Advertisement
ದಿ ವೆಸ್ಟ್‌ನ ಪೂವಾಯಿ ಲೆಕ್ ಹೊಟೇಲ್‌ನ ಗ್ರಾಂಡ್‌ಬಾಲ್ ರೂಮ್‌ನಲ್ಲಿ ಮಾ. 14ರಂದು ಜರಗಿದ ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್‌ನ 42ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಕೋವಿಡ್ ಸಮಯದಲ್ಲಿ ಸರಕಾರ ಜಾರಿಗೊಳಿಸಿದ ಹೊಟೇಲ್ ವ್ಯವಹಾರದ ನೀತಿಯನ್ನು ಮಹಾರಾಷ್ಟ್ರದಾದ್ಯಂತ ಮೌನ ವಿರೋಧ ವ್ಯಕ್ತಪಡಿಸಿದ್ದು, ಅನಂತರದ ಬೆಳವಣಿಗೆಯಲ್ಲಿ ಹೊಟೇಲ್ ಮಾಲಕರು ಹಾಗೂ ಕೆಲಸಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಆಹಾರ್ ಸಂಘಟನೆಯು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು. ಜತೆಗೆ ಕಂದಾಯ ಸಚಿವ ಬಾಳಾ ಸಾಹೇಬ್ ಥೋರಟ್, ಮುಂಬಯಿ ಜಿಲ್ಲಾ (ನಗರ)ಉಸ್ತುವಾರಿ ಸಚಿವ ಅಸ್ಲಾಂ ಶೇಖ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು. ಇದರಿಂದಾಗಿ ಸಕಾರಾತ್ಮಾಕ ಗೆಲುವು ಸಾಧಿಸಿದ್ದೆವು. ಅಲ್ಲದೆ ಹೊಟೇಲ್‌ಗೆ ಬಹುದೊಡ್ಡ ಸಮಸ್ಯೆಯಾಗಿರುವ ಲೈಸನ್ಸ್ ಫೀಸ್ ಅನ್ನು ಕಡಿತಗೊಳಿಸುವ ಬಗ್ಗೆ ಚರ್ಚೆ ಮುಂದುವರಿದಿದೆ ಎಂದು ತಿಳಿಸಿದರು.
Related Articles
Advertisement
ಚುನಾವಣೆ ಅಧಿಕಾರಿ ನ್ಯಾಯವಾದಿ ಡಿ.ಕೆ. ಶೆಟ್ಟಿ ಅವರು 2021-22ರ ಸಾಲಿನ ಚುನಾಯಿತ ಸದಸ್ಯರ ವಿವರ ನೀಡಿದರು. ಆಹಾರ್ ವತಿಯಿಂದ ಅತೀ ಹೆಚ್ಚು ಅಂಕಗಳಿಸಿದ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಗೌರವಧನ ನೀಡಿದ ವಿವರ, ನ್ಯಾಶನಲ್ ಅಸೋಸಿಯೇಶನ್ ಆಫ್ ಬ್ಲೈಂಡ್‌ಗೆ 2 ಲಕ್ಷ ರೂ. ಧನ ಸಹಾಯ ನೀಡಿದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ವಿಜಯ ಪಿ. ಶೆಟ್ಟಿ ಹಾಗೂ ಪಾಯೋಜಕತ್ವ ನೀಡಿ ಸಹಕರಿಸಿದ ಎಲ್ಲ ಕಂಪೆನಿಯ ಪ್ರತಿನಿಧಿಗಳನ್ನು ಗೌರವ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ವಲಯ ಅಧ್ಯಕ್ಷರು ಅಭಿನಂದಿಸಿದರು.
ಆಹಾರ್ ಕಾರ್ಯವನ್ನು ಸಮರ್ಪಕವಾಗಿ ನಿರ್ವ ಹಿಸುತ್ತಿರುವ ವಸಂತ್ ಕಾರ್ಕಳ ಮತ್ತು ಅವರ ಬಳಗ ದವರನ್ನು ಹಾಗೂ ಕಚೇರಿಯ ಮಾಧ್ಯಮ ಸಂಪರ್ಕ ಸಹಾಯಕರನ್ನು ಅಭಿನಂದಿಸಲಾಯಿತು. ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಹೊಟೇಲ್ ಉದ್ಯಮಿಗಳನ್ನು ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಜತೆ ಕಾರ್ಯದರ್ಶಿ ಪ್ರಮೋದ್ ಕಾಮತ್, ಜತೆ ಕೋಶಾಧಿಕಾರಿ ಅನೂಪ್ ಶೆಟ್ಟಿ, ವಿಭಾಗ – 1ರ ಉಪಾಧ್ಯಕ್ಷ ಶಂಕರಶಾನ್ ಜಿ. ನಾಯಕ್, ವಿಭಾಗ -2ರ ಉಪಾಧ್ಯಕ್ಷ ನಿರಂಜನ್ ಎಲ್. ಶೆಟ್ಟಿ, ವಿಭಾಗ – 3ರ ಉಪಾಧ್ಯಕ್ಷ ವಿಜಯ್ ಕೆ. ಶೆಟ್ಟಿ, ವಿಭಾಗ – 4ರ ಉಪಾಧ್ಯಕ್ಷ ವಿವೇಕ್ ಎಂ. ನಾಯಕ್, ವಿಭಾಗ -5ರ ಉಪಾಧ್ಯಕ್ಷ ಸಂದೀಪ್ ಶೆಟ್ಟಿ, ವಿಭಾಗ – 6ರ ಉಪಾಧ್ಯಕ್ಷ ಸುನೀಲ್ ಪಾಟೀಲ್, ವಿಭಾಗ – 7ರ ಉಪಾಧ್ಯಕ್ಷ ಡಾ| ಸಂತೋಷ್ ಎಂ. ರೈ, ವಿಭಾಗ – 8ರ ಉಪಾಧ್ಯಕ್ಷ ಭುಜಂಗ ಶೆಟ್ಟಿ, ವಿಭಾಗ – 9ರ ಉಪಾಧ್ಯಕ್ಷ ಧೀರಜ್ ಶೆಟ್ಟಿ, ವಿಭಾಗ – 10ರ ಉಪಾಧ್ಯಕ್ಷ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಸತ್ವಿಕಾ ಮತ್ತು ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.
