Advertisement

ಶೂನ್ಯ ದಾಖಲಾತಿಯ 45 ಶಾಲೆಗಳಿಗೆ ಅಗ್ನಿಪರೀಕ್ಷೆ !

01:06 AM May 19, 2019 | Sriram |

ಸುಳ್ಯ: ಶೂನ್ಯ ದಾಖಲಾತಿ ಇರುವ ಸರಕಾರಿ ಶಾಲಾ ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ವರ್ಗಾವಣೆಗೆ ಒಳಪಡಿಸುವ ಎಚ್ಚರಿಕೆಯನ್ನು ಸರಕಾರ ನೀಡಿದ್ದು, ಉಭಯ ಜಿಲ್ಲೆಯ 45 ಪ್ರಾಥಮಿಕ ಶಾಲೆಗಳಿಗೆ ಅಗ್ನಿ ಪರೀಕ್ಷೆ ಎದುರಾಗಿದೆ.

Advertisement

2018-19ನೇ ಸಾಲಿನಲ್ಲಿ ಈ 45 ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾತಿ ಆಗಿರಲಿಲ್ಲ. ಈ ಬಾರಿಯೂ ಆಗದಿದ್ದರೆ ಶಿಕ್ಷಕರು ಎತ್ತಂಗಡಿಗೆ ಸಜ್ಜಾಗುವ ಆತಂಕ ಎದುರಾಗಿದೆ.

ಮಕ್ಕಳನ್ನು ವರ್ಗಾಯಿಸಿ ಶಾಲೆಗಳಿಗೆ ಬೀಗ ತಂತ್ರ!
ಹಾಗೆಂದು ಈ ಶಾಲೆಗಳು ಕಳೆದ ಬಾರಿ ಮುಚ್ಚಿಲ್ಲ. 1ನೇ ತರಗತಿ ಬಿಟ್ಟು ಉಳಿದ ಕೆಲವು ತರಗತಿಗಳಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳಿದ್ದರು. ಶೂನ್ಯ ದಾಖಲಾತಿಯ ಬಹುತೇಕ ಶಾಲೆಗಳಲ್ಲಿ ಶೈಕ್ಷಣಿಕ ಅವಧಿಯಲ್ಲಿ ಅಂತಿಮ ತರಗತಿಯಿಂದ ವಿದ್ಯಾರ್ಥಿಗಳು ತೇರ್ಗಡೆ ಆಗುವ ಪ್ರಕ್ರಿಯೆ ಮಾತ್ರ ಇವೆ. ಹೊಸ ಸೇರ್ಪಡೆ ಆಗುತ್ತಿಲ್ಲ.

ಹೀಗಾಗಿ ಬೆರಳೆಣಿಕೆ ಮಕ್ಕಳಿರುವ ಕೆಲವು ಶಾಲೆಗಳಿಂದ ಮಕ್ಕಳನ್ನು ಸನಿಹದ ಶಾಲೆಗೆ ವರ್ಗಾಯಿಸಿ ಬೀಗ ಹಾಕಲಾಗಿದೆ. ಶಿಕ್ಷಕರನ್ನು ಬೇರೆ ಕಡೆ ನಿಯೋಜಿಸಲಾಗಿದೆ. ಇದರಿಂದ ಶಿಕ್ಷಕರು ಮಕ್ಕಳ ದಾಖಲಾತಿಗೆ ಪರಿಶ್ರಮಿಸುವ ಪ್ರಮೇಯವೂ ಇರದು. ಪೋಷಕರೂ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ. ಮಕ್ಕಳು ದಾಖಲಾತಿ ಇದ್ದರೆ ಮುಂದಿನ ವರ್ಷ ಶಾಲೆ ಪುನಾರಂಭಿಸಲು ಅವಕಾಶ ಇದೆ ಎಂಬ ಉತ್ತರ ನೀಡಿ ಶಾಲೆಗಳನ್ನು ಶಾಶ್ವತ ಮುಚ್ಚುವ ವ್ಯವಸ್ಥಿತ ಹುನ್ನಾರವೂ ನಡೆದಿದೆ ಎನ್ನುವುದು ಪೋಷಕರ ಆರೋಪ.

ಶೂನ್ಯ ದಾಖಲಾತಿ; ಎಲ್ಲೆಲ್ಲಿ ಎಷ್ಟು ?
2018-19ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ 25 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 20 ಶಾಲೆಗಳಲ್ಲಿ 1ನೇ ತರಗತಿಗೆ ದಾಖಲಾತಿ ಆಗಿಲ್ಲ. ಬಂಟ್ವಾಳ ಮತ್ತು ಮೂಡುಬಿದಿರೆ ಬಿಇಒ ವ್ಯಾಪ್ತಿಯಲ್ಲಿ ಮಾತ್ರ ಶೂನ್ಯ ದಾಖಲಾತಿ ಶಾಲೆಗಳಿಲ್ಲ. ಉಳಿದಂತೆ ಶೂನ್ಯ ದಾಖಲಾತಿ ಶಾಲೆಗಳ ವಿವರ ಬಿಇಒ ವ್ಯಾಪ್ತಿಯ ಅನುಸಾರ ಇಲ್ಲಿ ನೀಡಲಾಗಿದೆ.

