Advertisement

43 ಜನರಿಗೆ ನೆಗೆಟಿವ್‌;ಆರು ವರದಿ ರಿಜೆಕ್ಟ್

12:35 PM Apr 25, 2020 | Suhan S |

ಬಾಗಲಕೋಟೆ: ಜಿಲ್ಲೆಯಿಂದ  ಕೋವಿಡ್ 19 ವೈರಸ್‌ ಪತ್ತೆಗಾಗಿ ಕಳುಹಿಸಿದ್ದ ಗಂಟಲು ದ್ರವ ಸ್ಯಾಂಪಲ್‌ಗ‌ಳಲ್ಲಿ ಶುಕ್ರವಾರ 43 ವರದಿ ನೆಗೆಟಿವ್‌ ಬಂದಿದ್ದು, ಮೂರು ಪಾಜಿಟಿವ್‌ ಬಂದಿವೆ ಎಂದು ಜಿಲ್ಲಾಧಿಕಾರಿ ಕ್ಯಾ.ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಕೋವಿಡ್ 19  ಪಾಜಿಟಿವ್‌ ವರದಿ ಪತ್ತೆಯಾಗಿರಲಿಲ್ಲ. ಆದರೆ, ಇಂದು 14 ವರ್ಷದ ಬಾಲಕ ಸಹಿತ ಮೂವರಿಗೆ ಪತ್ತೆಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇಂದು 43 ವರದಿ ನೆಗೆಟಿವ್‌, ಮೂರು ಪಾಜಿಟಿವ್‌ ಬಂದಿದ್ದು, 31 ಬಾಕಿ ಹಾಗೂ ಇಂದು ಹೊಸದಾಗಿ ಕಳುಹಿಸಿದ 30 ಸೇರಿ ಒಟ್ಟು 61 ಸ್ಯಾಂಪಲ್‌ಗ‌ಳ ವರದಿ ಬರಬೇಕಾಗಿದೆ. ಇಲ್ಲಿವರೆಗೆ ಒಟ್ಟು 1612 ಸ್ಯಾಂಪಲ್‌ ಕಳುಹಿಸಲಾಗಿದ್ದು, ಅದರಲ್ಲಿ 1522 ನೆಗಟಿವ್‌ ಪ್ರಕರಣ, 24 ಪಾಜಿಟಿವ್‌ ಪ್ರಕರಣ ಹಾಗೂ 1 ಮೃತ ಪ್ರಕರಣ ವರದಿಯಾಗಿದ್ದು, 6 ಸ್ಯಾಂಪಲ್‌ ಗಳು ರಿಜೆಕ್ಟ್ ಆಗಿವೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1546 ಮನೆಯಲ್ಲಿಯೇ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಕೋವಿಡ್‌ ಸೋಂಕಿನಿಂದ ಪಿ, ನಂ.161 ಮತ್ತು 162 ವ್ಯಕ್ತಿಗಳು ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಈಗಾಗಲೇ ಬಿಡುಗಡೆ ಮಾಡಲಾಗಿದೆ. 28 ದಿನಗಳ ಕಾಲ ಹೋಮ್‌ ಕ್ವಾರಂಟೈನ್‌ನಿಂದ ಒಟ್ಟು 156 ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next