Advertisement
1. ಕಬ್ಬನ್ ಪಾರ್ಕ್ಎಲ್ಲೆಲ್ಲೂ ದಟ್ಟ ಹಸಿರು ಹಾಸು. ಅರಣ್ಯದ ನಡುವೆ ನಿಂತು, ಮದ್ವೆ ಜೋಡಿಯೂ ಹಕ್ಕಿಯಾದಂಥ ಅನುಭವ ಇಲ್ಲಾಗುತ್ತೆ. ಮಳೆಗಾಲದಲ್ಲಿ ಮುಂಜಾನೆ ಸೂರ್ಯ ಹುಟ್ಟುವ ಮುನ್ನ ಇಲ್ಲಿ ವಾತಾವರಣ ಅತಿಮಧುರ. ಚಳಿಗಾಲದಲ್ಲಂತೂ ಬೀಳುವ ಹಿಮ, ತೊಟ್ಟಿಕ್ಕುವ ಇಬ್ಬನಿಗಳ ನಡುವೆ ಮಾಡುವ ಫೋಟೋಗ್ರಫಿಯ ಸೊಗಸೇ ಬೇರೆ. ಫೋಟೋಗಳೂ ಅಷ್ಟೇ ಮುದ್ದಾಗಿ ಬರುತ್ತವೆ. ನಿಧಾನವಾಗಿ ಸೂರ್ಯನ ಕಿರಣಗಳು ಆ ಹಿಮದ ಮೇಲೆ ಬೀಳುವಾಗ ಉಂಟಾಗುವ ಬೆಳಕಿನ ಅಲೆಗಳು, ಇವುಗಳನ್ನೆಲ್ಲ ಹಿನ್ನೆಲೆಯಾಗಿ, ನೇರವಾಗಿ ಬಳಸಿಕೊಂಡು ಪ್ರೀವೆಡ್ಡಿಂಗ್ ಫೋಟೋಗ್ರಫಿಯನ್ನು ಅದ್ಭುತವಾಗಿ ಕ್ಲಿಕ್ಕಿಸಬಹುದು.
ಗಮನಿಸಿ: ಇಲ್ಲಿ ಪರವಾನಗಿಯ ಅವಶ್ಯಕತೆ ಇಲ್ಲ. ಭಾನುವಾರ ಇಲ್ಲವೇ ಬೇರಾವುದೇ ರಜಾ ದಿನಗಳಲ್ಲಿ ಇಲ್ಲಿ ವೆಡ್ಡಿಂಗ್ ಫೋಟೋಗ್ರಫಿ ಇಟ್ಟುಕೊಳ್ಳದಿರಿ.
ಸುಂದರ ಕೆರೆ, ಅಲ್ಲಿ ತೇಲುವ ಹಂಸಗಳು, ಅದಾರಚೆಯ ದಡದ ಹಸಿರನ್ನೊಳಗೊಂಡ ಲಾಲ್‌ಬಾಗ್ ಕೂಡ ವೆಡ್ಡಿಂಗ್ ಫೋಟೋಗ್ರಫಿಗೆ ಲವಲವಿಕೆಯ ತಾಣ. ಎಚ್‌ಎಂಟಿಯ ಗಡಿಯಾರದ ಮುಂದೆ ನಿಂತು, ಚಲಿಸುವ ಬದುಕಿನ ಚಿತ್ರ ಸೆರೆಹಿಡಿಯಬಹುದು. ನಗುವ ಹೂವುಗಳ ನಡುವೆ ನವದಂಪತಿಯೂ ಹೂವಾಗಿ ಮಗುಳು ಬಿರಿಯುವ ಆ ಅಂದವೇ ಅದ್ಭುತ. ಹಸಿರೆಲೆಗಳು ತೋರಣ ಹಿನ್ನೆಲೆ ಫೋಟೋಗ್ರಫಿಗೆ ಬೋನಸ್. ಹಸಿರ ಮರಗಳ ನಡುವೆ ತೂರಿ ಬರುವ ಬೆಳ್ಳಿಕಿರಣಗಳು ಮಂತ್ರಾಕ್ಷತೆಯಂತೆ ಭಾಸವಾಗುತ್ತದೆ. ನಿಸರ್ಗದ ನೆರಳು- ಬೆಳಕಿನ ಆಟ, ಫೋಟೋಗ್ರಫಿಗೆ ಅನುಕೂಲಕಾರಿ.
