ಬಳ್ಳಾರಿ: ಬಳ್ಳಾರಿ/ವಿಜಯನಗರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, 449 ಗ್ರಾಮಗಳಲ್ಲಿ ಒಂದೇ ಒಂದು ಪ್ರಕರಣಗಳು ಪತ್ತೆಯಾಗದೆ ಕೊರೊನಾ ಮುಕ್ತ ಗ್ರಾಮಗಳಾಗಿವೆ.
ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹಬ್ಬಿದ್ದ ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲಾಪಂಚಾಯತ್, ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರಲು ಪ್ರಮುಖ ಕಾರಣವಾಗಿದೆ. ಪರಿಣಾಮ ಕಳೆದ ವಾರ 380 ಇದ್ದ
ಕೆ ರೊನಾ ಮುಕ್ತ ಗ್ರಾಮಗಳ ಸಂಖ್ಯೆ ಈ ವಾರ ಇನ್ನು 69 ಗ್ರಾಮಗಳಲ್ಲಿ ಒಂದೇ ಒಂದು ಪಾಸಿಟಿವ್ ಪತ್ತೆಯಾಗಿಲ್ಲ. ಇದರಿಂದ ಉಭಯ ಜಿಲ್ಲೆಗಳಲ್ಲಿ ಕೊರೊನಾ ಗೆದ್ದ ಗ್ರಾಮಗಳ ಸಂಖ್ಯೆ 449ಕ್ಕೆ ಏರಿಕೆಯಾಗಿದೆ.
ಬಳ್ಳಾರಿ/ವಿಜಯನಗರ ಜಿಲ್ಲೆಗಳ 237 ಗ್ರಾಪಂನ 1043 ಗ್ರಾಮಗಳಲ್ಲಿ 15421 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 12734 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ಬಳ್ಳಾರಿ ತಾಲೂಕು 196, ಹಡಗಲಿ 203, ಹ.ಬೊ.ಹಳ್ಳಿ 354, ಹರಪನಹಳ್ಳಿ 533, ಹಒಸಪೇಟೆ 156, ಕಂಪ್ಲಿ 130, ಕೊಟ್ಟೂರು 174, ಕೂಡ್ಲಿಗಿ 205, ಕುರುಗೋಡು 208, ಸಂಡೂರು 166, ಸಿರುಗುಪ್ಪ 362 ಸೇರಿ ಒಟ್ಟು 2687 ಸಕ್ರಿಯಪ್ರಕರಣಗಳು ಇವೆ. ಇನ್ನು 66 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಸಕ್ರಿಯ ಪ್ರಕಣಗಳು, 111 ಗ್ರಾಮಗಳಲ್ಲಿ 5ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು, 417 ಗ್ರಾಮಗಳಲ್ಲಿ 5ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ.
ಕೋವಿಡ್ ಮುಕ್ತ ಗ್ರಾಮಗಳು :
ಅದೇ ರೀತಿ ಉಭಯ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನಿಂದ ಮುಕ್ತವಾದ ಗ್ರಾಮಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಪೈಕಿ ಬಳ್ಳಾರಿ ತಾಲೂಕು 13, ಹಡಗಲಿ 69, ಹ.ಬೊ.ಹಳ್ಳಿ 27, ಹರಪನಹಳ್ಳಿ 93, ಹೊಸಪೇಟೆ 19, ಕಂಪ್ಲಿ 12,ಕೊಟ್ಟೂರು 24, ಕೂಡ್ಲಿಗಿ 84, ಸಂಡೂರು 74, ಸಿರುಗುಪ್ಪ 32 ಸೇರಿ ಒಟ್ಟು 449 ಗ್ರಾಮಗಳಲ್ಲಿ ಒಬ್ಬರಲ್ಲೂ ಪತ್ತೆಯಾಗದೆ ಸೋಂಕಿನಿಂದ ಮುಕ್ತವಾಗಿವೆ ಎಂದು ಜಿಲ್ಲಾ ಪಂಚಾಯಿತಿಯು ಜೂ. 10ರಂದು ನೀಡಿದ ವರದಿಯಲ್ಲಿ ಸ್ಪಷ್ಟಪಡಿಸಿದೆ.