Advertisement

ಮೊದಲ ಲಸಿಕೆ ಪಡೆಯಲು ಶೇ.45 ಜನ ಹಿಂದೇಟು!

06:28 PM Sep 17, 2021 | Team Udayavani |

ದೇವದುರ್ಗ: ಕೋವಿಡ್‌ ಲಸಿಕೆ ಗುರಿ ಮುಟ್ಟಲು ಕಂದಾಯ ಮತ್ತು ಆರೋಗ್ಯ ಇಲಾಖೆ ಸೇರಿ ಇತರೆ ಇಲಾಖೆ ಅ ಧಿಕಾರಿಗಳು, ಸಿಬ್ಬಂದಿ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿರುವ ಬೆನ್ನಲ್ಲೇ ಶೇ.45 ಜನರು ಮೊದಲನೇ ಡೋಸ್‌ ಲಸಿಕೆ ಪಡೆಯದೇ ಹಿಂದೇಟು ಹಾಕಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

1.80 ಲಕ್ಷಕ್ಕೂ ಅಧಿಕ ಲಸಿಕೆ ಗುರಿ ಹೊಂದಲಾಗಿದೆ. ಶೇ.60 ಜನರು ಮೊದಲನೇ ಡೋಸ್‌ ಲಸಿಕೆ ಪಡೆದಿದ್ದು, ಅವರಲ್ಲಿ ಶೇ.35 ಮಾತ್ರ ಎರಡನೇ ಡೋಸ್‌ ಪಡೆದಿದ್ದಾರೆ. ಇನ್ನುಳಿದವರು ಊರಲ್ಲಲ್ಲಿ, ಆರೋಗ್ಯ ಸಮಸ್ಯೆ ಹೀಗೆ ಒಂದಿಲ್ಲೊಂದು ಕಾರಣಗಳ ನೆಪ ಹೇಳಿ ಡೋಸ್‌ ಪಡೆಯದಿರುವುದು ಆರೋಗ್ಯ ಇಲಾಖೆಗೆ ಬೇಸರ ಮೂಡಿದೆ.

ಪಶು ಸಂಗೋಪನಾ ಇಲಾಖೆ ಕಚೇರಿಯಲ್ಲಿ ಕೋವಿಡ್‌ ಲಸಿಕೆ ಕಾಲ್‌ ಸೆಂಟರ್‌ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರಕ್ಕೆ ಬಹುತೇಕ ಶಿಕ್ಷಕ-ಶಿಕ್ಷಕಿಯರು ನಿಯೋಜನೆಗೊಂಡಿದ್ದಾರೆ. ಮೊದಲನೇ ಡೋಸ್‌ ಲಸಿಕೆ ಪಡೆದವರಿಗೆ ಎರಡನೇ ಡೋಸ್‌ ಸಮಯ ಬಂದಿದ್ದು, ಆಸ್ಪತ್ರೆಗೆ ಬರುವಂತೆ ದೂರವಾಣಿ ಮೂಲಕ ಶಿಕ್ಷಕರು ಮನವಿ ಮಾಡುತ್ತಿದ್ದರೂ ಸ್ಪಂದನೆ ಸಿಗುತ್ತಿಲ್ಲ.

ಇನ್ನು ಗ್ರಾಮೀಣ ಭಾಗದ ಪ್ರತಿಯೊಂದು ಗ್ರಾಪಂ ಪಂಚಾಯಿತಿ, ಪಟ್ಟಣದ ವಾರ್ಡ್ ಗಳಲ್ಲಿ ಲಸಿಕೆ ಕೇಂದ್ರಗಳು ಆರಂಭಿಸಿದ್ದರೂ ಮೊದಲನೇ ಡೋಸ್‌ ಲಸಿಕೆ ಪಡೆಯಲು ಜನ ಬರುತ್ತಿಲ್ಲ. ಮಿನಿವಿಧಾನಸೌಧ ಕಚೇರಿ ಮುಂಭಾಗದಲ್ಲೇ ಲಸಿಕೆ ಹಾಕಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಂದಾಯ-ಆರೋಗ್ಯ ಇಲಾಖೆ ನಿಗದಿತ ಗುರಿ ಮುಟ್ಟಲು ಅನೇಕ ಕಾರ್ಯಕ್ರಮ ರೂಪಿಸಿಯಾದರೂ ಜಾಗೃತಿ ಮಧ್ಯೆಯೂ ಶೇ.45 ಮೊದಲನೇ ಡೋಸ್‌ ಲಸಿಕೆ ಪಡೆಯುವ ಜನರು ಆಸ್ಪತ್ರೆಗಳತ್ತ ದೌಡಾಯಿಸುತ್ತಿಲ್ಲ.

ಪ್ರತಿ ವಾರ್ಡ್‌ನಲ್ಲಿ ಎರಡು ಲಸಿಕಾ ಕೇಂದ್ರ
ಶುಕ್ರವಾರ ನಡೆಯುವ “ಲಸಿಕೆ ಮೇಳ’ ಕಾರ್ಯಕ್ರಮ ಅಂಗವಾಗಿ ಪ್ರತಿಯೊಂದು ವಾರ್ಡ್‌ನಲ್ಲಿ ಎರಡು ಲಸಿಕೆ ಕೇಂದ್ರಗಳು ಆರಂಭಿಸಬೇಕೆನ್ನುವ ಚಿಂತನೆ ನಡೆದಿದೆ. ಈಗಾಗಲೇ ಪುರಸಭೆ ಸದಸ್ಯರು, ವರ್ತಕರ ಸಂಘದ ಅಧ್ಯಕ್ಷ-ಸದಸ್ಯರ ಸಭೆ ನಡೆಸಲಾಗಿದೆ. ಕೋವಿಡ್‌ ಲಸಿಕೆ ಗುರಿ ಮುಟ್ಟಲು ಕಂದಾಯ ಮತ್ತು ಆರೋಗ್ಯ ಇಲಾಖೆ ಶ್ರಮಕ್ಕೆ ಬಹುತೇಕರು ಸ್ಪಂದಿಸದಿರುವುದು ಬೇಸರಕ್ಕೆ ಕಾರಣವಾಗಿದೆ.

Advertisement

ನೂರಕ್ಕೆ ನೂರರಷ್ಟು ಲಸಿಕೆ ಗುರಿ
ಕೋವಿಡ್‌ ಲಸಿಕೆ ಗುರಿ ಮುಟ್ಟಲು ಗ್ರಾಪಂ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಶ್ರಮ ವಹಿಸಿದ್ದಾರೆ. ಕಂದಾಯ- ಆರೋಗ್ಯ ಇಲಾಖೆ ಒಂದು ಹೆಜ್ಜೆ ಮುಂದಿಟ್ಟಿದ್ದು, ಗೋಪಾಳಪುರು, ಮಾನಶಯ್ಯನದೊಡ್ಡಿ ಗ್ರಾಮದಲ್ಲಿ ನೂರಕ್ಕೆ ನೂರರಷ್ಟು ಲಸಿಕೆ ಗುರಿ ಮುಟ್ಟಲಾಗಿದೆ.

ಗೋಪಾಳಪುರು, ಮಾನಶಯ್ಯನದೊಡ್ಡಿ ಗ್ರಾಮದಲ್ಲಿ ಶೇ.100 ಜನರಿಗೆ ಕೋವಿಡ್‌ ಲಸಿಕೆ ಹಾಕಲಾಗಿದೆ. ಶೇ.45ರಷ್ಟು ಮೊದಲನೇ ಡೋಸ್‌ ಲಸಿಕೆ ಪಡೆಯದವರನ್ನು ಗುರುತಿಸಲು ವಾರ್ಡ್‌ಗಳಲ್ಲಿ ಎರಡು ಲಸಿಕೆ ಕೇಂದ್ರಗಳು ಆರಂಭಿಸಲಾಗುತ್ತಿದೆ. ಸಮುದಾಯ ಸಹಕಾರ ಬಹಳ ಅಗತ್ಯವಿದೆ.
ಡಾ| ಬನದೇಶ್ವರ,
ತಾಲೂಕು ಆರೋಗ್ಯಾಧಿಕಾರಿ

ಪುರಸಭೆ ಹಾಗೂ ವರ್ತಕರ ಸಂಘದ ಸದಸ್ಯರ ಸಭೆ ನಡೆಸಲಾಗಿದೆ. ಲಸಿಕೆ ಮೇಳ ಕಾರ್ಯಕ್ರಮ ಮೂಲಕ ವಾರ್ಡ್‌ನಲ್ಲಿ ಎರಡು ಲಸಿಕೆ ಕೇಂದ್ರಗಳು ಆರಂಭಿಸಲಾಗುತ್ತಿದ್ದು, ಸದಸ್ಯರು ಸಮುದಾಯ ಸಹಕಾರಿಸುವಂತೆ ಮನವಿ ಮಾಡಲಾಗಿದೆ.
ಶ್ರೀನಿವಾಸ ಚಾಪಲ್‌, ಪ್ರಭಾರ ತಹಶೀಲ್ದಾರ್‌

*ನಾಗರಾಜ ತೇಲ್ಕರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next