ಗಮನಿಸಿ: ಲಾಲ್‌ಬಾಗ್‌ನಲ್ಲಿ ದೊಡ್ಡ ಕ್ಯಾಮೆರಾಗಳಿಗೆ ಪ್ರಿವೆಡ್ಡಿಂಗ್ ಫೋಟೋಗ್ರಫಿಯ ಅನುಮತಿ ಪಡೆಯಬೇಕು. ಶಿಫಾರಸು ಪತ್ರವಿರಬೇಕು. ನಿಗದಿಪಡಿಸಿದ ಶುಲ್ಕ ಪಾವತಿಸಬೇಕು. 3. ನಂದಿಬೆಟ್ಟ
ಬೆಂಗಳೂರಿನಿಂದ ತುಸು ದೂರ ಇರುವ ಇಲ್ಲಿ ಜನರ ಓಡಾಟ ಅಷ್ಟೊಂದಿರುವುದಿಲ್ಲ. ಹೇರ್‌ಪಿನ್ ರಸ್ತೆಗಳಲ್ಲಿ ಜೋಡಿ ವಾಕ್ ಮಾಡುವ, ಸನ್‌ಸೆಟ್ ವೀಕ್ಷಣಾ ಮಂದಿರದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಸೊಗಸೇ ಬೇರೆ. ಚಳಿಗಾಲದಲ್ಲಿ ಈ ರಸ್ತೆಗಳು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮೇಲೆ ಮಂಜು ಆವರಿಸಿದಂತೆ ತೋರುವುದರಿಂದ ತಾಜಾ ಫೋಟೋಗಳನ್ನು ನಿರೀಕ್ಷಿಸಬಹುದು. ಇಲ್ಲಿನ ಬಿದಿರಿನ ಮನೆಗಳಲ್ಲೂ ಅದ್ಭುತ ಸೌಂದರ್ಯವನ್ನು ಸೆರೆಹಿಡಿಯಬಹುದು. ಬಂಡೆಕಲ್ಲುಗಳ ಮೇಲೆ ನಿಂತೂ ಜೋಡಿ ನಗುವನ್ನು ಹೊಮ್ಮಿಸಬಹುದು.
ಗಮನಿಸಿ: ಇಲ್ಲೂ ಈಗ ಪರವಾನಗಿ ಪತ್ರ ಕಡ್ಡಾಯ. ನಿಗದಿತ ಶುಲ್ಕ ಪಾವತಿಸಬೇಕು. ಕೋತಿಗಳ ಕಾಟ ಜಾಸ್ತಿ ಇರುವುದರಿಂದ, ನಿಮ್ಮ ಎಚ್ಚರದಲ್ಲಿನ ನೀವಿರಬೇಕು.