ಆಹಾರ್ ಮಹಾನಗರದಲ್ಲಿ ಹೊಟೇಲ್ ಉದ್ಯಮಕ್ಕೆ ಒಂದು ಬಲಿಷ್ಠ ಸಂಘಟನೆಯಾಗಿ ಹೊರಹೊಮ್ಮಿದೆ. ಒಗ್ಗಟ್ಟು ಬಲಿಷ್ಠವಾದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಲು ಸಾಧ್ಯ ಎನ್ನುವುದನ್ನು ಸಂಘಟನೆ ತೋರಿಸಿದೆ. -ಲ| ಸಂತೋಷ್ ಶೆಟ್ಟಿ
ವರ್ಷದಿಂದ ವರ್ಷಕ್ಕೆ ವೈಶಿಷ್ಟ್ಯಪೂರ್ಣ ಚಟುವಟಿಕೆಗಳೊಂದಿಗೆ ಸದಸ್ಯರಿಗೆ ಪ್ರಯೋಜನವಾಗುತ್ತಿರುವ ಸಂಸ್ಥೆ ಆಹಾರ್ ಎಲ್ಲರಿಗೂ ಮಾದರಿ.-ನಾರಾಯಣ ಆಳ್ವ, ಹೊಟೇಲ್ ಉದ್ಯಮಿ
ಆಹಾರ್ ಕಾಲ ಕಾಲಕ್ಕೆ ಬದಲಾವಣೆ ಮಾಡುತ್ತಾ ಬಂದಿದೆ. 2 ವರ್ಷಗಳಲ್ಲಿ ಎಲ್ಲ ಸಮಸ್ಯೆಗಳ ನಡುವೆ ಎದುರು ನಿಂತು ಹೋರಾಡಿದೆ. ಸಂಘಟನೆಯ ಎಲ್ಲ ಸದಸ್ಯರು ಟೀಮ್ ಆಗಿ ಕೆಲಸ ಮಾಡಿದ್ದಾರೆ. -ಚಂದ್ರಹಾಸ ಶೆಟ್ಟಿ, ಮಾಜಿ ಅಧ್ಯಕ್ಷರು, ಬಂಟರ ಸಂಘ ಮುಂಬಯಿ
ಸಮಸ್ಯೆಯನ್ನು ಪರಿಹರಿಸುವ ಕಾರ್ಯದಲ್ಲಿ ತೊಡಗಿರುವಾಗ ಅನೇಕ ರೀತಿಯ ತೊಂದರೆಗಳು ಎದುರಾಗುವುದು ಸಾಮಾನ್ಯ. ಆದರೆ ಕೋವಿಡ್ ಕಾಲಘಟ್ಟದಲ್ಲಿ ಅಸೋಸಿಯೇಶನ್ ತೆಗೆದುಕೊಂಡ ನಿರ್ಧಾರಗಳು ಸಮಯೋಚಿತ. -ಅರವಿಂದ ಶೆಟ್ಟಿ, ಮಾಜಿ ಅಧ್ಯಕ್ಷರು
ಸೈನಿಕ ಯಾವಾಗಲೂ ಸೈನಿಕ ಎಂಬ ಸಿದ್ಧಾಂತದಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ. ಕೋವಿಡ್ ಸಮದರ್ಭ ಎಲ್ಲ ಸದಸ್ಯರಿಗೆ ತೊಂದರೆಯಾಗಿದೆ. ಆಹಾರ್ ಎದೆಗುಂದದೆ ತನ್ನ ಪರಿವಾರದೊಂದಿಗೆ ಇತರರಿಗೂ ಸಹಾಯ ಮಾಡಿದೆ.-ಆದರ್ಶ್ ಶೆಟ್ಟಿ, ಮಾಜಿ ಅಧ್ಯಕ್ಷರು
ಕಠಿನ ಸಮಯದಲ್ಲಿ ಆಹಾರ್ ನಿರ್ಧಾರಾತ್ಮಕ ಕೆಲಸಗಳನ್ನು ಮಾಡಿದೆ. ವಿಜಯ ಶೆಟ್ಟಿ ಹಾಗೂ ಮಹೇಶ್ ಶೆಟ್ಟಿಯವರ ವೈಶಿಷ್ಟಪೂರ್ಣ ಕೆಲಸ ಹಾಗೂ ಎಂ. ಪ್ರಸಾದ್ ಶೆಟ್ಟಿಯವರ 60 ಲಕ್ಷ ರೂ. ಮೆಂಬರ್‌ಶಿಪ್ ಕೊಡುಗೆ ಆಶ್ಚರ್ಯಕರವಾದದ್ದು. ಮಹಾರಾಷ್ಟ್ರ ಅನಾವಶ್ಯಕ ಡ್ರೈಡೆಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡಬೇಕು.-ಸುಧಾಕರ ಶೆಟ್ಟಿ, ಮಾಜಿ ಅಧ್ಯಕ್ಷರು
ಚಿತ್ರ – ವರದಿ: ರಮೇಶ್ ಉದ್ಯಾವರ್