Advertisement

ಚಂಡಮಾರುತಕ್ಕೆ ಮುಳುಗಿದ ನ್ಯೂಯಾರ್ಕ್‌: 44 ಮಂದಿ ಸಾವು

10:42 AM Sep 03, 2021 | Team Udayavani |

ನ್ಯೂಯಾರ್ಕ್‌: ಇಡಾ ಚಂಡಮಾರುತಕ್ಕೆ ತುತ್ತಾಗಿರುವ ಅಮೆರಿಕದ ನ್ಯೂಯಾರ್ಕ್‌, ಇತಿಹಾಸದಲ್ಲಿ ಎಂದೂ ಕಂಡಿರದಂಥ ಅಗಾಧ ಪ್ರವಾಹದ ಸುಳಿಗೆ ಸಿಲುಕಿದೆ. ನೆರೆ, ಪ್ರವಾಹಕ್ಕೆ ಸಿಕ್ಕು 2 ವರ್ಷದ ಮಗು ಸೇರಿ ಒಟ್ಟು 44 ಮಂದಿ ಅಸುನೀಗಿದ್ದಾರೆ.

Advertisement

ಇದನ್ನೂ ಓದಿ:ಶುಕ್ರವಾರ ಶುಭ ತಂದ ಪ್ರವೀಣ್: ಹೈಜಂಪ್ ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್

ಮ್ಯಾನ್‌ಹಟನ್‌, ಬ್ರೂಕ್ಲಿನ್‌ ಹಾಗೂ ನ್ಯೂ ಜೆರ್ಸಿಯಲ್ಲಿ ಸುರಿಯುತ್ತಿರುವ ಮುಸಲ ಧಾರೆ ಮಳೆಗೆ ಆ ನಗರದ ತಗ್ಗು ಪ್ರದೇಶಗಳು, ಸಾರಿಗೆ ಸುರಂಗ ಮಾರ್ಗಗಳು ಮುಂತಾದ ಕಡೆಯಲ್ಲೆಲ್ಲ ಪ್ರವಾಹದಂತೆ ನೀರು ನುಗ್ಗಿದೆ. ನ್ಯೂಯಾರ್ಕ್‌ನ ಸೆಂಟ್ರಲ್‌ ಪಾರ್ಕ್‌ನಲ್ಲಿ ಕೇವಲ 1 ಗಂಟೆಯಲ್ಲೇ 3.15 ಇಂಚು ಮಳೆ ಸುರಿದಿದೆ. ಎರಡು ವಾರಗಳ ಅವಧಿಯಲ್ಲಿ20 ಮಂದಿ ಸಾವಿಗೀಡಾಗಿದ್ದಾರೆ.

Advertisement

ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳು, ಇತರ ವಾಹನಗಳು ನೀರಿನಲ್ಲಿ ತೇಲುತ್ತಿವೆ. ಜಲಾವೃತ ಗೊಂಡಿರುವ ಪ್ರದೇಶಗಳಿಂದ ಜನರನ್ನು ತೆರವು ಗೊಳಿಸಲಾಗುತ್ತಿದೆ. ನ್ಯೂಯಾರ್ಕ್‌ ಗವರ್ನರ್‌ ಕ್ಯಾಥಿ ಹೊಚುಲ್‌ ಹಾಗೂ ಮೇಯರ್‌ ಬಿಲ್‌ ಡೆ ಬ್ಲಾಸಿಯೊ, ನ್ಯೂಯಾರ್ಕ್‌ ವ್ಯಾಪ್ತಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಸಾರಿಗೆ ಸುರಂಗ ಮಾರ್ಗಗಳಲ್ಲಿ ನೀರು ನುಗ್ಗಿದ್ದರಿಂದಾಗಿ, ಮೆಟ್ರೋಪಾಲಿಟನ್‌ ಟ್ರಾನ್ಸ್‌ಫೋರ್ಟೇಷನ್‌ ಅಥಾರಿಟಿ ಎಲ್ಲ ಸಾರಿಗೆ ಸೇವೆಗಳನ್ನು ರದ್ದುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next