ಮೈಸೂರು: ಕಾವೇರಿ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಜು.14 ರಿಂದ 18ರವರೆಗೆ ಮೋಡ ಕವಿದ ವಾತಾವರವಿದೆ.
9ರಿಂದ 11 ಮಿ.ಮೀ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೊಡಗು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಈ ಐದು ದಿನಗಳಲ್ಲಿ 60 ರಿಂದ 90 ಮಿ.ಮೀ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಂಡ್ಯ ಜಿಲ್ಲೆಯಲ್ಲೂ ಮೋಡ ಕವಿದ ವಾತಾವರಣವಿದ್ದು, 10ರಿಂದ 15 ಮಿ.ಮೀ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಚಾಮರಾಜನಗರ ಜಿಲ್ಲೆಯಲ್ಲಿ 2 ರಿಂದ 5 ಮಿ.ಮೀ ವರೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ರೈತರಿಗೆ ಸಲಹೆ: ರೈತರು ಜುಲೈ ತಿಂಗಳಿನ 3 ಮತ್ತು 4ನೇ ವಾರದಲ್ಲಿ ಬಿತ್ತನೆ ಮಾಡುಬಹುದಾದ ಬೆಳೆಗಳು ಮತ್ತು ತಳಿಗಳನ್ನು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗ ಶಿಫಾರಸು ಮಾಡಿದ್ದು, ಭತ್ತ: ಎಂ.ಟಿ. ಯು -1010,ರಾಶಿ . ರಾಗಿ: ಇಂಡಾಫ್-5 9, ಎಂ.ಆರ್.-6, ಜಿ.ಪಿ.ಯು-2866, ಕೆ.ಎಂ.ಆರ್-301. ಜುಲೈ ತಿಂಗಳಲಿ ತೊಗರಿ ಬಿತ್ತನೆ ಮಾಡುವ ರೈತರು 2-3 ಅಡಿ ಅಂತರದ ಸಾಲುಗಳನ್ನು ಮಾಡಿ, ಸಾಲಿನಲಿ ಗಿಡದಿಂದ ಗಿಡಕ್ಕೆ ಅರ್ಧ ಅಡಿ ಅಂತರ ವಿರುವಂತೆ ಬೀಜವನ್ನು ಒಂದು ಅಂಗುಲಕ್ಕಿಂತ ಹೆಚ್ಚಿನ ಆಳಕ್ಕೆ ಬೀಳದಂತೆ ಬಿತ್ತನೆ ಮಾಡಬೇಕು.
ಜಾನುವಾರಗಳು, ಕೋಳಿ ಮತ್ತು ರೇಷ್ಮೆ ಹುಳು ಸಾಕಾಣಿಕೆ ಕೇಂದ್ರಗಳಲಿ ಸರಿಯಾದ ಉಷ್ಣಾಂಶವನ್ನು ಕಾಪಾಡಿಕೊಳ್ಳಬೇಕು ಎರೆಹುಳು ಕೃಷಿ ಮಾಡುವವರು ಎರೆಕುಣಿಗಳಲ್ಲಿ ಎರೆಗೊಬ್ಬರ ಉತ್ಪಾದನೆ ಯಾಗುವವರೆಗೆ ಶೇ.60ರಿಂದ 70ರಷು r ತೇವಾಂಶ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮ: ಎಲ ಜಾನುವಾರುಗಳಿಗೆ ಜಂತು ನಾಶಕ ಔಷಧಿ ಹಾಗೂ ಕಾಲು ಮತ್ತು ಬಾಯಿ ಬೇನೆ, ಚೆಪ್ಪೆ ಬೇನೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಚುಚ್ಚುಮದ್ದನ್ನು ಹಾಕಿಸಬೇಕು. ಅಲಸಂದೆ, ಉದ್ದು ಮತ್ತು ಹೆಸರು ಬೆಳೆಗಳಿಗೆ ಹಳದಿ ನಂಜು ರೋಗ ಕಂಡು ಬಂದಿದ್ದು, ಇದನ್ನು ಹರಡುವ ಸಸ್ಯ ಹೇನಿನ ಹತೋಟಿಗೆ ಔಷಧಿಯನ್ನು ಸಿಂಪಡಿಸಬೇಕು. ರೋಗಗ್ರಸ್ತ ಗಿಡಗಳನ್ನು ಕಿತ್ತು ನಾಶಪಡಿಸಬೇಕು ಎಂದು ನಾಗನಹಳ್ಳಿ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಪಿ. ಪ್ರಕಾಶ್ ತಿಳಿಸಿದ್ದಾರೆ.