Advertisement

ಕೇಜ್ರಿವಾಲ್‌ ನಿವಾಸ ನವೀಕರಣಕ್ಕೆ 45 ಕೋಟಿ ರೂ. ? 

08:56 PM Apr 26, 2023 | Team Udayavani |

ನವದೆಹಲಿ: ಸಾರ್ವಜನಿಕರ ಹಣದಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಐಷಾರಾಮಿ ಜೀವನ ನಡೆಸುತ್ತಿದ್ದು, ತಮ್ಮ ನಿವಾಸದ ನವೀಕರಣಕ್ಕಾಗಿಯೇ 45 ಕೋಟಿ ರೂ.ಗಳನ್ನು ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಹಿನ್ನೆಲೆ ದೆಹಲಿ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಕುಲಜೀತ್‌ ಚಹಲ್‌ ಸೇರಿದಂತೆ ಹಲವು ಕಾರ್ಯಕರ್ತರು ಕೇಜ್ರಿವಾಲ್‌ ನಿವಾಸದ ಎದುರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

Advertisement

ಬಿಜೆಪಿ ವಕ್ತಾರರಾದ ಸಂಬಿತ್‌ ಪಾತ್ರ ಈ ಕುರಿತು ಪತ್ರಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ “ಕೇಜ್ರಿವಾಲ್‌ ಅಧಿಕಾರಕ್ಕೆ ಬಂದಾಗ ತಾನು ಮಹಾರಾಜ ಎಂದು ಹೇಳಿಕೊಂಡಿದ್ದರು. ಆ ಮಹಾರಾಜರಿಗೆ ಜನರ ಸುಭಿಕ್ಷೆಯ ಬದಲು ತಾನು ವೈಭೋಗದಲ್ಲಿರುವ ಬಗ್ಗೆ ವ್ಯಾಮೋಹ ಬಂದಿರುವುದು ಈಗ ಬಟಾಬಯಲಾಗಿದೆ. ವಿಯೆಟ್ನಾಂನಿಂದ ದುಬಾರಿ ಮಾರ್ಬಲ್‌ಗ‌ಳನ್ನು ತರಿಸಿ ನವೀಕರಣಕ್ಕೆ ಬಳಸಲಾಗಿದೆ. ಲಕ್ಷಾಂತರ ರೂ. ಮೌಲ್ಯದ ಪರದೆಗಳನ್ನು ಅಳವಡಿಸಲಾಗಿದೆ. ಒಂದು ಕರ್ಟನ್‌ ಬೆಲೆಯೇ 7.94 ಲಕ್ಷ ರೂ. ಇದು ಮಹಾರಾಜನ ನಿಜವಾದ ಜೀವನ” ಎಂದಿದ್ದಾರೆ.

ಇದೇ ವೇಳೆ ಮೋದಿ ಅವರ ವಿದ್ಯಾಭ್ಯಾಸದ ದಾಖಲೆಗಳ ಬಗ್ಗೆ ಆಸಕ್ತಿ ವಹಿಸಿ, ಚರ್ಚಿಸುತ್ತಿದ್ದಂತೆಯೇ, ಈಗ ಕೇಜ್ರಿವಾಲ್‌ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಲಿ ಎಂದು ಸವಾಲೆಸೆದಿದ್ದಾರೆ. ಮತ್ತೂಂದೆಡೆ ಆಪ್‌ ವಕ್ತಾರೆ ಪ್ರಿಯಾಂಕಾ ಕಕ್ಕರ್‌ ಪ್ರತಿಕ್ರಿಯಿಸಿ, ಸಿಎಂ ಅವರ ನಿವಾಸ ಹಳೆಯ ಸ್ಥಿತಿ ಹೇಗಿತ್ತು ಎಂಬುದರ ವಿಡಿಯೊ ಹಂಚಿಕೊಂಡಿದ್ದಾರೆ. ಮೇಲ್ಛಾವಣಿ ಕುಸಿಯುವ ಹಂತ ತಲುಪಿದ್ದರಿಂದ ನವೀಕರಣ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಏತನ್ಮಧ್ಯೆ, ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯ ಪತ್ನಿ ಸೀಮಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿರುವ ಕೇಜ್ರಿವಾಲ್‌ ಅವರ ಆರೋಗ್ಯ ವಿಚಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next