ನವದಹಲಿ : ದೇಶದಲ್ಲಿ ಈ ವರೆಗೆ ವಿತರಿಸಲಾಗಿರುವ 61 ಕೋಟಿ ಪ್ಯಾನ್‌ಕಾರ್ಡ್‌ಗಳ ಪೈಕಿ, 48 ಕೋಟಿ ಪ್ಯಾನ್‌ಕಾರ್ಡ್‌ಗಳಿಗೆ ಮಾತ್ರ ಆಧಾರ್ ಕಾರ್ಡ್ ಲಿಂಕ್ ಮಾಡಲಾಗಿದೆ.
Advertisement
ಗಡುವು ಮುಗಿಯುವುದರ ಒಳಗೆ ಪ್ಯಾನ್‌ಗೆ ಆಧಾರ್ ಲಿಂಕ್ ಮಾಡದೇ ಹೋದಲ್ಲಿ, ಅಂಥವರಿಗೆ ಉದ್ಯಮಗಳು ಹಾಗೂ ತೆರಿಗೆ ಸಂಬಂಧಿತ ಚಟುವಟಿಕೆ ನಡೆಸಲು ಅವಕಾಶ ಇಲ್ಲ ಎಂದು ಸಿಬಿಡಿಟಿ ಅಧ್ಯಕ್ಷ ನಿತಿನ್ ಗುಪ್ತಾ ತಿಳಿಸಿದ್ದಾರೆ.
ಪ್ಯಾನ್‌ಗೆ ಆಧಾರ್ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದು, ಈ ವರ್ಷ ಮಾ. 31ಕ್ಕೆ ಪ್ರಕ್ರಿಯೆಗೆ ಅಂತಿಮ ಗಡುವು ನೀಡಿದೆ.