Advertisement

ನಾಡಹಬ್ಬ ದಸರಾ ಉತ್ಸವಕ್ಕೆ 5 ಹೊಸ ಆನೆಗಳು

01:58 PM Jul 18, 2022 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆಈ ಬಾರಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 15 ಆನೆಗಳನ್ನು ಕರೆತರಲು ನಿರ್ಧರಿಸಿದ್ದು, ಈಗಾಗಲೇ 20 ಆನೆಗಳ ಪಟ್ಟಿ ಸಿದ್ಧಪಡಿಸಲಾಗಿದೆ.

Advertisement

ಕೊರೊನಾ ಹಿನ್ನೆಲೆ ಕಳೆದೆರೆಡು ವರ್ಷಗಳಿಂದ ಅರಮನೆ ಆವರಣಕ್ಕೆ ಸೀಮಿತವಾಗಿದ್ದ ನಾಡಹಬ್ಬಮೈಸೂರು ದಸರಾವನ್ನು ಈ ಬಾರಿ ಅದ್ಧೂರಿಯಾಗಿ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಅದಕ್ಕಾಗಿ ಈ ಬಾರಿ ಎರಡು ತಿಂಗಳು ಮುಂಚೆಯೇ ಗಜಪಡೆಯನ್ನು ಮೈಸೂರಿಗೆ ಕರೆತಂದು ಎಲ್ಲಾ ಹಂತದ ತಾಲೀಮುನಡೆಸಲು ಮೈಸೂರು, ಚಾಮರಾಜನಗರ ಹಾಗೂಕೊಡಗು ಜಿಲ್ಲೆಯಲ್ಲಿರುವ ಆನೆ ಶಿಬಿರಗಳಿಗೆ ಅರಣ್ಯಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ 20 ಆನೆಗಳ ಪಟ್ಟಿಯನ್ನು ಸಿದ್ಧಪಡಿಸಿದೆ.

ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಪ್ರಮುಖಆನೆಗಳ ಶಿಬಿರಗಳಾದ ಮತ್ತಿಗೋಡು, ಆನೆಕಾಡು,ದುಬಾರೆ, ದೊಡ್ಡಹರವೆ, ಬಳ್ಳೆ ಹಾಗೂ ಬಂಡೀಪುರ ಅರಣ್ಯದಲ್ಲಿನ ರಾಮಾಪುರ ಆನೆ ಶಿಬಿರಗಳಿಗೆ ಭೇಟಿನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ತಂಡ 30 ಆನೆಗಳ ಆರೋಗ್ಯ ಸ್ಥಿತಿಗತಿ, ಅವುಗಳ ನಡವಳಿಕೆ ಹಾಗೂ ಪಟಾಕಿ ಸಿಡಿಸಿ ಶಬ್ಧಕ್ಕೆ ಬೆದರುವ ಬಗ್ಗೆ ಪರಿಶೀಲಿಸಿದ್ದಾರೆ.

ಈ 30 ಆನೆಗಳ ಪೈಕಿ 20 ಆನೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಇಂದು ಸರ್ಕಾರಕ್ಕೆ ಪಟ್ಟಿಯನ್ನು ಕಳಿಸಿಕೊಡಲಿದ್ದಾರೆ. ನಾಳೆ (ಜು.19) ಬೆಂಗಳೂರಿನಲ್ಲಿಸಿಎಂ ನೇತೃತ್ವದಲ್ಲಿ ನಡೆಯಲಿರುವ ದಸರಾ ಉನ್ನತಸಮಿತಿ ಸಭೆಯಲ್ಲಿ ವನ್ಯಜೀವಿ ವಿಭಾಗದ ಪಿಸಿಸಿಎಫ್ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ 15 ಆನೆಗಳನ್ನು ಅಂತಿಮಗೊಳಿಸಲಿದ್ದಾರೆ.

ಎರಡು ತಿಂಗಳು ತಾಲೀಮು: ಎರಡು ವರ್ಷಗಳಿಂದ ಜಂಬೂ ಸವಾರಿ ನಡೆಯದ ಹಿನ್ನೆಲೆ ದಸರಾ ಆನೆಗಳಿಗೆ ಅಭ್ಯಾಸ ತಪ್ಪಿದಂತಾಗಿದ್ದು, ಅದಕ್ಕಾಗಿ ವಿಜಯದಶಮಿಯಂದು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಜಂಬೂ ಸವಾರಿಯಲ್ಲಿ ಯಾವುದೇಗೊಂದಲ ನಿರ್ಮಾಣವಾಗದಂತೆ ಗಜಪಡೆಗೆ ಸೂಕ್ತರೀತಿಯ ತರಬೇತಿ ನೀಡಲು ಎರಡು ತಿಂಗಳು ಮುಂಚಿತವಾಗಿ 2 ಹಂತದಲ್ಲಿ ಆನೆಗಳನ್ನು ಕರೆತರಲಾಗುತ್ತಿದೆ.

