ಗಾಜಾ: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಬೆಲೆಯನ್ನು ಗಾಜಾದ ನಾಗರಿಕರು ತೆರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಅಲ್ಲದೆ ಲಕ್ಷಾಂತರ ಜನರು ತೊಂದರೆಗೊಳಗಾಗಿದ್ದಾರೆ.
ಗಾಜಾದಲ್ಲಿ ಯುದ್ಧದಿಂದ ಬಳಲುತ್ತಿರುವ ನಾಗರಿಕರಿಗೆ ಏರ್‌ಡ್ರಾಪ್ ಮೂಲಕ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ. ಆದರೆ ಶುಕ್ರವಾರ ದುರಂತವೊಂದು ಸಂಭವಿಸಿದೆ, ಏರ್‌ಡ್ರಾಪ್ ಮೂಲಕ ನಾಗರಿಕರಿಗೆ ಪ್ಯಾರಾಚೂಟ್ ಮೂಲಕ ಪರಿಹಾರ ಪೊಟ್ಟಣ ಕಳುಹಿಸುವ ವೇಳೆ ಪ್ಯಾರಾಚೂಟ್ ವಿಫಲಗೊಂಡು ಪರಿಹಾರಕ್ಕಾಗಿ ಕಾಯುತ್ತಿದ್ದ ನಾಗರಿಕರ ತಲೆಗಳ ಮೇಲೆ ಪರಿಹಾರ ಪೊಟ್ಟಣಗಳು ಬಿದ್ದು ಐವರು ಮೃತಪಟ್ಟು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಗಾಜಾ ನಗರದ ಶತಿ ನಿರಾಶ್ರಿತರ ಶಿಬಿರದ ಬಳಿ ನಾಗರಿಕರು ಪರಿಹಾರದ ಪ್ಯಾಕೇಜ್‌ಗಳಿಗಾಗಿ ಸರದಿಯಲ್ಲಿ ನಿಂತಿದ್ದಾಗ ಈ ಅವಘಡ ಸಂಭವಿಸಿದೆ.
ಗಾಜಾ ಸರ್ಕಾರಿ ಮಾಧ್ಯಮ ಕಚೇರಿಯು ಸಾವುನೋವುಗಳ ಸಂಖ್ಯೆಯನ್ನು ದೃಢಪಡಿಸಿದೆ ಮತ್ತು ಏರ್‌ಡ್ರಾಪ್‌ಗಳನ್ನು ನಿಷ್ಪ್ರಯೋಜಕ ಎಂದು ಹೇಳಿದೆ. ಈ ಏರ್‌ಡ್ರಾಪ್‌ಗಳು ಕೇವಲ ಪ್ರಚಾರವೇ ಹೊರತು ಮಾನವೀಯ ಸೇವೆಯಲ್ಲ ಎಂದು ಅದು ಹೇಳಿದೆ. ಇದರೊಂದಿಗೆ ಭೂ ಗಡಿಯ ಮೂಲಕ ಆಹಾರ ಮತ್ತಿತರ ಸಾಮಗ್ರಿಗಳನ್ನು ಒದಗಿಸುವಂತೆ ಮನವಿ ಮಾಡಿದೆ. ಇದು ಗಾಜಾ ಪಟ್ಟಿಯ ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ನಾವು ಈಗಾಗಲೇ ಎಚ್ಚರಿಸಿದ್ದೇವೆ ಮತ್ತು ಅದು ಸಂಭವಿಸಿದೆ ಎಂದು ಮಾಧ್ಯಮ ಕಚೇರಿ ಹೊರಡಿಸಿದ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: Mysore: ಮಾರಕಾಸ್ತ್ರಗಳಿಂದ ಕೊಚ್ಚಿ ನಗರ ಪಾಲಿಕೆ ಮಾಜಿ ಸದಸ್ಯನ ಸಹೋದರನ ಬರ್ಬರ ಹತ್ಯೆ