Advertisement

5 ಲಕ್ಷ ರೂ. ಪರಿಹಾರಧನ ಚೆಕ್‌ ವಿತರಣೆ

05:20 PM Apr 09, 2022 | Team Udayavani |

ಭಾಲ್ಕಿ: ವಿದ್ಯುತ್‌ ಪ್ರವಹಿಸಿ ಮೃತಪಟ್ಟ ಶಿವಣಿ ಗ್ರಾಮದ ದೇವಿದಾಸ ಕುಟುಂಬಕ್ಕೆ ಶಾಸಕ ಈಶ್ವರ ಖಂಡ್ರೆ 5 ಲಕ್ಷ ರೂ. ಪರಿಹಾರ ಧನದ ಚೆಕ್‌ ವಿತರಿಸಿದರು.

Advertisement

ಪಟ್ಟಣದಲ್ಲಿ ಜೆಸ್ಕಾಂ ಇಲಾಖೆ ವತಿಯಿಂದ ಮಂಜೂರಾದ 5 ಲಕ್ಷ ರೂ. ಚೆಕ್‌ನ್ನು ಮೃತ ದೇವಿದಾಸ ಅವರ ಪತ್ನಿ ಸವಿತಾ ಅವರಿಗೆ ವಿತರಿಸಿ ಮಾತನಾಡಿದ ಶಾಸಕ ಖಂಡ್ರೆ, ದೇವಿದಾಸ ಎಂಬುವರು 2021ರ ಜು.11ರಂದು ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದ್ದರು. ಮೃತರ ಕುಟುಂಬ ತೀರ ಬಡತನದಿಂದ ಕೂಡಿದ್ದರಿಂದ ಜೆಸ್ಕಾಂ ಇಲಾಖೆ ಮೇಲೆ ಒತ್ತಡ ತಂದು ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿದ್ದೇನೆ. ಪರಿಹಾರಧನ ಮಕ್ಕಳ ಶೈಕ್ಷಣಿಕ ಕಾರ್ಯಕ್ಕೆ ಸೇರಿ ಮತ್ತಿತರ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಈ ವೇಳೆ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಹಣಮಂತರಾವ್‌ ಚವ್ಹಾಣ, ಜೆಸ್ಕಾಂ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next