ಕೆ.ಆರ್.ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುಗೆ ಪ್ರಾರ್ಥಿಸಿ ಅಂಬರೀಶ್ ಅಭಿಮಾನಿಯೋರ್ವ ಶನಿವಾರ 5 ಕಿ.ಮೀ. ಉರುಳು ಸೇವೆ ನಡೆಸಿ ಗಮನ ಸೆಳೆದರು.
ಪಟ್ಟಣದ ಆಂಜನೇಯ ಬಡಾವಣೆಯ ನಾಗೇಂದ್ರ ಪುತ್ರ ಬೆನಕಪ್ರಸಾದ್ (23 ) ಮುಂಜಾನೆಯಿಂದ ಮಧ್ಯಾಹ್ನದವರೆಗೆ ಉರಿ ಬಿಸಿಲನ್ನು ಲೆಕ್ಕಿಸದೆ ಉರುಳು ಸೇವೆ ನಡೆಸಿದರು.
ಮುಂಜಾನೆ 4 ಗಂಟೆಗೆ ಇಲ್ಲಿನ ಆಂಜನೇಯ ಬಡಾವಣೆಯ ಹನುಮಂತನ ದೇವಾಲಯದಿಂದ ಉರುಳು ಸೇವೆ ಆರಂಭಿಸಿದ ಬೆನಕಪ್ರಸಾದ್ ಕಂಠೇನಹಳ್ಳಿ, ಮೂಡಲಕೊಪ್ಪಲು, ಹಳೆ ರೈಲು ನಿಲ್ದಾಣದ ರಸ್ತೆಯ ಮೂಲಕ ಪಟ್ಟಣದ ಹೊರ ವಲಯದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಉರುಳು ಸೇವೆ ನಡೆಸಿ ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಅಂಬರೀಶ್ ಅಭಿಮಾನಿಗಳು ಮತ್ತು ಸುಮಲತಾ ಬೆಂಬಲಿಗರು ಬೆನಕಪ್ರಸಾದ್‌ಗೆ ಉರುಳು ಸೇವೆ ಮಾಡಲು ಸಹಕಾರ ನೀಡಿದರಲ್ಲದೇ ಪಕ್ಷೇತರ ಅಭ್ಯರ್ಥಿ ಪರವಾಗಿ ಜಯಕಾರ ಕೂಗಿದರು.
ಅಂಬರೀಶ್ ಅಭಿಮಾನಿ ಉರುಳು ಸೇವೆ ಮಾಡುತ್ತಿರುವುದನ್ನು ನೋಡಲು ನೂರಾರು ಮಂದಿ ಆಗಮಿದ್ದರು. ವಿನೋದ್, ಸುಮಂತ್, ನಾಗು, ಪುನೀತ್, ಭರತ್, ಬಂಕು ಮತ್ತಿತರರು ಉಪಸ್ಥಿತರಿದ್ದರು.