Advertisement

48 ಜನರಿಗೆ ಕೋವಿಡ್ ಸೋಂಕು

07:44 AM Jun 16, 2020 | Suhan S |

ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಾವಿರ ಸಂಖ್ಯೆಗೆ ಸಮೀಪಿಸುತ್ತಿದೆ. ಸೋಮವಾರ ಜಿಲ್ಲೆಯಲ್ಲಿ 48 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೊಂಕಿತರ ಸಂಖ್ಯೆ 944ಕ್ಕೇರಿದೆ. ಸಂಖ್ಯೆ ಹೆಚ್ಚಳವನ್ನು ನೋಡಿದರೆ ಇನ್ನೆರಡು ದಿನದಲ್ಲಿ ಸಾವಿರ ಸಂಖ್ಯೆಗೆ ಬಂದು ತಲುಪುವುದು ನಿಶ್ಚಿತ ಎನ್ನಲಾಗುತ್ತಿದೆ.

Advertisement

ಕಮಲಾಪುರ ಪಟ್ಟಣದಲ್ಲಿ 13 ಹಾಗೂ ಕಮಲಾಪುರ ತಾಲೂಕಿನ ಮರಮಂಚಿ ತಾಂಡಾದಲ್ಲಿ 12 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಅದೇ ರೀತಿ ಕಲಬುರಗಿ ತಾಲೂಕಿನ ಅವರಾದದಲ್ಲಿ ಇಬ್ಬರು ಮಹಿಳೆಯರು-ಇಬ್ಬರು ಪುರುಷರು ಸೇರಿ ನಾಲ್ವರು, ಕಲಹಂಗರಾಗದಲ್ಲಿ ನಾಲ್ವರು ಮಹಿಳೆಯರು, ಹಾಲಸುಲ್ತಾನಪುರ, ಹರಸುರ ತಾಂಡಾ, ಚೇಂಗಟಾ, ಡೊಂಗರಗಾಂವ, ವರನಾಳ, ಬಬಲಾದ, ಮರಗುತ್ತಿ, ನವನಿಹಾಳ, ಹಡಗಿಲ್‌ ಹಾರೂತಿ ಗ್ರಾಮದಲ್ಲಿ ತಲಾ ಒಬ್ಬರಿಗೆ ಕೊರೊನಾ ತಗುಲಿದೆ. ಸೋಮವಾರ ಪತ್ತೆಯಾದ 48 ಸೊಂಕಿತರಲ್ಲಿ 7 ಮಕ್ಕಳು ಸೇರಿದ್ದರೆ, ಒಂದು ಹಾಗೂ ಎರಡು ವರ್ಷದ ಮಕ್ಕಳು ನಾಲ್ಕು ಇದ್ದಾರೆ.

ಬಿಡುಗಡೆ: ಚಿತ್ತಾಪುರ ತಾಲೂಕಿನ 13 ಜನ ಸೇರಿದಂತೆ ಜಿಲ್ಲೆಯ ಒಟ್ಟು 32 ಜನ ಕೋವಿಡ್‌-19 ಸೋಂಕಿನಿಂದ ಗುಣಮುಖರಾಗಿ ಸೋಮವಾರ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ. ಚಿಂಚೋಳಿ ತಾಲೂಕಿನ 5, ಕಾಳಗಿ ತಾಲೂಕಿನ 6, ಚಿತ್ತಾಪುರ ತಾಲೂಕಿನ 13, ಆಳಂದ ತಾಲೂಕಿನ 7 ಹಾಗೂ ಶಹಾಬಾದ್‌ ತಾಲೂಕಿನ ಓರ್ವ ವ್ಯಕ್ತಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಪೀಡಿತ 944 ಜನರಲ್ಲಿ459 ಜನ ಗುಣಮುಖರಾಗಿದ್ದಾರೆ. ಉಳಿದಂತೆ 475 ಸಕ್ರಿಯ ರೋಗಿಗಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next