ಟೆಕ್ಸಾಸ್: ಸ್ಯಾನ್ ಆಂಟೋನಿಯೊದಲ್ಲಿ ಸೋಮವಾರ ಟ್ರಕ್ ನಲ್ಲಿ 46 ವಲಸಿಗರು ಸತ್ತಿರುವುದನ್ನು ಪತ್ತಯಾಗಿದೆ ಎಂದು ನಗರದ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಇದು ಯುಎಸ್-ಮೆಕ್ಸಿಕೊ ಗಡಿಯಲ್ಲಿ ಮಾನವ ಕಳ್ಳಸಾಗಣೆಯಿಂದ ಪರಿಣಾಮದಿಂದಾಗಿ ಎನ್ನಲಾಗಿದೆ.
ಸ್ಯಾನ್ ಆಂಟೋನಿಯೊ ಅಗ್ನಿಶಾಮಕ ಇಲಾಖೆಯು ಟ್ರಕ್ ನಲ್ಲಿ ಕಂಡುಬಂದ ನಾಲ್ವರು ಅಪ್ರಾಪ್ತರು ಸೇರಿದಂತೆ ಇತರ 16 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಿದರು. ಘಟನೆಯ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ದಕ್ಷಿಣ ಹೊರವಲಯದಲ್ಲಿರುವ ದೂರದ ಪ್ರದೇಶದಲ್ಲಿ ರೈಲು ಹಳಿಗಳ ಪಕ್ಕದಲ್ಲಿ ಟ್ರಕ್ ಪತ್ತೆಯಾಗಿದೆ.
ಇದನ್ನೂ ಓದಿ:ಬಿಆರ್‌ಐ v/s ಬಿ3ಡಬ್ಲ್ಯು ! ಚೀನದ ಸಂಚಿಗೆ ಜಿ 7 ರಾಷ್ಟ್ರಗಳಿಂದ ತಿರುಗುಬಾಣ
Related Articles
ಮೆಕ್ಸಿಕೊದ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾಡ್ ಅವರು ಟ್ರಕ್ ನಲ್ಲಿ ವಲಸಿಗರ ಉಸಿರುಗಟ್ಟಿಸುವುದನ್ನು “ಟೆಕ್ಸಾಸ್‌ನಲ್ಲಿನ ದುರಂತ” ಎಂದು ಕರೆದರು. ಸ್ಥಳೀಯ ದೂತಾವಾಸವು ಘಟನಾ ಸ್ಥಳಕ್ಕೆ ಹೋಗುತ್ತಿದೆ ಎಂದು ಹೇಳಿದರು. ಆದರೂ ಮೃತಪಟ್ಟವರ ರಾಷ್ಟ್ರೀಯತೆ ದೃಢೀಕರಿಸಲಾಗಿಲ್ಲ.
ಜುಲೈ 2017 ರಲ್ಲಿ, ವಾಲ್-ಮಾರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಸ್ಯಾನ್ ಆಂಟೋನಿಯೊ ಪೊಲೀಸರು ಪತ್ತೆಹಚ್ಚಿದ ಟ್ರ್ಯಾಕ್ಟರ್-ಟ್ರೇಲರ್ ನಲ್ಲಿ ಹತ್ತು ವಲಸಿಗರು ಸಾವನ್ನಪ್ಪಿದ್ದರು. ಚಾಲಕ ಜೇಮ್ಸ್ ಮ್ಯಾಥ್ಯೂ ಬ್ರಾಡ್ಲಿ ಜೂನಿಯರ್ ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿನ ತನ್ನ ಪಾತ್ರಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದರು.