ಹೊಸದಿಲ್ಲಿ: ಭಾರತೀಯ ಸೇನೆಯು 40 ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆಯುದರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಬಹುದಾಗಿದ್ದ ಬಹು ದೊಡ್ಡ ಭಯೋತ್ಪಾದಕ ದಾಳಿಯೊಂದು ಈಗ ತಪ್ಪಿ ಹೋಗಿದೆ. ಕಥುವಾ ಪ್ರಾಂತ್ಯದಲ್ಲಿ ಈ ಸ್ಪೋಟಕಗಳನ್ನು ಸೋಮವಾರ ವಶಕ್ಕೆ ಪಡೆಯಲಾಗಿದೆ.
ಕಥುವಾ ಪ್ರಾಂತ್ಯದ ದೇವಲ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಭಾರತೀಯ ಸೇನೆ ಈ ಸ್ಪೋಟಕಗಳನ್ನು ವಶಪಡಿಸಿದೆ.
ಸ್ಪೋಟಕಗಳು ಮತ್ತು ಇತರ ಅನಾಹುತಕಾರಿ ವಸ್ತುಗಳೊಂದಿಗೆ ಓರ್ವನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ನಿಖರ ಮಾಹಿತಿ ಪಡೆದ ಸೇನಾ ಗುಪ್ತಚರ ದಳ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದವು.
ಪಾಕಿಸ್ಥಾನದ ಬಾಲಾಕೋಟ್ ಉಗ್ರ ಶಿಬಿರ ಮತ್ತೆ ತಲೆ ಎತ್ತಿದ್ದು, 500ಕ್ಕೂ ಹೆಚ್ಚು ಉಗ್ರರು ತರಬೇತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ದೊರೆತ ಬೆನ್ನಲ್ಲೇ ಈ ಸ್ಫೋಟಕಗಳು ಸಿಕ್ಕಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.