Advertisement

- ಸುಳ್ಯ: ಬಾಂಜಿಕೋಡಿ, ಕೆಮ್ಮನ್ನಬಳ್ಳಿ, ಹಾಸನಡ್ಕ, ಕರಂಗಲ್ಲು, ಹಾಡಿಕಲ್ಲು, ಕಳುಬೈಲು, ಮೈತ್ತಡ್ಕ
- ಪುತ್ತೂರು: ಚೇರು, ಕಣಿಯಾರುಬೈಲು, ಶಿರಾಡಿ, ಮಚ್ಚಿಮಲೆ
- ಮಂಗಳೂರು ಉತ್ತರ: ಬೊಕ್ಕಪಟ್ಣ ಅನುದಾನಿತ ಶಾಲೆ
- ಮಂಗಳೂರು ದಕ್ಷಿಣ: ಅಳಿಕೆ, ನಡುಗುಡ್ಡೆ, ಪೊಂಪೈ ಕಂದಾವರ
- ಬೆಳ್ತಂಗಡಿ: ಕರಿಯಾಲು, ಎಳನೀರು ಗುರ್ತ್ಯಡ್ಕ, ಬದಿಪಲ್ಕೆ, ನಡುಜಾರು
- ಉಡುಪಿ: ಕೊರಂಗ್ರಪಾಡಿ ಕಿ.ಪ್ರಾ. ಶಾಲೆ
-ಕುಂದಾಪುರ: ಗುಡಿಬೆಟ್ಟು, ಚೋರಾಡಿ, ಗಾವಿÛ, ಮೂಡುವಳ್ಳಿ, ತಟ್ಟುವಟ್ಟು, ಯಡಾಡಿ-ಮತ್ಯಾಡಿ-2, ಹರ್ಕೆಬಾಳು.
- ಬ್ರಹ್ಮಾವರ: ಕರಂಬಳ್ಳಿ, ಮೆಣಸಿನ ಹಾಡಿ  ಕಾರ್ಕಳ: ಇನ್ನಾ ಉರ್ದು ಶಾಲೆ
-ಬೈಂದೂರು: ಗೋಳಿಹೊಳೆ (ಉರ್ದು), ಸುರ್ಕುಂದ, ಹೇನ್‌ಬೇರು, ಮುಗುಳಿ (ಉರ್ದು), ಹೊಸ್ಕೋಟೆ, ಜನ್ನಾಲು, ಹಾಲಾಡಿ ಕೆರಾಡಿ, ಕರ್ಕುಂಜೆ-11, ಕಾನಿ, ಹಕೂìರು ಉತ್ತರ, ಮರವಂತೆ ಕರಾವಳಿ, ಆರ್ಗೋಡು, ಹೊಸೂರು, ನಾಗೂರು (ಉರ್ದು)

ಕಳೆದ ವರ್ಷ 1ನೇ ತರಗತಿಯಲ್ಲಿ ಶೂನ್ಯ ದಾಖಲಾತಿ ಇರುವ ಶಾಲೆ ಸಹಿತ ಎಲ್ಲ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮನೆ ಮನೆ ಭೇಟಿ ಮೂಲಕ ಅರ್ಹ ಮಕ್ಕಳನ್ನು ಶಾಲೆಗೆ ಸೇರಿಸಲು ದಾಖಲಾತಿ ಅಭಿಯಾನ ನಡೆಯುತ್ತಿದೆ. ಶಾಲಾ ಶಿಕ್ಷಕರು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸುವಂತೆ ಇಲಾಖೆ ನಿರ್ದೇಶನ ನೀಡಿದೆ.
 - ವೈ. ಶಿವರಾಮಯ್ಯ,
ಡಿಡಿಪಿಐ, ದ.ಕ. ಜಿಲ್ಲೆ

ಈ ಬಾರಿ ಜಿಲ್ಲೆಯಲ್ಲಿ 21 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿ ಆರಂಭಿಸಲು ಸರಕಾರ ಅನುಮೋದನೆ ನೀಡಿದೆ. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಇಲಾಖೆ ಸರ್ವ ಸನ್ನದ್ಧವಾಗಿದೆ. ಮನೆ ಮನೆ ಭೇಟಿ ಸಹಿತ ವಿವಿಧ ಚಟುವಟಿಕೆಗಳ ಮೂಲಕ 5 ವರ್ಷ 5 ತಿಂಗಳು ತುಂಬಿದ ಮಕ್ಕಳು ಶಿಕ್ಷಣ ವಂಚಿತರಾಗದಂತೆ ವಿಶೇಷ ಒತ್ತು ನೀಡಿ ಶಾಲಾ ಸೇರ್ಪಡೆಗೆ ಆದ್ಯತೆ ನೀಡಲಾಗಿದೆ.
ಶೇಷಶಯನ,
ಡಿಡಿಪಿಐ, ಉಡುಪಿ ಜಿಲ್ಲೆ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next