ಬೆಂಗಳೂರು: ಪರಿಸರಕ್ಕೆ ಪೂರಕ ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ನಗರದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ.
ಸಿಲಿಕಾನ್ ಸಿಟಿಯ ಎಲ್ಲ ಕಡೆಗಳಲ್ಲಿ ಎಲೆಕ್ಟ್ರಿಕಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳು ವಾಹಸವಾರರಿಗೆ ಸಕಾಲದಲ್ಲಿ ರೀತಿಯಲ್ಲಿ ದೊರೆಯ ಬೇಕು ಎಂಬ ಉದ್ದೇಶದಿಂದ ಸುಮಾರು 455 ಹೆಚ್ಚುವರಿ ಎಲೆಕ್ಟ್ರಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲು ಬೆಸ್ಕಾಂ ತೀರ್ಮಾನಿಸಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಇದುವರೆಗೂ ನಗರದಲ್ಲಿ ಸುಮಾರು 136 ಇವಿಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಿದೆ. ಇದೀಗ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಮತ್ತಷ್ಟುಉತ್ತೇಜಿಸಲು ಮುಂದಿನ ಮೂರು ತಿಂಗಳಲ್ಲಿ ಹೆಚ್ಚುವರಿಯಾಗಿ 455 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಬೆಸ್ಕಾಂ ಕಚೇರಿ ಆವರಣ, ವಿಧಾನಸೌಧ, ವಿಕಾಸ ಸೌಧ, ಕೆಎಸ್‌ಆರ್‌ಟಿಸಿ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (ಬಿಡಿಎ), ಸಾರಿಗೆ ಇಲಾಖೆ ಕಚೇರಿ ಸೇರಿದಂತೆ ಸುಮಾರು ಡಿಸಿ ಇವಿ ಫಾಸ್ಟ್ ಚಾರ್ಜ್‌ಗಳು ಮತ್ತು 106 ಎಸಿ ಇವಿ ಸ್ಲೋ ಚಾರ್ಜಿಂಗ್‌ಗಳನ್ನು ಅಳವಡಿಕೆ ಮಾಡಲಾಗಿದ್ದು ಭವಿಷ್ಯತ್ತಿ ದೃಷ್ಟಿಯಿಂದ ಈ ಸಂಖ್ಯೆಯನ್ನು ದ್ವಿಗುಣಗೊಳಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಹೆಜ್ಜೆಯಿರಿಸಿದೆ.
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ: ದಿನೇ ದಿನೆ ಬೆಂಗಳೂರು ನಗರ ಬೆಳೆಯುತ್ತಿದೆ. ವಿದ್ಯುತ್ ಚಾಲಿತ ವಾಹನ ಸಂಖ್ಯೆಯು ಕೂಡ ಹೆಚ್ಚಳವಾಗುತ್ತಿದೆ.ಆಹಿನ್ನೆಲೆಯಲ್ಲಿ ನಗರದ ಸುತ್ತಮುತ್ತಲೂ ವಿದ್ಯುತ್ ಚಾಲಿತ ವಾಹನ ಸವಾರರಿಗೆ ಚಾರ್ಜಿಂಗ್ ಕೇಂದ್ರಗಳು ಸುಲಭವಾಗಿ ದೊರೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಅದರ ಭಾಗವಾಗಿಯೇಸಾರ್ವಜನಿಕ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕಲ್ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಯ ಯೋಜನೆ ರೂಪಿಸಲಾಗಿದೆಎಂದು ಬೆಸ್ಕಾಂನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
455 ಯೋಜಿತ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ವೇಗವಾಗಿ ಬ್ಯಾಟರಿಗಳನ್ನು ಚಾರ್ಜಿಂಗ್ ಮಾಡಲುಅನುಕೂಲ ಕಲ್ಪಿಸಲಾಗುವುದು.ಭವಿಷ್ಯತ್ತಿನಹಿತದೃಷ್ಟಿಯಿಂದ ವಿದ್ಯುತ್ ವಾಹನಗಳನ್ನುಪ್ರೋತ್ಸಾಹಿಸುವ ಅಗತ್ಯವಿದೆ.ಆ ಹಿನ್ನೆಲೆಯಲ್ಲಿ ವಿದ್ಯುತ್‌ವಾಹನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತಷ್ಟುಚಾರ್ಜಿಂಗ್ ಸ್ಟೇಷನ್ ಅನ್ನು ತೆರೆಯಲು ಬೆಸ್ಕಾಂ ಯೋಜನೆ ರೂಪಿಸಿದೆ ಎಂದು ತಿಳಿಸಿದ್ದಾರೆ.
