Advertisement

ಬೀದರ್: ಜಿಲ್ಲೆಯಲ್ಲಿ 42 ಹೊಸ ಪಾಸಿಟಿವ್ ಪ್ರಕರಣ ; 80 ಪ್ರಕರಣ ಗುಣಮುಖ

10:28 PM Jul 27, 2020 | Hari Prasad |

ಬೀದರ್: ಗಡಿ ಜಿಲ್ಲೆಯಲ್ಲಿ ಸೋಮವಾರವೂ ಕೋವಿಡ್ 19 ಸೋಂಕು ಅಬ್ಬರಿಸಿದೆ.

Advertisement

ಇಂದು ಜಿಲ್ಲೆಯಲ್ಲಿ ಹೊಸದಾಗಿ 42 ಜನರಲ್ಲಿ ಸೋಂಕು ಪಾಸಿಟಿವ್ ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 1896ಕ್ಕೆ ಏರಿಕೆ ಆಗಿದೆ.

ಭಾಲ್ಕಿ ತಾಲೂಕಿನಲ್ಲಿ ಇಂದು ಅತಿ ಹೆಚ್ಚು 12 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೆ ಇನ್ನುಳಿದಂತೆ ಬೀದರ್ ತಾಲೂಕು 11, ಹುಮನಾಬಾದ್ – ಚಿಟಗುಪ್ಪ ತಾಲೂಕು 11, ಔರಾದ -ಕಮಲನಗರ ತಾಲೂಕು 6, ಬಸವಕಲ್ಯಾಣ ತಾಲೂಕು 1 ಹಾಗೂ ತೆಲಂಗಾಣದ ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟಾರೆ 1896 ಮಂದಿಗೆ ಈ ವೈರಸ್ ತಗುಲಿದೆ. ಬೀದರ ತಾಲೂಕಿನಲ್ಲಿ ಈವರೆಗೆ 685 ಜನರಿಗೆ, ಬಸವಕಲ್ಯಾಣ – ಹುಲಸೂರು ತಾಲೂಕು 402 ಜನ, ಹುಮನಾಬಾದ್ -ಚಿಟಗುಪ್ಪ ತಾಲೂಕು 356 ಮಂದಿ, ಭಾಲ್ಕಿ ತಾಲೂಕು 208 ಜನ, ಔರಾದ- ಕಮಲನಗರ ತಾಲೂಕು 233 ಮಂದಿ ಸೇರಿದ್ದಾರೆ.

Advertisement

ಇದುವರೆಗೆ 69 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸೋಮವಾರ 80 ಜನ ಸೇರಿ ಈವರೆಗೆ 1316 ಜನರು ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದರೆ ಇನ್ನೂ 507 ಸಕ್ರಿಯ ಪ್ರಕರಣಗಳಿವೆ.

ಇಂದಿನ ಸೋಂಕಿತರು: ಭಾಲ್ಕಿ ಪಟ್ಟಣದ ಮಹಾರಾಜಾ ಕಾಲೋನಿ 5, ಹಳೆಯ ವಾಟರ್ ಟ್ಯಾಂಕ್ ಬಳಿ 2, ಪೊಲೀಸ್ ಕ್ವಾಟ್ರಸ್, ಟಿ ಮಾರ್ಕೆಟ್ ಗಲ್ಲಿ, ಜಾಧವ್ ಆಸ್ಪತ್ರೆ 1, ನ್ಯೂ ಭೀಮ ನಗರ 1 ಮತ್ತು ತಾಲೂಕಿನ ಹಾಲಹಳ್ಳಿ 1 ಕೇಸ್ ಪತ್ತೆಯಾಗಿದೆ. ಬೀದರ ನಗರದ ಚಿಕ್‌ಪೇಟ್ 3, ಎಸ್ಟಿ ಕಚೇರಿ 3, ಗುಂಪಾ 2, ಮಡಿವಾಳ ಚೌಕ್, ಏಡೆನ್ ಕಾಲೋನಿಯಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

ಔರಾದ ತಾಲೂಕಿನ ಮುರ್ಗ್ (ಕೆ), ನಾಗೂರ (ಎನ್) ಗ್ರಾಮದಲ್ಲಿ ತಲಾ 2, ಸಂತಪುರ 1, ಕಮಲನಗರ 1, ಹುಮನಾಬಾದ್ ಪಟ್ಟಣದ ಕೋಳಿವಾಡ, ಮಾಣಿನಗರದಲ್ಲಿ ತಲಾ 1, ತಾಲೂಕಿನ ಹುಡಗಿ, ದುಬಲಗುಂಡಿ, ಸಿಂದಬಂದಗಿ, ಹಳ್ಳಿಖೇಡ (ಬಿ) ಗ್ರಾಮದಲ್ಲಿ ತಲಾ 2, ಚಿಟಗುಪ್ಪ ತಾಲೂಕಿನ ಬೇಮಳಖೇಡಾದಲ್ಲಿ 1, ಬಸವಕಲ್ಯಾಣದ ಶಿವನಗರ ಬಡಾವಣೆ ಹಾಗೂ ನೆರೆಯ ತೆಲಂಗಾಣದ ದಮ್ಮಾಲಗುಡ್ಡಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next