Advertisement

ಶೇ.45 ಕೈಗಾರಿಕೆಗಳು ಪುನಾರಂಭ

04:58 AM May 19, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಶೇ.45 ಮತ್ತು ರಾಜ್ಯದಲ್ಲಿ ಶೇ.40 ರಷ್ಟು ಕೈಗಾರಿಕೆಗಳು ಈಗಾಗಲೇ ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲ ಕೈಗಾರಿಕೆಗಳು ಪುನರಾರಂಭಗೊಳ್ಳುವ ಭರವಸೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕೈಗೊಂಡು ಅವರು ಮಾತನಾಡಿದರು. ಸಕಾಲಕ್ಕೆ ಬೀಜ, ಗೊಬ್ಬರ ರೈತರಿಗೆ ತಲುಪುವಂತೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು. ಹೂವು ಬೆಳೆಗಾರರಿಗೆ ಪ್ರತಿ ಎಕರೆಗೆ 10 ಸಾವಿರ ಅಥವಾ ಒಂದು ಹೆಕ್ಟೆರಿಗೆ 25 ಸಾವಿರ ಸಬ್ಸಿಡಿ ನೀಡಲು ಸರಕಾರ ತೀರ್ಮಾನಿಸಿದೆ. ಮೇ 25 ರೊಳಗೆ ಅರ್ಹರಿಂದ ಅರ್ಜಿ ಸ್ವೀಕರಿಸಿ ಸಬ್ಸಿಡಿ ಹಣ ಅವರಿಗೆ ತಲುಪುವಂತೆ ತೋಟಗಾರಿಕೆಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಅರ್ಹ ಆಟೊ ಚಾಲಕರಿಗೆ 5 ಸಾವಿರ ಸಹಾಯಧನ ಪ್ರಕಟಿಸಿಲಾಗಿದ್ದು, ಆರ್‌ಟಿಒ ಅ ಧಿಕಾರಿಗಳು ಸೇವಾಸಿಂಧು ಆ್ಯಪ್‌ ಮೂಲಕ ಚಾಲಕರು ಅರ್ಜಿ ಸಲ್ಲಿಸುವಂತೆ ಮಾಹಿತಿ ನೀಡಿ, ಸೌಲಭ್ಯ ಅವರಿಗೆ ತಲುಪುವಂತೆ ಮಾಡಬೇಕು. ಅಂತರ್‌ಜಿಲ್ಲೆ ಹಾಗೂ ಜಿಲ್ಲೆಯೊಳಗೆ ಸಾರಿಗೆ ಸಂಚಾರಕ್ಕೆ ರಾಜ್ಯ ಸರ್ಕಾರ ಮೇ 19ರಿಂದ ಅನುಮತಿ ನೀಡಿದೆ. ಅಂತರ್ಜಿಲ್ಲಾ ಪ್ರಯಾಣಿಕರ ಬಗ್ಗೆ ಜಾಗೃತಿ ವಹಿಸಿ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಡಿಸಿ ದೀಪಾ ಚೋಳನ್‌ ಮಾತನಾಡಿ, ಮೇ 18ರ ವರೆಗೆ ಒಟ್ಟು 8,534 ಸ್ಯಾಂಪಲ್‌ ಸಂಗ್ರಹಿಸಿದ್ದು, ಅದರಲ್ಲಿ 7,315 ನೆಗೆಟಿವ್‌ ಆಗಿದ್ದು, 26 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 7 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದ 19 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 1,193 ಜನರ ವರದಿ ಬರಬೇಕಿದೆ. ವಿವಿಧ ರಾಜ್ಯಗಳಿಂದ ಕಾರ್ಮಿಕರು ಸೇರಿದಂತೆ ಮೇ 18ರ ವರೆಗೆ 1,180 ಪ್ರಯಾಣಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಎಲ್ಲರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಶಾಸಕ ಸಿ.ಎಂ. ನಿಂಬಣ್ಣವರ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿದರು. ಮಹಾನಗರ ಪೊಲೀಸ್‌ ಆಯುಕ್ತ ಆರ್‌. ದಿಲೀಪ್‌, ಎಸ್‌ಪಿ ವರ್ತಿಕಾ ಕಟಿಯಾರ, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಅಪರ ಜಿಲ್ಲಾಧಿ ಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಯಶವಂತ ಮದೀನಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next