ್ನಲ್ ಮೆಮೊರಿ ಹೆಚ್ಚಿರುವುದರಿಂದ ಬಳಕೆದಾರ ತನ್ನ ಫೋನ್‌ನಲ್ಲಿ ಯಾವ ಯಾವ ಆ್ಯಪ್‌ಗ್ಳಿವೆ ಎನ್ನುವುದನ್ನೂ ನೆನಪಿಟ್ಟುಕೊಳ್ಳುವುದಕ್ಕೆ ಹೋಗುವುದಿಲ್ಲ. ಆ್ಯಪ್‌ಗ್ಳಲ್ಲಿ ಕೆಲವು ಬ್ಯಾಕ್‌ಗ್ರೌಂಡಿನಲ್ಲಿ ರನ್ ಆಗುತ್ತಿರುತ್ತವೆ. ಅಂದರೆ ಅದು ಪರೀಕ್ಷಿಸದ ಹೊರತು ತಿಳಿಯುವುದಿಲ್ಲ. ಅವು ಬ್ಯಾಟರಿ ಚಾರ್ಜನ್ನು ನುಂಗಿ ಹಾಕುತ್ತಿರುತ್ತವೆ. ಮ್ಯಾನೇಜ್ ಅಪ್ಲಿಕೇಷನ್ಸ್ ವಿಭಾಗದಲ್ಲಿ “ರನ್ನಿಂಗ್’ ಎಂಬ ಇನ್ನೊಂದು ವಿಭಾಗ ಇರುತ್ತದೆ. ಮೊಬೈಲಿನಲ್ಲಿ ರನ್ ಆಗುತ್ತಿರುವ ಆ್ಯಪ್‌ಗ್ಳನ್ನು ಅಲ್ಲಿ ನೋಡಬಹುದು. ನಿಮಗೆ ಗೊತ್ತಿಲ್ಲದೆ ಯಾವುದಾದರೂ ಆ್ಯಪ್ ರನ್ ಆಗುತ್ತಿದ್ದರೆ ಅವನ್ನು “ಸ್ಟಾಪ್’ ಅಥವಾ “ಫೋರ್ಸ್ ಸ್ಟಾಪ್’ ಎಂಬ ಆಯ್ಕೆಗಳ ಮೂಲಕ ನಿಲ್ಲಿಸಬಹುದು.
Advertisement
2. ಹೆಚ್ಚು ಹೆಚ್ಚು ಚಾರ್ಜ್ ಮಾಡಿಈಗಿನ ಹೊಸ ಟ್ರೆಂಡ್ ಎಂದರೆ “ಫಾಸ್ಟ್ ಚಾರ್ಜಿಂಗ್’. ಕೆಲವೇ ನಿಮಿಷಗಳಲ್ಲಿ ಮುಕ್ಕಾಲು ಭಾಗ ಚಾರ್ಜ್, ಕೆಲವೇ ನಿಮಿಷ ಚಾರ್ಜ್ ಮಾಡಿದರೆ ನಾಲ್ಕೈದು ಗಂಟೆಗಳ ಕಾಲ ಚಾರ್ಜ್ ಉಳಿಯುತ್ತದೆ ಎಂಬಿತ್ಯಾದಿ ಆಕರ್ಷಕ ಹೇಳಿಕೆಗಳನ್ನು ಸಂಸ್ಥೆಗಳ ಜಾಹೀರಾತುಗಳಲ್ಲಿ ನೋಡಿರಬಹುದು. ಆದರೆ ಅಸಲಿ ವಿಚಾರವೆಂದರೆ, ಮೊಬೈಲನ್ನು ಕೆಲವೇ ಸಮಯ ಚಾರ್ಜ್ ಮಾಡುವುದರಿಂದ ಬ್ಯಾಟರಿಯ ಕಾರ್ಯಕ್ಷಮತೆ ಕುಗ್ಗುತ್ತದೆ. ಬ್ಯಾಟರಿಯ ಸಂಪೂರ್ಣ ಸಾಮರ್ಥ್ಯದ ಬಳಕೆ ಸಾಧ್ಯವಾಗುವುದು ಅದನ್ನು ಆಗಾಗ್ಗೆ ಪೂರ್ತಿಯಾಗಿ ಚಾರ್ಜ್ ಮಾಡುತ್ತಿದ್ದರೆ ಮಾತ್ರ.
