Advertisement

40% ಕಮಿಷನ್; 2006ರಿಂದ ಏನೇನು ಆಗಿದೆ? ನ್ಯಾಯಾಂಗ ತನಿಖೆಯಾಗಲಿ: ಸಿದ್ದರಾಮಯ್ಯ

05:05 PM Sep 21, 2022 | Team Udayavani |

ಬೆಂಗಳೂರು : ಭ್ರಷ್ಟಾಚಾರದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳು ಚರ್ಚೆಗೆ ಸಿದ್ದವಾಗಿವೆ.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆಯಡಿ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಪಡೆಯುವ ಆರೋಪ ಹಾಗೂ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಲು ನೋಟಿಸ್ ನೀಡಿದ್ದರು.

Advertisement

ವಿರೋಧಪಕ್ಷದ ನಾಯಕರು ನೀಡಿರುವ ನೋಟಿಸ್ ನಿಲುವಳಿ ಸೂಚನೆಯಡಿ ಬರುವುದಿಲ್ಲ. ಹೀಗಾಗಿ ತಿರಸ್ಕಾರ ಮಾಡಲಾಗಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರಕಟಿಸಿ, ಬೇರೆ ಯಾವುದಾದರೂ ರೀತಿಯಲ್ಲಿ  ಚರ್ಚೆಗೆ ಅವಕಾಶ  ಮಾಡಿಕೊಡಲಾಗುವುದು. ನಿಲುವಳಿ ಸೂಚನೆಯಡಿ ಬರುವುದಿಲ್ಲ ಎಂದರು.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಬಿ.ಸಿ.ನಾಗೇಶ್

ಆಗ ಸಿದ್ದರಾಮಯ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದು ಒಂದು ವರ್ಷವಾಗಿದೆ. ಆ.15ಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಆ ಸಂದರ್ಭದಲ್ಲಿ ಪ್ರಧಾನಿಗಳು ಭ್ರಷ್ಟಾಚಾರದ  ನಿರ್ಮೂಲನೆಗೆ ಕರೆ ಕೊಟ್ಟಿದ್ದಾರೆ. ಜನರ ತೆರಿಗೆ ಹಣ ಲೂಟಿಯಾಗುತ್ತಿದೆ. ಈ ವಿಚಾದ ಚರ್ಚೆ ಬೇಡ ಎಂಬುದು ಸರಿಯಲ್ಲ. ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಆಗ ಕಾನೂನು ಸಚಿವ ಮಾಧುಸ್ವಾಮಿಯವರು ವಿರೋಧಪಕ್ಷದ ನಾಯಕರು ನೋಟಿಸ್ ನೀಡಿರುವ ವಿಚಾರ ಇತ್ತೀಚಿನ ಘಟನೆಯಲ್ಲ. ನೋಟಿಸ್‍ಗೆ ಪೂರಕವಾದ ದಾಖಲೆ ಒದಗಿಸಿಲ್ಲ. ನಿಯಮ ಮಾರ್ಪಾಡು  ಮುನ್ನ ಆಕ್ಷೇಪಣೆಗಳಿದ್ದರೆ ಪರಿಗಣಿಸಬೇಕು ಎಂದು ಸಭಾಧ್ಯಕ್ಷರ ಗಮನ ಸೆಳೆದರು.

Advertisement

ಅಷ್ಟರಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕರು ಪ್ರಸ್ತಾಪ ಮಾಡಲು ಹೊರಟಿರುವ ವಿಚಾರ ಗಂಭೀರವಾದುದು, ಭ್ರಷ್ಟಾಚಾರ ಎಂಬುದು ನಿನ್ನೆಮೊನ್ನೆಯದಲ್ಲ. ಬೇರೆ ಬೇರೆ ರೂಪದಲ್ಲಿ  ಬೇರೆ ಬೇರೆ ಸಂದರ್ಭದಲ್ಲಿ ಬಂದಿದೆ. ಚರ್ಚೆಗೆ ಎಲ್ಲರೂ ಸಿದ್ದರಿರಬೇಕು. ಭ್ರಷ್ಟಾಚಾರವನ್ನು ಯಾವ ರೀತಿ ನಿಗ್ರಹಿಸಬೇಕು ಎಂದರು. ಭ್ರಷ್ಟಾಚಾರದ ವಿಚಾರದಲ್ಲಿ ಚರ್ಚೆಗೆ  ಸರ್ಕಾರ ಸಿದ್ದವಿದೆ. ಸಮಯ ನಿಗದಿ ಮಾಡಿ ಚರ್ಚೆಗೆ  ಅವಕಾಶ ಮಾಡಿಕೊಡಿ ಅಭ್ಯಂತರವಿಲ್ಲ ಎಂದು ಹೇಳಿದರು.

ಸಭಾಧ್ಯಕ್ಷರು ಮಾತನಾಡಿ, ಪಿ.ರಾಜೀವ್ ಅವರು ನೋಟಿಸ್ ನೀಡಿದ್ದು, 2013ರಿಂದ 2018ರ ನಡುವೆ ಆಗಿರುವ ಹಗರಣ, ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗಬೇಕೆಂದು ನೋಟಿಸ್ ಕೊಟ್ಟಿದ್ದಾರೆ. ಅವರು ನೀಡಿರುವ ಮತ್ತು ವಿರೋಧ ಪಕ್ಷದವರು ನೀಡಿರುವ ನೋಟಿಸ್ ಎರಡನ್ನು  ಸೇರಿಸಿ ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡುವುದಾಗಿ ತಿಳಿಸಿದರು.

ಈ ಹಂತದಲ್ಲಿ ಸಿದ್ದರಾಮಯ್ಯ, ನಮ್ಮ ಅವ ಅಷ್ಟೇ ಅಲ್ಲ ಕಳೆದ 2006ರಿಂದ ಏನೇನು ಆಗಿದೆ, ಅಕ್ರಮ, ಹಗರಣದ ಬಗ್ಗೆಯೂ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next