Advertisement
ಏಪ್ರಿಲ್ 1ರಿಂದ ಯಾವೆಲ್ಲಾ ನಿಯಮಗಳು ಬದಲಾವಣೆ ಆಗಲಿವೆ.? ನಿಮ್ಮ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಲಿವೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Related Articles
Advertisement
ಇಪಿಎಫ್ ನೌಕರರ ಅನುಕೂಲಕ್ಕಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಏಪ್ರಿಲ್ 1 ರಿಂದ ಆಗಲಿರುವ ಈ ಬದಲಾವಣೆಯಿಂದ ಒಂದು ತಿಂಗಳಲ್ಲಿ 2 ಲಕ್ಷ ಅಥವಾ ಕಡಿಮೆ ಆದಾಯ ಗಳಿಸುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಐಟಿಆರ್ ಟಿಡಿಎಸ್ ಏನ್ ಕಥೆ..?
ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವುದರಿಂದ, 2021ರ ಬಜೆಟ್ ನಲ್ಲಿ ಹೆಚ್ಚು ಟಿಡಿಎಸ್ ಅಥವಾ ಟಿಸಿಎಸ್ ವಿಧಿಸುವ 206ಎಬಿ ಮತ್ತು 206ಸಿಸಿಎ ಎಂಬ ಎರಡು ವಿಭಾಗಗಳನ್ನು ಇನ್ ಕಮ್ ಟ್ಯಾಕ್ಸ್ ಆ್ಯಕ್ಟ್ ನಲ್ಲಿ ಸೇರಿಸಲು ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪ ಮಂಡಿಸಿದ್ದಾರೆ.
75 ವರ್ಷ ಮೇಲ್ಪಟ್ಟವರಿಗೆ ರಿಲೀಫ್ :
ಈ ಭಾರಿಯ ಬಜೆಟ್ ನಲ್ಲಿ 75 ವರ್ಷ ಮೇಲ್ಪಟ್ಟ ವೃದ್ಧರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಹಿರಿಯರ ಮೇಲಿನ ಅನುಸರಣೆಯ ಹೊರೆಯನ್ನು ಕಡಿಮೆ ಮಾಡುವ ಕಾರಣದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಐಟಿಆರ್ ಸಲ್ಲಿಸುವುದರಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದ್ದರು.
ಹಿರಿಯರ ಆದಾಯ ಬೇರೆಯೇನಾದರೂ ಇದ್ದರೆ, ಅವರು ಐ ಟಿ ಆರ್ ಫೈಲ್ ಮಾಡಬೇಕು.
ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ ನಮೂನೆಗಳನ್ನು ಬಗ್ಗೆ ಏನಿದೆ..?
ಏಪ್ರಿಲ್ 1ರಿಂದ ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ ಅರ್ಜಿಯಲ್ಲಿ ನಲ್ಲಿ ಸಾಕಷ್ಟು ಮಾಹಿತಿಗಳನ್ನು ತುಂಬಬೇಕಿದೆ. ತೆರಿಗೆದಾರರ ಸಂಬಳ, ತೆರಿಗೆ ಪಾವತಿ, ಟಿಡಿಎಸ್ ಮುಂತಾದ ಮಾಹಿತಿಗಳು ಈಗಾಗಲೇ ಐಟಿಆರ್ ರೂಪದಲ್ಲಿ ಲಭ್ಯವಿದ್ದು, ಇದು ಅನುಸರಣೆಯ ಹೊರೆಯನ್ನು ಕಡಿಮೆ ಮಾಡುತ್ತದೆ. ಈಗ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್, ಡಿವಿಡೆಂಡ್ ಆದಾಯ ಮತ್ತು ಬ್ಯಾಂಕ್ ಗಳಿಂದ ಬರುವ ಬಡ್ಡಿ, ಅಂಚೆ ಕಚೇರಿಯ ಮಾಹಿತಿಯನ್ನೂ ತೆರಿಗೆದಾರರ ಪಟ್ಟಿಮಾಡಿದ ಭದ್ರತೆಗಳಿಂದ ಮುಂಚಿತವಾಗಿ ಭರ್ತಿ ಮಾಡಲಾಗುತ್ತದೆ. ಇದರ ಕಾರಣದಿಂದಾಗಿ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಇನ್ಮುಂದೆ ಸುಲಭವಾಗಲಿದೆ.
ಎಲ್ ಟಿ ಸಿ ಗೆ ರಿಲೀಫ್ :
ಕೋವಿಡ್ ಮತ್ತು ಲಾಕ್ ಡೌನ್ ನಿಂದಾಗಿ, ಸರ್ಕಾರಿ ನೌಕರರು ಲೀವ್ ಟ್ರಾವೆಲ್ ಕನ್ಸಿಶನ್ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿಲ್ಲ, ಎಲ್ ಟಿ ಸಿ ಗೆ ನಗದು ಭತ್ಯೆಯ ಮೇಲೆ ತೆರಿಗೆ ವಿನಾಯಿತಿ ಯನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
ಇನ್ನು, ಎಲ್ ಟಿ ಸಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಹಿಂದೆ Udayavani.com ವಿಸ್ತೃತ ವರದಿಯನ್ನು ಮಾಡಿತ್ತು.
ಓದಿ : ಬಿಜೆಪಿಯ ಬೆಂಬಲದಿಂದಾಗಿ ನಮ್ಮ ಸರ್ಕಾರ ಸುಸೂತ್ರವಾಗಿ ಅಧಿಕಾರ ನಡೆಸುತ್ತಿದೆ : ಪಳನಿಸ್ವಾಮಿ