Advertisement

ಸ್ಯಾಮ್‌ ಸಂಗ್‌ ಒಪೆರಾ ಹೌಸ್‌ನಲ್ಲಿ ವಿಶಿಷ್ಟವಾಗಿ ನಡೆದ 4ನೇ ವಾರ್ಷಿಕೋತ್ಸವ

06:46 PM Sep 15, 2022 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ 2018 ರಲ್ಲಿ ಆರಂಭವಾದ ಸ್ಯಾಮ್‌ಸಂಗ್‌ನ ಎಕ್ಸ್ ಪೀರಿಯನ್ಸ್‌ ಸೆಂಟರ್‌ ಆದ, “ಸ್ಯಾಮ್‌ಸಂಗ್‌ ಒಪೆರಾ ಹೌಸ್‌ “ ತನ್ನ ನಾಲ್ಕನೇ ವರ್ಷವನ್ನು ಆಚರಿಸಿಕೊಳ್ಳುತ್ತಿದೆ.

Advertisement

ಇದರ ಅಂಗವಾಗಿ ವಾರ್ಷಿಕೋತ್ಸವದ ವಾರಾಂತ್ಯದಲ್ಲಿ ಸ್ಯಾಮ್‌ಸಂಗ್‌ ಒಪೆರಾ ಹೌಸ್ ಆಕರ್ಷಕ ಕೆ-ಫಿಯೆಸ್ಟಾ ಎಂಬ ಕೊರಿಯನ್‌ ಪಾಪ್‌ ಥೀಮ್‌ ಸಾಂಸ್ಕೃತಿಕ ಮತ್ತು ಸಂಗೀತ ಹಬ್ಬವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ನೂರಾರು ಯುವ ಕೆ ಪಾಪ್‌ ಅಭಿಮಾನಿಗಳು ಬೆಂಗಳೂರಿನ ವಿವಿಧ ಶಾಲಾ ಕಾಲೇಜುಗಳಿಂದ ಭಾಗವಹಿಸಿದ್ದರು. ಸ್ಯಾಮ್‌ಸಂಗ್‌ ಸದಸ್ಯರೂ ಇದರಲ್ಲಿ ಜೊತೆಯಾಗಿ ಭಾರತೀಯ ಕೆ-ಪಾಪ್ ಬ್ಯಾಂಡ್‌ ಜೊತೆಗೆ ಕೆ-ಪಾಪ್‌ ಹಾಡುಗಳಿಗೆ ಹೆಜ್ಜೆ ಹಾಕಿದರು. ಕೆ-ಪಾಪ್‌ ಕಾನ್ಸರ್ಟ್‌ ಸ್ಕ್ರೀನಿಂಗ್‌ಗಳು, ಸಿನಿಮಾ ಸ್ಕ್ರೀನಿಂಗ್‌, ಡ್ಯಾನ್ಸ್‌ ಕಾರ್ಯಕ್ರಮಗಳು, ಕಾಸ್‌ಪ್ಲೇ ಸ್ಫರ್ಧೆ ಮತ್ತು ಆಕರ್ಷಕ ಕೊರಿಯನ್ ತಿನಿಸು ಕಾರ್ಯಾಗಾರ ನಡೆಯಿತು.

ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿನಿ ಫ್ಲೀ ಮಾರ್ಕೆಟ್ ಇತ್ತು. ಇದರಲ್ಲಿ ಕೆ-ಮೆರ್ಚ್‌, ಕೆ-ಫುಡ್‌, ಕೆ-ಬ್ಯೂಟಿ ಮತ್ತು ಹ್ಯಾನ್‌ಬಾಕ್ (ಸಾಂಪ್ರದಾಯಿಕ ಕೊರಿಯನ್ ಬಟ್ಟೆಗಳು) ಟ್ರಯಲ್ ಸ್ಟಾಲ್‌ಗಳು ಇದ್ದವು. ಎರಡು ದಿನದ ಕಾರ್ಯಕ್ರಮದಲ್ಲಿ 5,000 ಕ್ಕೂಹೆಚ್ಚು ಸ್ಯಾಮ್‌ಸಂಗ್ ಮತ್ತು ಕೆ-ಪಾಪ್‌ ಅಭಿಮಾನಿಗಳು ಹಾಜರಾಗಿದ್ದರು.

