Advertisement

ಕಸಿವಿಸಿ…ಅಳುಕು… ಆತಂಕ ಕಡಿಮೆ ಮಾಡಿಕೊಳ್ಳಲು 5 ಸುಲಭ ವಿಧಾನಗಳು

04:10 PM Sep 10, 2022 | Team Udayavani |

ಕಸಿವಿಸಿ, ಅಳುಕು, ಬೆವರುವುದು ಇವುಗಳೆಲ್ಲವೂ ಆತಂಕದ ಲಕ್ಷಣಗಳಾಗಿವೆ. ಆತಂಕದಿಂದ ಬರುವ ಅಸ್ವಸ್ಥತೆ ತುಂಬಾ ಕಷ್ಟಕರವಾಗುತ್ತದೆ. ಅತಿಯಾದ ಹೊಟ್ಟೆನೋವು, ಹೃದಯಬಡಿತ ಹೆಚ್ಚಳದಿಂದ ಉದ್ವಿಗ್ನತೆ, ಆತಂಕ ತಲೆದೋರುತ್ತದೆ.ಆತಂಕ ಎಂಬುದು ಮಾನಸಿಕ ಸಮಸ್ಯೆಗೆ ಸಂಬಂಧಿಸಿದ್ದಲ್ಲ. ಇದು ಪರಿಸ್ಥಿತಿಗೆ ಹೊಂದಿಕೊಂಡು, ವ್ಯಕ್ತಿಯಿಂದ, ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆತಂಕವನ್ನು ನೀವು ಹೇಗೆ ಭಾವಿಸಿಕೊಳ್ಳುತ್ತೀರಿ ಎಂಬುದು ದೊಡ್ಡ ವಿಷಯವಲ್ಲ, ಇದು ಕಾಳಜಿಯ ಮತ್ತು ಪರಿಗಣನೆಯ ವಿಷಯವಾಗಿದೆ.

Advertisement

ನಿರಂತರ ಧ್ಯಾನ, ದೈಹಿಕ ಚಟುವಟಿಕೆ, ಹೊರಗೆ ಕಾಲ ಕಳೆಯುವುದು ಅಥವಾ ಆಹಾರ ಪದ್ಧತಿ ಸೇರಿದಂತೆ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ತಂದುಕೊಳ್ಳುವ ಮೂಲಕ ಆತಂಕವನ್ನು ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ.

ಆತಂಕ ಕಡಿಮೆ ಮಾಡಿಕೊಳ್ಳಲು 5 ಸುಲಭ ವಿಧಾನಗಳು:

1)ದೀರ್ಘ ಉಸಿರಾಟ ಸಹಕಾರಿ: ನಾವು ತಳಮಳಕ್ಕೊಳಗಾದ ಸಂದರ್ಭದಲ್ಲಿ ನಮ್ಮ ಉಸಿರಾಟ ಪ್ರಕ್ರಿಯೆ ವೇಗವಾಗಿರುತ್ತದೆ. ದೇಹದ ವಿಶ್ರಾಂತಿ ಪ್ರತಿಕ್ರಿಯೆ ಪ್ರೇರೇಪಿಸುವ ಸಂದರ್ಭದಲ್ಲಿ ನಮ್ಮ ಹೃದಯದ ಬಡಿತ ಮತ್ತು ರಕ್ತದ ಒತ್ತಡ ಕಡಿಮೆಯಾಗಿರುತ್ತದೆ. ಈ ಸಂದರ್ಭದಲ್ಲಿ ಕೆಲವು ದೀರ್ಘವಾದ ಉಸಿರನ್ನು ಎಳೆದುಕೊಳ್ಳುವ ಮೂಲಕ ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು.

