Advertisement

ಸೆ.30ರಿಂದ 5 ದಿನ ಮಹಿಳಾ-ಮಕ್ಕಳ ದಸರಾ

09:16 PM Sep 23, 2019 | Team Udayavani |

ಮೈಸೂರು: ಸೆ.30ರಿಂದ ಅ.4ರವರೆಗೆ ಜೀವಣ್ಣರಾಯನ ಕಟ್ಟೆ ಮೈದಾನದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ನಡೆಯಲಿದ್ದು, 5 ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಪ್ರೇಮ್‌ಕುಮಾರ್‌ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.30ರಂದು ಬೆಳಗ್ಗೆ 7.30 ರಿಂದ 9.30ರವರೆಗೆ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಚಿತ್ತಾರ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಬೆಳಗ್ಗೆ 11ಗಂಟೆಗೆ ಜೆ.ಕೆ.ಮೈದಾನದಲ್ಲಿ ಮಹಿಳಾ ದಸರಾ ಉದ್ಯಮ ಸಂಭ್ರಮ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸಚಿವರು ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಬಾಲಕಿಯರ ಬಾಲ ಮಂದಿರದ ಮಕ್ಕಳಿಂದ ಡೊಳ್ಳು ಕುಣಿತ ಮತ್ತು ಕಂಸಾಳೆ, ಬಾಲಕರ ಬಾಲಮಂದಿರದ ಮಕ್ಕಳಿಂದ ಯಕ್ಷಗಾನ ಕಾರ್ಯಕ್ರಮ ಹಾಗೂ ಜಿಲ್ಲಾ ಜವಾಹರ ಬಾಲಭವನದ ಮಕ್ಕಳಿಂದ ಪರಿಸರ ಸಂರಕ್ಷಣೆ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 3 ರಿಂದ 6 ಗಂಟೆವರೆಗೆ ರಸಮಂಜರಿ ಕಾರ್ಯಕ್ರಮ, ಸಂಜೆ 6ರಿಂದ ರಾತ್ರಿ 8ಗಂಟೆವರೆಗೆ ಭರತನಾಟ್ಯ ನಡೆಯಲಿದೆ.

ಚಿಣ್ಣರ ದಸರಾ: ಅ.2ರಂದು ಅಂಗನವಾಡಿ ಮಕ್ಕಳಿಂದ ಚಿಣ್ಣರ ದಸರಾ ಹಾಗೂ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 4ರಿಂದ ರಾತ್ರಿ 8ಗಂಟೆವರೆಗೆ ನಕ್ಷತ್ರ ಫೌಂಡೇಷನ್‌ನ ಮಕ್ಕಳಿಂದ ನಮ್ಮ ಕನಸು ಕಿರು ನಾಟಕ. ಹಕ್ಕಿ ಕಲರವ ಮಿಮಿಕ್ರಿ ಕಾರ್ಯಕ್ರಮ. ಸರಿಗಮಪ ಖ್ಯಾತಿಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಬಿಗ್‌ಬಾಸ್‌ ಖ್ಯಾತಿಯ ಸುಮಾ ರಾಜಕುಮಾರ್‌ ಅವರಿಂದ ಮಾತನಾಡುವ ಗೊಂಬೆ ಕಾರ್ಯಕ್ರಮ.

Advertisement

ಪ್ರತಿಭಾ ಪ್ರದರ್ಶನ: ಅ.3ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷಚೇತನ ಮಕ್ಕಳಿಂದ ಪ್ರತಿಭಾ ಪ್ರದರ್ಶನ, ಪದವಿ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕುರಿತು ಚಿತ್ರಕಲಾ ಸ್ಪರ್ಧೆ. ಮಧ್ಯಾಹ್ನ 3 ರಿಂದ ಸಂಜೆ 5ಗಂಟೆವರೆಗೆ ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳು, ಸಂಜೆ 5ರಿಂದ 6ಗಂಟೆವರೆಗೆ ಸಮರ್ಥನಂ ಅಂಗವಿಕಲರ ಸಂಸ್ಥೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6ರಿಂದ ರಾತ್ರಿ 8ಗಂಟೆವರೆಗೆ 18 ವರ್ಷ ಮೇಲ್ಪಟ್ಟ ವಿಶೇಷ ಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಅ.4ರಂದು ಬೆಳಗ್ಗೆ 10 ರಿಂದ ಸಂಜೆ 4ಗಂಟೆವರೆಗೆ ಕಿರುತೆರೆಯ ಒಗ್ಗರಣೆ ಡಬ್ಬಿ ಕಾರ್ಯಕ್ರಮ ಖ್ಯಾತಿಯ ಮುರಳಿ ನೇತೃತ್ವದಲ್ಲಿ ಸವಿರುಚಿ ಒಲೆ ರಹಿತ ಅಡುಗೆ ಸ್ಪರ್ಧೆ, ಚುಟುಕು ಹಾಸ್ಯ ಸ್ಪರ್ಧೆ ಹಾಗೂ ದಂಪತಿಗಳ ಸ್ಪರ್ಧೆ. ಸಂಜೆ 4 ರಿಂದ 6ಗಂಟೆವರೆಗೆ ಮಿಮಿಕ್ರಿ ಕಲಾವಿದ ಗೋಪಿ ಅವರಿಂದ ಮಿಮಿಕ್ರಿ. ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು. ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ವಿದ್ಯಾ ಅರಸ್‌, ಉಪಾಧ್ಯಕ್ಷರುಗಳಾದ ಅನ್ನಪೂರ್ಣ, ಟಿ.ಎನ್‌.ಶಾಂತ, ರತ್ನ ಲಕ್ಷ್ಮಣ್‌, ಕಾರ್ಯಾಧ್ಯಕ್ಷೆ ಕೆ.ಪದ್ಮ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಮಹಿಳೆಯರಿಂದ ವಿಭಿನ್ನ, ಆಕರ್ಷಕ ಕಾರ್ಯಕ್ರಮ: ಅ.1ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸುವ ಮಹಿಳೆಯರಿಂದ ಜಾನಪದ ಸಿರಿ ಜಾನಪದ ನೃತ್ಯ ಕಾರ್ಯಕ್ರಮ. ಮಧ್ಯಾಹ್ನ 2 ರಿಂದ ಸಂಜೆ 5ಗಂಟೆವರೆಗೆ ಮಹಿಳೆಯರಿಂದ ಜಾನಪದ ಗೀತೆ ಸಮೂಹ ನೃತ್ಯ ಸ್ಪರ್ಧೆ, ಚಲನಚಿತ್ರಗೀತೆ ಸಮೂಹ ನೃತ್ಯ ಸ್ಪರ್ಧೆ, ಸಪ್ತಪದಿ ಸಾಂಪ್ರದಾಯಿಕ ವಧು-ವರರ ಉಡುಗೆಯ ಫ್ಯಾಷನ್‌ ಶೋ ಸ್ಪರ್ಧೆ. ಬಾಂಧವ್ಯ ತಾಯಿ-ಮಗಳ ಫ್ಯಾಷನ್‌ ಶೋ ಸ್ಪರ್ಧೆ. ಸಂಜೆ 5ರಿಂದ 6ಗಂಟೆವರೆಗೆ ಪೌರಾಣಿಕ ನಾಟಕ ಮತ್ತು ನೃತ್ಯ ರೂಪಕ. ಸಂಜೆ 6ರಿಂದ ರಾತ್ರಿ 8ಗಂಟೆವರೆಗೆ ಜನಪದ ನೃತ್ಯ ಮತ್ತು ಗುಂಪು ಗಾಯನ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next