ಮೊಬೈಲು ಓವರ್‌ಹೀಟ್ ಆಗುತ್ತಿದ್ದರೆ, ಅದನ್ನು ಜೇಬಿನಲ್ಲಿ ಇಟ್ಟುಕೊಂಡಾತನಿಗೆ ಮಾತ್ರವೇ ಕಷ್ಟವಲ್ಲ. ಏಕೆಂದರೆ ಲೀಥಿಯಂ ಐಯಾನ್ ಬ್ಯಾಟರಿ ಶಾಖಕ್ಕೆ ಪ್ರತಿಕ್ರಿಯಿಸುತ್ತದೆ. ಶಾಖ ಹೆಚ್ಚಿದಂತೆ ಬ್ಯಾಟರಿ ಚಾರ್ಜನ್ನು ಹಿಡಿದಿಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ. ಹೀಗಾಗಿ ಫೋನು ಓವರ್‌ಹೀಟ್ ಆಗದಂತೆ ನೋಡಿಕೊಳ್ಳಬೇಕು. 4. ಆಟೋ ಬ್ರೈಟ್‌ನೆಸ್ ಬಳಸದಿರಿ
ನಮಗೆ ಅಟೋಮ್ಯಾಟಿಕ್ ಎನ್ನುವ ಪದದ ಜೊತೆ ಅದೇನೋ ವ್ಯಾಮೋಹ. ಹೀಗಾಗಿ ಅಟೋಮ್ಯಾಟಿಕ್ ಎಂಬ ಹೆಸರನ್ನು ಹೊತ್ತ ಯಾವುದೇ ತಂತ್ರಜ್ಞಾನ ನಮಗೆ ಅತ್ಯಾಕರ್ಷಕವಾಗಿ ಕಾಣುವುದು. ಆದರೆ ಅವುಗಳಲ್ಲಿ ಎಲ್ಲವೂ ಒಳ್ಳೆಯದೇ ಆಗಿರುವುದಿಲ್ಲ. ಉದಾಹರಣೆಗೆ “ಆಟೋ ಬ್ರೈಟ್‌ನೆಸ್’ ಸವಲತ್ತು. ಇದು ಸ್ಕ್ರೀನ್‌ನ ಬ್ರೈಟ್‌ನೆಸ್‌ಅನ್ನು ಹೊರಗಿನ ಬೆಳಕಿಗೆ ತಕ್ಕಂತೆ ಆಟೋಮ್ಯಾಟಿಕ್ ಆಗಿ ಸೆಟ್ ಮಾಡುವುದು. ಆದರೆ ಸಾಮಾನ್ಯವಾಗಿ ಆಟೋ ಬ್ರೈಟ್‌ನೆಸ್ ಬಳಕೆದಾರನಿಗೆ ಬೇಕಿರುವುದಕ್ಕಿಂತ ಹೆಚ್ಚಿನ ಬೆಳಕನ್ನು ನೀಡುವುದು. ಹೀಗಾಗಿ ಅದನ್ನು ಬಳಸದಿರುವುದೇ ಉತ್ತಮ.
Related Articles
ಸ್ಮಾರ್ಟ್‌ಫೋನುಗಳಲ್ಲಿ ಹಲವು ಮೋಡ್‌ಗಳಿರುತ್ತವೆ. ಪರ್ಫಾರ್ಮೆನ್ಸ್ ಮೋಡ್, ಬ್ಯಾಲೆನ್ಸ್‌ಡ್ ಮೋಡ್ ಮತ್ತು ಪವರ್ ಸೇವಿಂಗ್ ಮೋಡ್.
ಇದರಲ್ಲಿ ಮೊದಲನೆಯದು ಸ್ಮಾರ್ಟ್‌ಫೋನಿನ ಕಾರ್ಯಕ್ಷಮತೆಗೆ ಹೆಚ್ಚು ಗಮನ ನೀಡುತ್ತದೆ. ಪರ್ಫಾಮೆನ್ಸ್ ಮುಖ್ಯ ಎನ್ನುವವರಿಗಾಗಿ ಈ ಮೋಡ್. ಇದರಿಂದ ಬ್ಯಾಟರಿ ಚಾರ್ಜ್ ಬೇಗ ಖಾಲಿಯಾಗುತ್ತದೆ. ಬ್ಲಾಲೆನ್ಸ್‌ಡ್ ಪರ್ಪಾಮೆನ್ಸ್ ಮತ್ತು ಬ್ಯಾಟರಿ ಇವೆರಡರ ನಡುವೆ ಸಮತೋಲನ ಕಾಯ್ದುಕೊಂಡು ಕೆಲಸ ಮಾಡುವ ಮೋಡ್. ಬ್ಯಾಟರಿ ಸೇವಿಂಗ್ ಮೋಡ್ ಫೋನಿನ ಕಾರ್ಯಕ್ಷಮತೆಯನ್ನು ನಿಧಾನಗೊಳಿಸುತ್ತದೆ. ಆದರೆ, ಬ್ಯಾಟರಿ ಚಾರ್ಜ್‌ಅನ್ನು ಉಳಿಸುತ್ತದೆ. ಅದೇ ಇದರ ಕೆಲಸ. ಹೀಗಾಗಿ ಬ್ಯಾಟರಿ ಚಾರ್ಜ್ ದೀರ್ಘ ಕಾಲ ಬರಬೇಕು ಎನ್ನುವವರು ಈ ಮೋಡನ್ನು ಆರಿಸಿಕೊಳ್ಳುವುದು ಸೂಕ್ತ.
Advertisement