Advertisement

ಸರಸಂಬಾ ಧನಲಕ್ಷ್ಮೀ ಸಹಕಾರಿಗೆ 42 ಲಕ್ಷ ಲಾಭ

03:03 PM Sep 22, 2022 | Team Udayavani |

ಆಳಂದ: ತಾಲೂಕಿನ ಸರಸಂಬಾ ಗ್ರಾಮದ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿಯ ಹಿರೋಳಿ ಗ್ರಾಮ ಶಾಖೆಯ ದಶಮಾನೋತ್ಸವ ಹಾಗೂ 2021-22ನೇ ಸಾಲಿನ 20ನೇ ವಾರ್ಷಿಕ ಮಹಾಸಭೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ಸೆ.24ರಂದು ಹಿರೋಳಿಯ ಗ್ರಾಮದ ಸೋಮೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10:30ಗಂಟೆಗೆ ನಡೆಯಲಿದೆ ಎಂದು ಸೌಹಾರ್ದ ಸಹಕಾರಿ ಅಧ್ಯಕ್ಷ ಮಹಾಂತಪ್ಪ ಆಲೂರೆ ತಿಳಿಸಿದರು.

Advertisement

ಪಟ್ಟಣದ ಸರಸಂಬಾ ಧನಲಕ್ಷ್ಮೀ ಸೌಹಾರ್ದ ಶಾಖೆಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಸಮಾರಂಭದಲ್ಲಿ ಮಾದನಹಿಪ್ಪರಗಾ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾ ಸ್ವಾಮೀಜಿ ಸಾನ್ನಿಧ್ಯ, ಹಿರೋಳಿ ವಿರಕ್ತ ಮಠದ ಶ್ರೀ ಅಭಿನವ ಶಿವಬಸವ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ವಿಜಯಪುರದ ಶಾಸಕ ಮತ್ತು ಸಿದ್ಧಶ್ರೀ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸವನೌಡ ಪಾಟೀಲ ಯತ್ನಾಳ ಉದ್ಘಾಟಿಸಿ, ಪುಸ್ತಕ ಬಿಡುಗಡೆ ಕೈಗೊಳ್ಳುವರು ಎಂದು ಹೇಳಿದರು.

ಶಾಸಕ ಸುಭಾಷ ಆರ್‌. ಗುತ್ತೇದಾರ, ಸಹಕಾರಿ ಉಪ ನಿಬಂಧಕ ರವೀಂದ್ರ ಗುರುಮಿಠಕಲ್‌, ಕಲಬುರಗಿ ಸಿದ್ಧಿವಿನಾಯಕ ಸೌಹಾರ್ದ ಪತ್ತಿನ ಸಹಾಕಾರಿ ಅಧ್ಯಕ್ಷ ಸಂಜೀವ ಮಹಾಜನ್‌, ಸಹಕಾರಿ ಒಕ್ಕೂಟ ಜಿಲ್ಲಾ ಅಧ್ಯಕ್ಷ ಎಸ್‌.ಎಸ್‌. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.

ಸೌಹಾರ್ದ ಕಾನೂನು ವ್ಯವಸ್ಥಾಪಕ ಸೂರ್ಯಕಾಂತ ರ್ಯಾಕಲೆ ಅತಿಥಿಯಾಗಿ ಆಗಮಿಸುವರು. ಉಪನ್ಯಾಸಕ ಪ್ರೊ|ನಾಗೇಂದ್ರ ಶಿ. ಚಕ್ಕಳ್ಳಿ, ಪ್ರೊ|ಸುಜಾತಾ ನಾ. ಚಿಕ್ಕಳ್ಳಿ ಪಾಲ್ಗೊಳ್ಳುವರು. ಸರಸಂಬಾ ಧನಲಕ್ಷ್ಮೀ ಸೌ.ಸ.ನಿ. ಅಧ್ಯಕ್ಷ ಮಹಾಂತಪ್ಪ ಆಲೂರೆ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2ಗಂಟೆಗೆ ನೆಡೆಯುವ ವಾರ್ಷಿಕ ವರದಿ ಮಂಡನೆ ಮತ್ತು ತರಬೇತಿ ಕಾರ್ಯಕ್ರಮದ ಸಾನ್ನಿಧ್ಯವನ್ನು ಹಿರೋಳಿ ವಿರಕ್ತ ಮಠದ ಶ್ರೀ ಅಭಿನವ ಶಿವಬಸವ ಮಹಾಸ್ವಾಮಿಗಳ ವಹಿಸುವರು. ಸೌಹಾರ್ದ ರಾಜ್ಯ ನಿರ್ದೇಶಕಿ ಶೈಲಜಾ ತಪಲಿ ಉದ್ಘಾಟಿಸುವರು ಎಂದು ವಿವರಿಸಿದರು.

Advertisement

ಸೂರ್ಯಕಾಂತ ರ್ಯಾಕಲೆ ಸಹಕಾರ ಕ್ಷೇತ್ರದ ಪ್ರಚಲಿತ ವಿದ್ಯಮಾನಗಳು ಮತ್ತು ಸದಸ್ಯರ ಹಕ್ಕು ಕರ್ತವ್ಯ, ಜವಾಬ್ದಾರಿ ಕುರಿತು ಉಪನ್ಯಾಸ ನೀಡುವರು. ಸಹಕಾರಿ ಮುಖ್ಯ ಕಾರ್ಯನಿರ್ವಾಣಾ ಕಾರಿ ಸೋಮನಾಥ ನಿಂಬರಗಿ ವಾರ್ಷಿಕ ವರದಿ ಮಂಡಿಸುವರು. ತಾವು ಅಧ್ಯಕ್ಷತೆ ವಹಿಸಲಿದ್ದು, ಯೋಗಿರಾಜ ಮಾಡ್ಯಾಳೆ ಮತ್ತು ಬಸವರಾಜ ಎಂ. ಬೆಳಮಗಿ ಸಭೆ ನಿರ್ವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸರ್ವ ಸದಸ್ಯರು ಮತ್ತು ನಿರ್ದೇಶಕರು ಭಾಗವಹಿಸಬೇಕು ಎಂದು ಕೋರಿದರು.

ಒಟ್ಟು ಸೌಹಾರ್ದ ಅಡಿಯಲ್ಲಿ 10ಕೋಟಿ ರೂ. ದುಡಿಯುವ ಬಂಡವಾಳವಿದ್ದು, 10 ಕೋಟಿ ವಾರ್ಷಿಕ ರೂ. ವಹಿವಾಟು ನಡೆಸಿ ಪ್ರಸಕ್ತ ಸಾಲಿಗೆ 42ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ. ಅಲ್ಲದೆ, ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಟಾಪರ್‌ ಬಂದವರಿಗೆ 10ಸಾವಿರ ರೂ., ಸದಸ್ಯರಿಗೆ ಮರಣಾಂತರ ನಿಧಿ 25ರಿಂದ 50ಸಾವಿರ ರೂ. ಸೇರಿ ಹೀಗೆ ಹಲವು ಯೋಜನೆಗಳನ್ನು ಒದಗಿಸುತ್ತಾ ಬರಲಾಗಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next