ಚಾರ್ಜಿಂಗ್ ಕೇಂದ್ರಗಳು ಎಲ್ಲೆಲ್ಲಿ ?: ಬೆಸ್ಕಾಂ ದೇಶದಲ್ಲೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಪರಿಚಯಿಸಿದ ಮೊದಲ ನೋಡೆಲ್ ಏಜೆನ್ಸಿ ಎಂಬ ಹಿರಿಮೆಗೆ ಪಾತ್ರವಾಗಿದ್ದು ತನ್ನವ್ಯಾಪ್ತಿಯ ಸರ್ಕಾರಿ ಕಟ್ಟಡ ಮತ್ತು ಆವರಣಗಳಲ್ಲಮತ್ತಷ್ಟು ಚಾರ್ಜಿಂಗ್ ಸ್ಟೇಷನ್ ತೆರೆಯುವ ಚಿಂತನೆ ನಡೆಸಿದೆ.
ಅದರ ಭಾಗವಾಗಿಯೇ ಹೊಸದಾಗಿ ಬೆಸ್ಕಾಂಕಚೇರಿ ಆವರಣ, ಬಿಎಂಆರ್‌ಸಿಎಲ್, ಕೆಎಸ್‌ಆರ್‌ಟಿಸಿ, ಬಿಬಿಎಂಪಿ ಕಚೇರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿಹೆಚ್ಚುವರಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನುಸ್ಥಾಪಿಸಲು ಮುಂದಾಗಿದೆ. ಈ ಸಂಬಂಧ ಶೀಘ್ರದಲ್ಲೆ ಟೆಂಡರ್ ಪ್ರಕ್ರಿಯೆ ಕೂಡ ನಡೆಯಲಿದೆ.
ಭವಿಷ್ಯತ್ತಿನ ದೃಷ್ಟಿಯಿಂದ ಹಂತ-ಹಂತವಾಗಿ ನಗರದ ಎಲ್ಲೆ ಕಡೆಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡುವ ಗುರಿಯನ್ನು ಬೆಸ್ಕಾಂ ಹೊಂದಿದೆ. ಜತೆಗೆ ಬೆಸ್ಕಾಂ ವ್ಯಾಪ್ತಿಯ ಜಿಲ್ಲಾ ಕೇಂದ್ರಗಳಲ್ಲೂ ಕೂಡ ಚಾರ್ಜಿಂಗ್ ಸ್ಟೇಷನ್ ತೆರೆಯುವ ಆಲೋಚನೆ ಹೊಂದಿದೆ.
ನಗರದಲ್ಲಿ ವಿದ್ಯುತ್ ವಾಹನಗಳನ್ನು ಮತ್ತಷ್ಟು ಪ್ರೋತ್ಸಾಹಿಸುವ ದೃಷ್ಟಿಯಿಂದಬೆಸ್ಕಾಂ ಮುಂದಾಗಿದೆ. ಆ ಹಿನ್ನೆಲೆ ಹೆಚ್ಚುವರಿಯಾಗಿ ನಗರದ ವಿವಿಧೆಡೆ 455 ಚಾರ್ಜಿಂಗ್‌ಸ್ಟೇಷನ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
– ರಾಜೇಂದ್ರ ಚೋಳನ್, ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ
–ದೇವೇಶ ಸೂರಗುಪ್ಪ