Advertisement

ಮೊದಲ ಹಂತದಲ್ಲಿ ಪ್ರಮುಖ ಆನೆಗಳನ್ನು ಗಜಪಯಣದ ಮೂಲಕ ಕರೆತಂದರೆ, ಉಳಿದ ಆನೆಗಳನ್ನು ವಾರದ ಬಳಿಕ ಕರೆತಂದು ಒಣ ತಾಲೀಮು, ಮರದ ಅಂಬಾರಿ ಹೊರುವ ಹಾಗೂ ಭಾರ ಹೊರವ ತಾಲೀಮು ನಡೆಸಲಾಗುತ್ತದೆ. ಇದರ ಜೊತೆ ಜೊತೆಗೆ ಪ್ರತಿವಾರ ಸಿಡಿಮದ್ದು ತಾಲೀಮು ನಡೆಸಿ ದಸರಾ ಉತ್ಸವಕ್ಕೆ ಸಂಪೂರ್ಣವಾಗಿ ಅಣಿಗೊಳಿಸಲಾಗುತ್ತದೆ.

5 ಹೊಸ ಆನೆಗಳು: ಈ ಬಾರಿಯ ದಸರಾ ಉತ್ಸವಕ್ಕೆ 5 ಹೊಸ ಆನೆಗಳನ್ನು ಕರೆ ತರಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ದುಬಾರೆ ಮತ್ತು ಮತ್ತಿಗೋಡು ಆನೆಶಿಬಿರದಿಂದ ಗಣೇಶ, ಮಹೇಂದ್ರ, ಭೀಮ, ಸುಗ್ರೀವಹಾಗೂ ಅಜೇಯ ಆನೆಯನ್ನು ಕರೆ ತರುವ ನಿರೀಕ್ಷೆಇದೆ. ಈ ಮೂಲಕ ದಸರಾ ಉತ್ಸವಕ್ಕೆ 2ನೇ ಹಂತದಆನೆಗಳನ್ನು ಅಣಿಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಒಟ್ಟಾರೆ ಆಗಸ್ಟ್‌ ಮೊದಲ ವಾರದಲ್ಲಿ ಗಜಪಯಣ ನಡೆಸಿ, 14ರಿಂದ 15 ಆನೆಗಳನ್ನು ಕರೆತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಇವುಗಳಲ್ಲಿ ವಿಜಯ,ಕಾವೇರಿ, ಚೈತ್ರ, ಲಕ್ಷ್ಮೀ ಹೆಣ್ಣಾನೆಗಳು ಭಾಗವಹಿಸುವುದು ನಿಚ್ಚಳವಾಗಿದ್ದು, ಅಂಬಾರಿ ಆನೆ ಅಭಿಮನ್ಯು,ಅರ್ಜುನ, ಅಶ್ವತ್ಥಾಮ, ವಿಕ್ರಮ, ಧನಂಜಯ,ಗೋಪಾಲಸ್ವಾಮಿ ಆನೆಗಳು ಭಾಗವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಎರಡು ಹಂತದಲ್ಲಿ 14ರಿಂದ 15 ಆನೆಗಳನ್ನು ದಸರಾ ಉತ್ಸವಕ್ಕೆ ಕರೆತರಲು ನಿರ್ಧರಿಸಲಾಗಿದ್ದು, ಅದಕ್ಕಾಗಿ 20 ಆನೆಗಳ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳಿಸಿ ಕೊಡಲಾಗಿದೆ. ಅಲ್ಲಿ ಪಟ್ಟಿ ಅಂತಿಮ ವಾದಬಳಿಕ ಮೈಸೂರಿನಲ್ಲಿ ಎಪಿಸಿಸಿಎಫ್ ನೇತೃತ್ವದಲ್ಲಿ ಸಭೆ ನಡೆಸಿ ಆನೆಗಳನ್ನು ಕರೆತರುತ್ತೇವೆ. – ಡಾ.ವಿ. ಕರಿಕಾಳನ್‌, ಡಿಸಿಎಫ್ ಮೈಸೂರು

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next