2)ವಾಕಿಂಗ್: ಆತಂಕ ನಿವಾರಣೆಗೆ ಅತ್ಯುತ್ತಮ ವಿಧಾನಗಳಲ್ಲಿ ಇದು ಕೂಡಾ ಒಂದು. ಅಲ್ಪಾವಧಿಯ ಮತ್ತು ದೀರ್ಘಾವಧಿಯ ವ್ಯಾಯಾಮ ಉತ್ತಮವಾದದ್ದು, ಅದೇ ರೀತಿ ನಮ್ಮ ಚಿಂತೆಗಳನ್ನು ದೂರ ಮಾಡಲು ವಾಕಿಂಗ್ ಅತ್ಯುತ್ತಮವಾದದ್ದು.

Advertisement

3)ಗಮನ ಬೇರೆಡೆಗೆ ಹರಿಸಿ: ನಿಮ್ಮ ಮನಸ್ಸನ್ನು ಘಾಸಿಗೊಳಿಸುವ ಅಥವಾ ನೋವು ನೀಡುವ ಯಾವುದೇ ವಿಚಾರ ಎದುರಿಸುವ ಸಂದರ್ಭ ಬಂದಾಗ ಗಮನವನ್ನು ಬೇರೆ ವಿಷಯಗಳತ್ತ ಹೊರಳಿಸಿ. ತಂಪಾದ ನೀರಿನೊಳಗೆ ಕೈಗಳನ್ನು ಇರಿಸುವುದು, ಬಣ್ಣ ಹಚ್ಚುವುದು, ಪೇಪರ್ ನಲ್ಲಿ ಚಿತ್ರ ಬಿಡಿಸುವುದು ಹೀಗೆ ನಿಮ್ಮ ಗಮನ ಬೇರೆಡೆ ಸೆಳೆಯುವ ಮೂಲಕ ಆತಂಕ ಕಡಿಮೆ ಮಾಡಿಕೊಳ್ಳಬಹುದು.

4) ಒಳ್ಳೆಯ ನಿದ್ದೆ: ಆತಂಕ ಕಡಿಮೆಯಾಗಲು ಒಬ್ಬ ವ್ಯಕ್ತಿ ದಿನಕ್ಕೆ 7ರಿಂದ 9ಗಂಟೆಗಳ ಕಾಲ ಉತ್ತಮವಾಗಿ ನಿದ್ದೆ ಮಾಡಬೇಕು. ನಿದ್ರಾಹೀನತೆ ಕೂಡಾ ಆತಂಕ ಹೆಚ್ಚಾಗಲು ಕಾರಣವಾಗುತ್ತದೆ.

5) ಪ್ರಕೃತಿಯಲ್ಲಿ ಸಮಯ ಕಳೆಯಿರಿ: ನಾವು ಹೊರಗೆ ತಿರುಗಾಟದಲ್ಲಿದ್ದಾಗ ನಮ್ಮನ್ನು ಚಿಂತೆ ಹೆಚ್ಚು ಆವರಿಸಿಕೊಂಡಿರುವುದಿಲ್ಲ. ಆ ನಿಟ್ಟಿನಲ್ಲಿ ಪ್ರಕೃತಿಯಲ್ಲಿ ಹೆಚ್ಚು ಸಮಯ ಕಳೆಯುವುದು ಉತ್ತಮ, ಈ ಸಂದರ್ಭದಲ್ಲಿ ನಮ್ಮ ಹೃದಯ ಬಡಿತ, ರಕ್ತದ ಒತ್ತಡ, ನಮ್ಮ ಮಾನಸಿಕ ಒತ್ತಡ ಎಲ್ಲವೂ ಒಂದೇ ತೆರನಾಗಿರಲು ನೆರವಾಗಿರುತ್ತದೆ.

ಒಂದು ವೇಳೆ ಆತಂಕ ಹೆಚ್ಚಳವಾಗಿದ್ದು, ಇದಕ್ಕೆ ವೈದ್ಯರ ಟ್ರೀಟ್ ಮೆಂಟ್ ಅಗತ್ಯವಿದ್ದರೆ ನಿಮ್ಮ ವೈದ್ಯರ ಜೊತೆ ಮಾತುಕತೆ ನಡೆಸಿ ಚಿಕಿತ್ಸೆ ಪಡೆಯಿರಿ.

Advertisement

Udayavani is now on Telegram. Click here to join our channel and stay updated with the latest news.

Next