Advertisement

Haryana: ಕಾಂಗ್ರೆಸ್‌ ಶಾಸಕನ ಮನೆಯಲ್ಲಿ 5 ಕೋ.ರೂ., 5 ಕೆ.ಜಿ. ಚಿನ್ನ ಪತ್ತೆ!

12:50 AM Jan 06, 2024 | Team Udayavani |

ಚಂಡೀಗಢ: ಒಡಿಶಾದಲ್ಲಿ ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಧೀರಜ್‌ ಸಾಹು ಮನೆ, ಕಚೇರಿಗಳ ಮೇಲಿನ ಇ.ಡಿ. ದಾಳಿ ವೇಳೆ 300 ಕೋಟಿ ರೂ. ನಗದು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಈಗ ಹರಿಯಾಣದ ಕಾಂಗ್ರೆಸ್‌ ಶಾಸಕರೊಬ್ಬರ ಮನೆ ಮೇಲಿನ ದಾಳಿಯೂ ಭಾರೀ ಸುದ್ದಿ ಮಾಡಿದೆ.

Advertisement

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಹರಿಯಾಣದ ಕಾಂಗ್ರೆಸ್‌ ಶಾಸಕ ಸುರೇಂದರ್‌ ಪನ್ವಾರ್‌ ಮತ್ತು ಇಂಡಿಯನ್‌ ನ್ಯಾಶನಲ್‌ ಲೋಕ ದಳ (ಐಎನ್‌ಎಲ್‌ಡಿ) ಮಾಜಿ ಶಾಸಕ ದಿಲ್ಭಾಗ್‌ ಸಿಂಗ್‌ ಅವರಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ. ಈ ವೇಳೆ 5 ಕೋಟಿ ರೂ. ನಗದು, 100ಕ್ಕೂ ಹೆಚ್ಚು ಬಾಟಲ್‌ ಮದ್ಯ, ಅಕ್ರಮವಾಗಿ ಸಂಗ್ರಹಿಸಿದ್ದ ವಿದೇಶಿ ಬಂದೂಕುಗಳು, ಸುಮಾರು 300 ಗುಂಡುಗಳು ಮತ್ತು ಸುಮಾರು 5 ಕೆ.ಜಿ. ತೂಕದ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದೆ.

ದಿಲ್ಭಾಗ್‌ ಸಿಂಗ್‌ ಯುಮುನಾನಗರ ಕ್ಷೇತ್ರದ ಮಾಜಿ ಶಾಸಕರಾಗಿದ್ದು, ಪನ್ವಾರ್‌ ಅವರು ಸೋನಿಪತ್‌ ಕ್ಷೇತ್ರದ ಶಾಸಕರಾಗಿದ್ದಾರೆ. ಇವರಿಬ್ಬರು ಹಾಗೂ ಇವರ ಸಹಚರರಿಗೆ ಸೇರಿದ 20 ಸ್ಥಳಗಳ ಮೇಲೆ ಇ.ಡಿ. ದಾಳಿ ನಡೆಸಿದೆ. ಗುತ್ತಿಗೆ ಅವಧಿ ಪೂರ್ಣಗೊಂಡು, ಗಣಿಗಾರಿಕೆ ನಡೆಸದಂತೆ ನ್ಯಾಯಾಲಯದ ಆದೇಶವಿದ್ದರೂ ಯಮುನಾನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಜಲ್ಲಿ ಮತ್ತು ಮರಳು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕುರಿತು ಹರಿಯಾಣ ಪೊಲೀಸರು ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವುಗಳನ್ನು ಆಧರಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಇ.ಡಿ. ಪ್ರಕರಣ ದಾಖಲಿಸಿದ್ದು, ಇದರ ಭಾಗವಾಗಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next