Advertisement

ಮುಂಬಯಿ: ದಶಕದಲ್ಲಿ  49,000ಕ್ಕಿಂತ ಅಧಿಕ  ಬೆಂಕಿ ಅವಘಡ 

05:31 PM Nov 28, 2018 | Team Udayavani |

ಮುಂಬಯಿ: ಮುಂಬಯಿಯಲ್ಲಿ ಕಳೆದ ಒಂದು ದಶಕದಲ್ಲಿ ಸುಮಾರು 49 ಸಾವಿರಕ್ಕೂ ಅಧಿಕ ಬೆಂಕಿ ದುರ್ಘ‌ಟನೆ ಸಂಭವಿಸಿದ್ದು, ಇದರಲ್ಲಿ 600ಕ್ಕಿಂತ ಅಧಿಕ ಮಂದಿ ಸಾವನ್ನಪ್ಪಿದ್ದಾರೆಂದು  ರಾಜ್ಯ ಸರಕಾರ ತಿಳಿಸಿದೆ.

Advertisement

ವಿಧಾನಸಭೆ ಅಧಿವೇಶದಲ್ಲಿ ನಗರಾಭಿವೃದ್ಧಿ  ರಾಜ್ಯ ಸಚಿವ  ರಣಜಿತ್‌ ಪಾಟೀಲ್‌ ಅವರು ಮಾತನಾಡಿ, 2008ರ ಸಾಲಿನಿಂದ 2018 ರ ನಡುವೆ ಸುಮಾರು 49,391 ಬೆಂಕಿ ದುರ್ಘ‌ಟನೆಗಳು  ನಡೆದಿದೆ.  ಇದರಲ್ಲಿ ವಿದ್ಯುತ್‌ ಸಂಪರ್ಕದಿಂದ  33,946,  ಗ್ಯಾಸ್‌ ಲೀಕೇಜ್‌ ನಿಂದ  14,329 ಬೆಂಕಿ ಅವಘಡಗಳು  ಹಾಗೂ  ಇತರ ಕಾರಣಗಳಿಂದ 1,116 ಬೆಂಕಿ ಅವಘಡಗಳು  ಸಂಭವಿಸಿವೆ ಎಂದು ಹೇಳಿದ್ದಾರೆ. 

ಕಳೆದ ಒಂದು ದಶಕದಲ್ಲಿ  ಬೆಂಕಿ ದುರಂತದಿಂದ ಸುಮಾರು 609 ಮಂದಿ  ಮತ್ತು 7 ಸಿಬಂದಿ  ಸಾವನ್ನಪ್ಪಿದರು. ಈ ದುರಂತದಿಂದ 110.42 ಕೋ. ರೂ. ಗಳಷ್ಟು  ಸಂಪತ್ತುಗಳಿಗೆ  ಹಾನಿ ಉಂಟಾಗಿದೆ.  ಕಳೆದ 10 ವರ್ಷಗಳಲ್ಲಿ ಕೊಳೆಗೇರಿ ಪ್ರದೇಶಗಳ ಜೋಪಡಿಗಳಲ್ಲಿ  3,151 ಬೆಂಕಿ  ಹಬ್ಬಿದ ಘಟನೆ ಸಂಭವಿಸಿದೆ ಎಂದು ಪಾಟೀಲ್‌ ಹೇಳಿದ್ದಾರೆ.

ರೋಹಿಂಗ್ಯಾ ವಾಸವಾಗಿಲ್ಲ: ಬಾಂದ್ರಾ ಪಶ್ಚಿಮದ ನರ್ಗಿಸ್‌ ದತ್ತ ನಗರದಲ್ಲಿಯ ಜೋಪಡಿಗಳಲ್ಲಿ ಬಾಂಗ್ಲಾದೇಶಿ ರೋಹಿಂಗ್ಯಾ ವಾಸವಾಗಿಲ್ಲ ಎಂದು ನಗರಾಭಿವೃದ್ಧಿ ರಾಜ್ಯ ಸಚಿವ  ರಣಜಿತ್‌ ಪಾಟೀಲ್‌ ತಿಳಿಸಿದರು.

ಬಾಂದ್ರಾದ ಜೋಪಡಿ ಪರಿಸರದಲ್ಲಿ ನಿರಂತರವಾಗಿ  ಬೆಂಕಿ  ಅವಘಡಗಳು ಸಂಭವಿಸುತ್ತಿರುವ ಬಗ್ಗೆ  ಎನ್‌ಸಿಪಿ ಯ ಶಾಸಕ ಹೇಮಂತ್‌ ಟಕ್ಲೆ  ಅವರು ಕೇಳಿದ ಪ್ರಶ್ನೆಗೆ  ಉತ್ತರಿಸಿದ ರಣಜಿತ್‌ ಪಾಟೀಲ್‌ ಅವರು, ಬೆಂಕಿ ಹಚ್ಚುವ ಪ್ರಕರಣಗಳಲ್ಲಿ ಅಸಾಮಾಜಿಕ ತತ್ವಗಳ ಕೈವಾಡವಿದೆ.  ಇದರ ತನಿಖೆ ಮಾಡಬೇಕಾಗಿದೆ ಎಂದು ಪಾಟೀಲ್‌  ಹೇಳಿದ್ದಾರೆ.

Advertisement

ಈ ಕ್ಷೇತ್ರದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಜೋಪಡಿಗಳ ಬಗ್ಗೆ ಕಾಂಗ್ರೆಸ್‌ ಶಾಸಕ ಭಾಯಿ ಜಗತಾಪ್‌ ಅವರ ಪ್ರಶ್ನೆಗೆ ಉತ್ತರಿಸಿದ ಪಾಟೀಲ್‌ ಅವರು  ಜೋಪಡಿಗಳ ಮತ್ತೆ ಸರ್ವೆ ನಡೆಸಲಿದೆ. ಅನಧಿಕೃತ ಜೋಪಡಿಗಳ ನಿರ್ಮಾಣದ ವಿರುದ್ಧ ಕಾರ್ಯಾಚರಣೆ ನಡೆಯಲಿದೆ ಎಂದು ನಗರಾಭಿವೃದ್ಧಿ ರಾಜ್ಯ ಸಚಿವ  ರಣಜಿತ್‌ ಪಾಟೀಲ್‌ ತಿಳಿಸಿದರು.

ಪುನರಾಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಈ ಪರಿಸರದಲ್ಲಿ ಯ ಜೋಪಡಿ ನಿವಾಸಿಗಳಿಗೆ ಮನೆ ಒದಗಿಸುವ ಕಾರ್ಯ  ಮ್ಹಾಡಾ ಇಲಾಖೆ ಮಾಡಲಿದೆ. ಅದಕ್ಕೂ ಮೊದಲು ಅನಧಿಕೃತ ರೂಪದಲ್ಲಿ ನಡೆಯುವ ಉದ್ಯೋಗಗಳಿಗೆ  ಸರಕಾರ ತೆರೆ ಎಳೆಯಲಿದೆ ಎಂದು ನಗರಾಭಿವೃದ್ಧಿ ರಾಜ್ಯ ಸಚಿವ  ರಣಜಿತ್‌ ಪಾಟೀಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next