Related Articles
ಇನ್ನು ಪ್ರೈವೇಸಿಗೆ ಹೆಚ್ಚು ಒತ್ತುಕೊಡುವ ಮಂದಿಗೆ ಬೆಂಗಳೂರು ಸುತ್ತಮುತ್ತಲಿನ ರೆಸಾರ್ಟ್‌ಗಳು ಅತ್ಯುತ್ತಮ ಆಯ್ಕೆ. ಇಲ್ಲಿ ಜನರ ಓಡಾಟವೂ ಅಷ್ಟೊಂದಿರುವುದಿಲ್ಲ. ರೆಸಾರ್ಟ್ ಫೋಟೋಶೂಟ್ ಕೂಡ ಈಗ ಟ್ರೆಂಡ್ ಆಗುತ್ತಿದೆ. ನೆಲಮಂಗಲ ರಸ್ತೆಯಲ್ಲಿರುವ ಗೋಲ್ಡನ್ ಪಾಮ್ ರೆಸಾರ್ಟ್, ದೊಡ್ಡ ಬಳ್ಳಾಪುರ ರಸ್ತೆಯರುವ ಅಂಗಾÕನ ರೆಸಾರ್ಟ್, ರಾಮನಗರ ರಸ್ತೆಯಲ್ಲಿನ ವೈನ್ ರೆಸಾರ್ಟ್‌ಗಳಲ್ಲೂ ವಾತಾವರಣ, ಲೈಟಿಂಗ್ಸ್ ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ.
ಗಮನಿಸಿ: ಇದು ದುಬಾರಿ ಆಯ್ಕೆ.
Advertisement
5. ಹಳ್ಳಿಗಳುಹೆಸರಘಟ್ಟ ಕೆರೆಯನ್ನು ದಾಟಿ ಮುಂದೆ ಸಿಗುವ ಹಳ್ಳಿಯ ಸುತ್ತಮುತ್ತಲ ಹೊಲ ಗದ್ದೆಗಳ ಹಸಿರು ತಾಣಗಳು ಕೂಡ ಪ್ರೀವೆಡ್ಡಿಂಗ್ ಫೋಟೋಗ್ರಫಿಗೆ ಅನುಕೂಲಕಾರಿ. ಅಲ್ಲದೆ, ಮಾಗಡಿ ರಸ್ತೆಯಿಂದ ತಾವರೆಕೆರೆಗೆ ಹೋಗುವಾಗ ಕೊಮ್ಮಘಟ್ಟದ ಸುತ್ತಮುತ್ತ ಇರುವ ಒಂದೆರಡು ಕೆರೆಗಳು, ಹಾಗೆ ಮುಂದೆ ಸಾಗಿದರೆ ಸಿಗುವ ಹೊಲಗದ್ದೆಗಳು, ತೆಂಗಿನ ತೋಪುಗಳು- ಇಲ್ಲೂ ಫೋಟೋಶೂಟ್ ಮಾಡಿಸಿಕೊಳ್ಳಬಹುದು. ದೊಡª ಬಳ್ಳಾಪುರ ರಸ್ತೆಯಲ್ಲಿ ಸಾಗಿದರೆ ಮಾಕಳಿದುರ್ಗ ಊರಿನ ಸುತ್ತಮುತ್ತ ಇರುವ ಬೆಟ್ಟಗಳು, ಅಲ್ಲಲ್ಲಿ ಸಿಗುವ ದೊಡ್ಡ ಚಿಕ್ಕ ಕೆರೆಗಳ ಹಿನ್ನೆಲೆ, ಅಲ್ಲಿನ ಹೊಲ, ಗದ್ದೆಗಳಲ್ಲಿ ಸೂರ್ಯಕಾಂತಿ, ಸೇವಂತಿಗೆ ಇತ್ಯಾದಿ ಹೂವುಗಳನ್ನು ಬೆಳೆಯುತ್ತಾರೆ. ಈ ಹಿನ್ನೆಲೆಗಳು ಪ್ರಶಸ್ತವಾಗಿವೆ. ಇನ್ನು ಘಾಟಿ ಸುಬ್ರಮಣ್ಯ ದೇಗುಲದ ಸಮೀಪವೂ ರಮಣೀಯ ತಾಣಗಳಿವೆ. ಗಮನಿಸಿ: ಕಡಿಮೆ ಖರ್ಚು ತಗುಲುತ್ತದೆ. ಈ ಪ್ರದೇಶಗಳ ಬಗ್ಗೆ ಅರಿವಿರುವ ಫೋಟೋಗ್ರಾಫರ್‌ಗಳನ್ನೇ ಆಯ್ದುಕೊಳ್ಳಿ.