ಭಾರತದಲ್ಲಿ ಕೆ-ಪಾಪ್‌ ಮತ್ತು ಕೆ-ಡ್ರಾಮ್‌ ಅಭಿಮಾನಿಗಳ ವೇದಿಕೆಯಾಗಿರುವ ಟೀಮ್‌ ಇಂಡ್‌ಹಾಂಗುಲ್‌ ಸಮುದಾಯವು ಸ್ಯಾಮ್‌ಸಂಗ್‌ ಒಪೆರಾ ಹೌಸ್ ಸಹಭಾಗಿತ್ವದಲ್ಲಿ ಪ್ರತಿಭಾ ಶೋಧ ಸ್ಫರ್ಧೆ “ಪುಟ್ ಯುವರ್ ಸ್ನೀಕರ್ಸ್‌ ಆನ್‌” ಅನ್ನು ಆಯೋಜಿಸಿತ್ತು. ಇದರಲ್ಲಿ ಟೀಮ್ ಡ್ಯಾನ್ಸ್‌, ಸೋಲೋ ಡ್ಯಾನ್ಸ್‌ ಮತ್ತು ವೋಕಲ್ಸ್‌ ಹಾಗೂ ಕೆ-ಪಾಪ್‌ ಫ್ಯಾನ್‌ಗಳಿಗೆ ಹಲವು ಆಟಗಳು ಇದ್ದವು.

ಈ ಎರಡು ದಿನದ ಕಾರ್ಯಕ್ರಮವು ಕೊರಿಯನ್ ಸಂಸ್ಕೃತಿಯ ಆಚರಣೆಯಷ್ಟೇ ಅಲ್ಲ,  ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನ ಸಂಭ್ರಮಾಚರಣೆಯೂ ಆಗಿತ್ತು. ಸ್ಯಾಮ್‌ಸಂಗ್‌ ಒಪೆರಾ ಹೌಸ್ ಎಂಬುದು ಒಂದು ಯುವ ತಲೆಮಾರಿನವರಿಗೆ ಕೇಂದ್ರವಾಗಿದ್ದು, ಇಲ್ಲಿ ಹೊಸ ಐಡಿಯಾಗಳನ್ನು ಹಂಚಿಕೊಳ್ಳುವ, ಸಂಪರ್ಕ ಸಾಧಿಸುವ ಕಲಿಯುವ ತಾಣವಾಗಿದೆ.

Advertisement

ಕಳೆದ ನಾಲ್ಕು ವರ್ಷಗಳಲ್ಲಿ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ 600 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದೆ. ಇದರಲ್ಲಿ ಉತ್ಪನ್ನ ಬಿಡುಗಡೆಗಳು, ಲೈವ್ ಮ್ಯೂಸಿಕ್, ಒಟಿಟಿ ಸಿನಿಮಾ ಪ್ರೀಮಿಯರ್. ಸ್ಯಾಮ್‌ಸಂಗ್‌ನ ಸಿಎಸ್‌ಆರ್‌ ಇನಿಶಿಯೇಟಿವ್ ಆಗಿರುವ ಸಾಲ್ವ್ ಫಾರ್ ಟುಮಾರೋದಲ್ಲಿ ಯುವಕರಿಗೆ ಶಿಕ್ಷಣ ಮತ್ತು ಅನ್ವೇಷಣೆ ಸ್ಫರ್ಧೆಗಳಿರುತ್ತವೆ.

ಸ್ಯಾಮ್‌ಸಂಗ್ ಒಪೆರಾ ಹೌಸ್‌ 1900 ನೇ ಇಸವಿಯ ವಿನ್ಯಾಸದ ನೋಟ  ಹೊಂದಿದೆ. ಒಳಭಾಗದಲ್ಲಿ ಇದು ಆಧುನಿಕ ಲುಕ್ ನೀಡುತ್ತದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು ಮತ್ತು ವೇರಬಲ್‌ ಸಾಧನಗಳ ಜೊತೆಗೆ ಫ್ಲಾಗ್‌ಶಿಪ್‌ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಇದು ಪ್ರದರ್ಶಿಸುತ್ತದೆ. ಇದು ಸಂಪೂರ್ಣ ಕಾರ್ಯನಿರ್ವಹಣೆಯ ಗ್ರಾಹಕ ಸೇವಾ ಕೇಂದ್ರವನ್ನೂ ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next