ಕೋಲ್ಕತಾ: ಉಸಿರಾಟದ ಸೋಂಕಿನಿಂದ ಒಂದೇ ದಿನ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ವಿವಿಧ ಆಸ್ಪತ್ರೆಯಲ್ಲಿ ಐವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಅರೋಗ್ಯಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸೋಂಕಿನ ಕಾರಣದಿಂದ ಮಕ್ಕಳು ಮೃತಪಟ್ಟಿದ್ದಾರೆಯೇ ಎಂಬುದು ವೈದ್ಯರಿಗೆ ಇನ್ನೂ ಖಾತ್ರಿಯಿಲ್ಲ.
ಮಕ್ಕಳಲ್ಲಿ ಅಡೆನೊವೈರಸ್ ಸಾಮಾನ್ಯವಾಗಿ ಉಸಿರಾಟ ಮತ್ತು ಕರುಳಿನ ನಾಳಗಳಲ್ಲಿ ಸೋಂಕು ಉಂಟು ಮಾಡುತ್ತದೆ. ಎರಡು ವರ್ಷದೊಳಗಿನ ಮಕ್ಕಳು ಈ ಸೋಂಕಿಗೆ ತುತ್ತಾಗುವುದು ಹೆಚ್ಚು. 10 ವರ್ಷದೊಳಗಿನ ಮಕ್ಕಳಲ್ಲೂ ಸೋಂಕು ತಗಲುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. “ಎಲ್ಲಾ ಐದು ಮಕ್ಕಳು ನ್ಯೂಮೋನಿಯಾ ಕಾರಣದಿಂದ ಮೃತಪಟ್ಟಿದ್ದಾರೆ. ಇದೇ ವೇಳೆ 9 ತಿಂಗಳ ಮಗುವೊಂದು ಮೃತಪಟ್ಟಿದೆ.