Advertisement

ವಿಮಾನ ನಿಲ್ದಾಣದ ಶೇ.40ರಷ್ಟು ಕಾಮಗಾರಿ ಪೂರ್ಣ

01:22 PM Jan 27, 2023 | Team Udayavani |

ಹಾಸನ: ಬಹು ನಿರೀಕ್ಷಿತ ಹಾಸನ ವಿಮಾಣ ನಿಲ್ದಾಣ ಕಾಮಗಾರಿ ಚುರುಕಾಗಿ ನಡೆಯುತ್ತಿದ್ದು, ಇದು ವರೆಗೆ ಶೇ. 40 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಹೇಳಿದರು.

Advertisement

ಸಮಾರಂಭದ ಸಂದೇಶದಲ್ಲಿ ಅಭಿವೃದ್ಧಿ ಪ್ರಸ್ತಾಪ ಮಾಡಿರುವ ಸಚಿವರು, 536 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಪ್ಯಾಕೇಜ್‌-1ರಲ್ಲಿ 99.70 ಕೋಟಿ ರೂ. ವೆಚ್ಚದಲ್ಲಿ ರನ್‌ವೇ, ಏಪ್ರೋನ್‌ ಹಾಗೂ ಪೇರಿ ಮೀ. ರೋಡ್‌, ಏರ್‌ಪೋರ್ಟ್‌ ಸುತ್ತ ಕಾಂಪೌಂಡ್‌ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಪ್ಯಾಕೇಜ್‌ 2ರಲ್ಲಿ 57.44 ಕೋಟಿ ರೂ.ವೆಚ್ಚದಲ್ಲಿ ಟರ್ಮಿನಲ್‌ ಬಿಲ್ಡಿಂಗ್‌, ವಾಚ್‌ಟವರ್‌, ಎಟಿಸಿ ಕಟ್ಟಡ ಇತರೆ ಕಾಮಗಾರಿಗಳ ಕೆಲಸ ಪ್ರಾರಂಭವಾಗಿದೆ ಎಂದರು.

ಟಾಸ್ಕ್ ಫೋರ್ಸ್‌ ರಚನೆ: ಕಾಡಾನೆ ಮತ್ತು ಮಾನವ ಸಂಘರ್ಷವನ್ನು ನಿಯಂತ್ರಿಸಲು ಸಕಲೇಶಪುರವನ್ನು ಕೇಂದ್ರ ಸ್ಥಾನವಾಗಿರಿಸಿಕೊಂಡು ಬೇಲೂರು, ಆಲೂರು ಮತ್ತು ಸಕಲೇಶಪುರ ತಾಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಸರ್ಕಾರವು ಜಿಲ್ಲಾ ಆನೆ ಕಾರ್ಯ ಪಡೆ ರಚಿಸಿದೆ. ವನ್ಯಮೃಗಗಳ ದಾಳಿಯಿಂದ ಪ್ರಾಣ ಹಾನಿ ಸಂಭವಿಸಿದಾಗ ನೀಡುತ್ತಿದ್ದ ಪರಿಹಾರದ ಮೊತ್ತವನ್ನು 7.50 ಲಕ್ಷ ರೂ.ಗಳಿಂದ 15 ಲಕ್ಷ ರೂ. ಗಳಿಗೆ, ಶಾಶ್ವತ ದಿವ್ಯಾಂಗ ಪರಿಹಾರವನ್ನು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಪರಿಹಾರ ಮೊತ್ತ, ಬೆಳೆ ನಷ್ಟವನ್ನು ದ್ವಿಗುಣಗೊಳಿಸಲಾಗಿದೆ ಎಂದರು. 75 ಕೆರೆಗಳ ಅಭಿವೃದ್ಧಿ: ಅಮೃತ್‌ ಸರೋವರ ಯೋಜನೆಯಡಿ 2022-23 ನೇ ಸಾಲಿನಲ್ಲಿ ಜಿಲ್ಲೆ ಯಲ್ಲಿ ಒಟ್ಟು 75 ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 8 ಕೆರೆ ಕಾಮಗಾ ರಿಗಳು ಪೂರ್ಣ ಗೊಂಡಿದ್ದು, ಉಳಿದ ವುಗಳು ಪ್ರಗತಿ ಯಲ್ಲಿವೆ ಎಂದರು.

ಪ್ರತಿ ಕುಟುಂಬಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ನಳ ಸಂಪರ್ಕ ಕಲ್ಪಿಸಲಾ ಗುತ್ತಿದ್ದು ಒಟ್ಟು 838 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಡಿಸೆಂಬರ್‌ ಅಂತ್ಯಕ್ಕೆ 480 ಕಾಮ ಗಾರಿಗಳನ್ನು ಪೂರ್ಣಗೊಳಿಸಿ, 177 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬ್ಯಾಚ್‌ 3 ಮತ್ತು 4 ರ ಕಾಮಗಾರಿಗಳೂ ಪ್ರಗತಿಯಲ್ಲಿವೆ ಎಂದು ಹೇಳಿದರು.

