Advertisement

ಈ ವರ್ಷವೂ ಬಜೆಟ್ ನಲ್ಲಿ 40- 50 ಸಾವಿರ ಕೋಟಿ ಖೋತಾ : ಸಿಎಂ ಯಡಿಯೂರಪ್ಪ

11:35 AM Jan 09, 2021 | Team Udayavani |

ಕೊಪ್ಪಳ: ಕೋವಿಡ್, ಅತಿವೃಷ್ಟಿ, ಬರದಿಂದ ಈ ವರ್ಷದ ಬಜೆಟ್ ನಲ್ಲಿ 40-50 ಸಾವಿರ ಕೋಟಿ ಖೋತಾ ಆಗಲಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದರು.

Advertisement

ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್ ಅಡಿಗಲ್ಲು ಸಮಾರಂಭಪೂರ್ವದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅತಿವೃಷ್ಠಿ, ಬರಗಾಲ ಹಾಗೂ ಕೋವಿಡ್ ನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಹಾಗಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಗೆ ಅನುದಾನ ಕೊಡುವುದು ಕಷ್ಟವಾಗಿದೆ. ಅಲ್ಲದೆ, ಸರ್ಕಾರದ ವಿವಿಧ ಯೋಜನೆಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದ ಬಜೆಟ್ ಸಹಿತ ಕಡಿಮೆ ಇತ್ತು. ಈ ವರ್ಷದ ಬಜೆಟ್ ನಲ್ಲಿ 40 ರಿಂದ 50 ಸಾವಿರ ಕೋಟಿ ಖೋತಾ ಆಗಲಿದೆ. ಹಾಗಾಗಿ ಎಲ್ಲದಕ್ಕೂ ತೊಂದರೆಯಾಗಿದೆ ಎಂದರು.

ವಂಚಕ ಯುವರಾಜ್ ಜೊತೆಗೆ ಸೋಮಣ್ಣ ಸೇರಿ ಇತರೆ ಬಿಜೆಪಿ ನಾಯಕರು ಪೋಟೋದಲ್ಲಿ ಇರುವ ಕುರಿತು ನಾನೇನು ಪ್ರತಿಕ್ರಿಯೆ ಕೊಡಲಿ. ಅದು ತನಿಖೆಯಾಗುತ್ತಿದೆ. ಮುಂದಿನ ದಿನದಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ. ಯಾರ ಜೊತೆಗೋ ಪೋಟೋದಲ್ಲಿ ಇದ್ದಾಕ್ಷಣ ಅದು ಅಪರಾಧವಾಗಲ್ಲ ಎಂದರು.

ಇದನ್ನೂ ಓದಿ:ಲಸಿಕೆ ತಾಲೀಮಿಗೆ ಒಳಗಾದ ಡಿಸಿಎಂ: ಮೊದಲ ಹಂತದಲ್ಲಿ 8,405 ಕೋವಿಡ್‌ ಯೋಧರಿಗೆ ಲಸಿಕೆ

ಸಚಿವ ಸಂಪುಟ ವಿಸ್ತರಣೆಯು ಮುಂದೂಡುವ ವಿಚಾರ ಅನಿವಾರ್ಯವಾಗಿದೆ. ಕೇಂದ್ರದಲ್ಲಿ ಯಾವಾಗ ಸಂಪುಟ ವಿಸ್ತರಣೆ ಮಾಡು ಎಂದು ಹೇಳುತ್ತಾರೋ ಅವಾಗ ಮಾಡುತ್ತೇವೆ ಎಂದರು.

Advertisement

ವಿದ್ಯಾರ್ಥಿಗಳ ಸ್ಕಾಲರ್ ಶಿಫ್ ಕಡಿತ ಮಾಡಿಲ್ಲ. ಅದೆಲ್ಲವನ್ನೂ ನಾವು ಕೊಡುತ್ತಿದ್ದೇವೆ ಎಂದರಲ್ಲದೆ ದೇಶದಲ್ಲಿನ ದೊಡ್ಡ ಪ್ರಮಾಣದ ಟಾಯ್ಸ್ ಕ್ಲಸ್ಟರ್ ಗೆ ಅಡಿಗಲ್ಲು ನೆರವೇರಿಸಲಿದ್ದೇನೆ. ಈ ಕ್ಲಸ್ಟರ್ ದೇಶದ ಗಮನ ಸೆಳೆದಿದೆ. ಮುಂದೆ ಈ ಕ್ಲಸ್ಟರ್ ಪ್ರಾರಂಭವಾದ ಬಳಿಕ ಪ್ರಧಾನಿ ಮೋದಿ ಅವರನ್ನು ಕೊಪ್ಪಳಕ್ಕೆ ಆಹ್ವಾನಿಸಿ‌ ಉದ್ಘಾಟನೆ ಮಾಡಿಸುವ ಯೋಜನೆ ಹೊಂದಿದೆ ಎಂದರು.

ರೈತರ ಸ್ವಾಭಿಮಾನಿ ಕಾರ್ಡ್ ಹಾಗೂ ಕೃಷಿ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next