Advertisement
ಪುಣೆಯ ಕೋರೇಗಾಂವ್ -ಭೀಮಾ ಹಿಂಸೆಯ ವಿರುದ್ಧ ಮಹಾರಾಷ್ಟ್ರದ ಆದ್ಯಂತ ದಲಿತ ಸಂಘಟನೆಗಳು ನೀಡಿದ ಬಂದ್ ಕರೆಯಲ್ಲಿ ಭುಗಿಲೆದ್ದ ಹಿಂಸೆ, ಸಾರ್ವಜನಿಕ ಸೊತ್ತು ನಾಶ, ನಷ್ಟದಿಂದ ಮುಂಬಯಿ ಸಾಮಾನ್ಯ ಜೀವನ ತೀವ್ರವಾಗಿ ಬಾಧಿತವಾಗಿದೆ.
Related Articles
Advertisement
ಹಾಜಿ ಅಲಿಯಿಂದ ವಾಹನ ಸಂಚಾರವನ್ನು ಮಹಾಲಕ್ಷ್ಮೀ/ಸೇನಾಪತಿ ಬಾಪಟ್ ಮಾರ್ಗವಾಗಿ ತಾತ್ಕಾಲಿಕವಾಗಿ ತಿರುಗಿಸಲಾಗಿದೆ.
ಔರಂಗಾಬಾದ್‌ನಲ್ಲಿ ಪ್ರತಿಭಟನಕಾರರು ವಾಹನಗಳ ಮೇಲೆ ಕಲ್ಲೆಸೆದು ಹಿಂಸೆಯಲ್ಲಿ ತೊಡಗಿಕೊಂಡ ಕಾರಣ ಅಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇಯಲ್ಲಿನ ಅಂಧೇರಿಯಲ್ಲಿ ಇಂದು ಬೆಳಗ್ಗೆ ರಾಸ್ತಾ ರೋಕೋ ನಡೆಸಲಾಗಿತ್ತು. ಹಾಗಿದ್ದರೂ ಅನಂತರ ದಹೀಸರ್ ನಾಕಾ ಮತ್ತು ಆರೇ ಜಂಕ್ಷನ್‌ನಲ್ಲಿ ವಾಹನ ದಟ್ಟನೆಯನ್ನು ತಿಳಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.