10,254 ಮನೆಗಳು ಮಂಜೂರು: ಜಿಲ್ಲೆಗೆ ಬಸವ ವಸತಿ ಯೋಜನೆ, ಅಂಬೇಡ್ಕರ್‌ ವಸತಿ ಹಾಗೂ ಪ್ರಧಾನಮಂತ್ರಿ ಆವಾಸ್‌ ಯೋಜನೆಗಳಲ್ಲಿ ಒಟ್ಟು 10,254 ಮನೆಗಳು ಮಂಜೂರಾಗಿದ್ದು, ಇದುವರೆಗೆ 4,983 ಮನೆಗಳು ಪೂರ್ಣಗೊಂಡಿವೆ. ಉಳಿದ 4.099 ಮನೆಗಳು ಮೇಲ್ಛಾವಣಿ, ಗೋಡೆ ತಳಪಾಯ ಹಾಗೂ ವಿವಿಧ ಹಂತದಲ್ಲಿವೆ ಎಂದರು.

Advertisement

5 ನಮ್ಮ ಕ್ಲಿನಿಕ್‌ ಆರಂಭ: ಜಿಲ್ಲೆಯಲ್ಲಿ ಒಟ್ಟು 5 ನಮ್ಮ ಕ್ಲಿನಿಕ್‌ ಪ್ರಾರಂಭಿಸಲಾ ಗಿ ದೆ. 15 ಸಮುದಾಯ ಆರೋ ಗ್ಯ ಕೇಂದ್ರಗಳು, 7 ತಾಲೂಕು ಆಸ್ಪತ್ರೆಗಳು ಮತ್ತು ಒಂದು ಜಿಲ್ಲಾ ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯನ್ನು ಪರಿಣಾ ಮಕಾರಿಯಾಗಿ ಅನುಷ್ಠಾನಗೊಳಿಸ ಲಾಗಿದ್ದು, 2022 ನೇ ಸಾಲಿನಲ್ಲಿ 1.20 ಲಕ್ಷ ಫ‌ಲಾನುಭಗಳಿಗೆ 51.88 ಕೋಟಿ ರೂ ಮೊತ್ತದ ಉಚಿತ ಚಿಕಿತ್ಸೆಯನ್ನು ನೀಡಲಾಗಿದೆ.

ಪ್ಯಾರಾಗ್ಲೈಡಿಂಗ್‌ಗೆ ಚಾಲನೆ: ಸಕಲೇಶಪುರ ತಾಲೂಕಿನ ಹೊಸಹಳ್ಳಿ ಬೆಟ್ಟದಲ್ಲಿ ಪ್ಯಾರಾ ಗ್ಲೈಡ್‌ಗೆ ಈಗಾಗಲೇ ಅನುಮತಿ ನೀಡಿದೆ. ಜಿಲ್ಲೆಯ ಲ್ಲಿ 23.61 ಕೋಟಿ ರೂ.ಗಳ ಅನುದಾನದಲ್ಲಿ 26 ಪ್ರವಾಸೋದ್ಯಮ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ತಿಳಿಸಿದರು.

ಗೋಶಾಲೆಗಳ ಪ್ರಾರಂಭ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಅರಸೀಕೆರೆ ತಾಲೂಕಿನ ಹಬ್ಬನಘಟ್ಟ ಅಮೃತ್‌ ಮಹಲ್‌ ಕಾವಲಿನಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಿದ್ದು, ಪ್ರಸ್ತುತ 102 ಕ್ಕೂ ಹೆಚ್ಚು ಜಾನುವಾರು ಮತ್ತು 29 ಗಂಡುಕರುಗಳನ್ನು ಸಂರಕ್ಷಿಸಿ ನಿರ್ವಹಣೆ ಮಾಡಲಾಗುತ್ತಿದೆ. ಜಿಲ್ಲೆಗೆ ಮೂರು ಗೋಶಾಲೆ ತೆರೆಯಲು ಅನುಮೋದನೆ ನೀಡಿದ್ದು, ಚನ್ನರಾಯಪಟ್ಟಣದ ಅಮೃತ್‌ ಮಹಲ್‌ ತಳಿ ಸಂವರ್ಧನ ಉಪಕೇಂದ್ರ, ರಾಯಸಮುದ್ರ ಕಾವಲಿನ 25 ಎಕರೆಯಲ್ಲಿ 50 ಲಕ್ಷ ರೂ.ಅನುದಾನದಲ್ಲಿ ಗೋಶಾಲೆ ನಿರ್ವಹಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹಳೇಬಿಡು ಹೋಬಳಿ ಸಿದ್ಧಾಪುರ ಗ್ರಾಮದ 9.38 ಎಕರೆ ಜುàನಿನಲ್ಲಿ ಗೋಶಾಲೆ ತೆರೆಯಲು 50 ಲಕ್ಷ ರೂ.ಅನುದಾನ ಬಿಡುಗಡೆ ಮಾಡ ಲಾಗಿದೆ. ಅರಕಲಗೂಡು ತಾಲೂಕಿನಲ್ಲಿ ಗೋಶಾಲೆ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next