Advertisement

ಬಿಜೆಪಿ ಶಾಸಕರೆಲ್ಲ ಶೇ.40 ರಷ್ಟು ಮಾಮೂಲಿ ಫಿಕ್ಸ್ ಮಾಡಿದ್ದಾರೆ: ಮಾಜಿ ಸಚಿವ ಅನ್ಸಾರಿ

05:57 PM Nov 29, 2021 | Team Udayavani |

ಗಂಗಾವತಿ: ಬಿಜೆಪಿ ಶಾಸಕರೆಲ್ಲ ಶೇ 40 ರಷ್ಟು ಮಾಮೂಲಿ ಫಿಕ್ಸ್   ಮಾಡಿಕೊಂಡಿದ್ದಾರೆ.  ಬಿಜೆಪಿಯವರು ಜಾತಿ ಮತ್ತು ಪಕ್ಷಪಾತದಲ್ಲಿ ನಿರತರಾಗಿದ್ದಾರೆಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು. ಅವರು ರಾಯಚೂರು- ಕೊಪ್ಪಳ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದರು.

Advertisement

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಬಿಜೆಪಿ  ಶಾಸಕರು ಪರವಾನಗಿ ಸೇರಿದಂತೆ ಕಾರ್ಯಕ್ರಮಗಳನ್ನು ರದ್ದುಪಡಿಸುವ ಷಡ್ಯಂತ್ರ ರೂಪಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ನಾವು ಹಾಗೆಯೇ ಮಾಡುತ್ತೇವೆ. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಗೌಡ ಪಾಟೀಲ್ ಅವರಿಗೆ ಮತ ನೀಡುವಂತೆ ಗ್ರಾಮ ಪಂಚಾಯಿತಿ, ನಗರಸಭೆ ಸದಸ್ಯರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಬಿ ವಿ ನಾಯಕ, ಶಿವರಾಮಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ್ ಮಟ್ಟೂರು,ಮುಖಂಡರಾದ ಕೆ. ಕರಿಯಪ್ಪ, ನಾಗನಗೌಡ ಮಾಲತಿ ನಾಯಕ್, ಶಾಮೀದ್ ಮನಿಯಾರ್, ಶರಣಗೌಡ, ಸಿದ್ದಪ್ಪ ನೀರಲೂಟಿ, ಇಮ್ತಿಯಾಜ್ ಅನ್ಸಾರಿ, ಪಕೀರಪ್ಪ ಎಮ್ಮಿ ಇದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವೀರಭದ್ರ ನಾಯಕ, ಮಾರೆಪ್ಪನಾಯಕ, ಯಮನೂರಪ್ಪ ಕಾಂಗ್ರೆಸ್ ಪಕ್ಷ ಸೇರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next