Advertisement

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

09:06 PM Dec 01, 2021 | Team Udayavani |

ಪಾಟ್ನಾ: ಬಿಹಾರದ ಎಲ್ಲ ಸಾರ್ವಜನಿಕ ದೇಗುಲಗಳಿಗೆ ಶೇ. 4 ತೆರಿಗೆ ವಿಧಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ.

Advertisement

ಬಿಹಾರದ ರಾಜ್ಯ ಧಾರ್ಮಿಕ ಟ್ರಸ್ಟ್‌ ಮಂಡಳಿಯು ಇಂತದ್ದೊಂದು ತೆರಿಗೆ ನಿಯಮ ಜಾರಿಗೊಳಿಸಿದೆ. ರಾಜ್ಯದ ಎಲ್ಲ ಸಾರ್ವಜನಿಕ ದೇಗುಲಗಳಿಗೆ ಇದು ಅನ್ವಯವಾಗಲಿದೆ. “ಎಲ್ಲ ದೇವಸ್ಥಾನಗಳು ಶೀಘ್ರವೇ ನೋಂದಣಿ ಮಾಡಿಕೊಳ್ಳಬೇಕು. ವಾರ್ಷಿಕವಾಗಿ ಗಳಿಸುವ ಆದಾಯದಲ್ಲಿ ಶೇ.4ನ್ನು ನಿರ್ವಹಣಾ ಶುಲ್ಕದ ರೀತಿಯಲ್ಲಿ ಸಲ್ಲಿಸಬೇಕು’ ಎಂದು ಹೇಳಲಾಗಿದೆ.

ಯಾವುದೇ ಮನೆಯ ಆವರಣದಲ್ಲಿ ದೇವಸ್ಥಾನವಿದ್ದು, ಅದಕ್ಕೆ ಆ ಮನೆಯವರು ಹೊರೆತುಪಡಿಸಿ ಬೇರಾರೂ ಪೂಜೆ ಸಲ್ಲಿಸುತ್ತಿಲ್ಲವೆಂದರೆ ಅದನ್ನು ಖಾಸಗಿ ದೇಗುಲವೆಂದು ಪರಿಗಣಿಸಲಾಗುವುದು. ಅವು ತೆರಿಗೆ ಕಟ್ಟುವ ಅವಶ್ಯಕತೆಯಿಲ್ಲ ಎನ್ನಲಾಗಿದೆ.

ಈ ವಿಚಾರವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್‌ ಸದಸ್ಯರಾಗಿರುವ ಕಾಮೇಶ್ವರ ಚೌಪಾಲ್‌ ಸೇರಿ ಅನೇಕರು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಜಿಜ್ಯಾ ತೆರಿಗೆ(ಮುಸ್ಲಿಂ ಸುಲ್ತಾನರಿಗೆ ಮುಸ್ಲಿಂ ಹೊರೆತು ಬೇರೆ ಧರ್ಮದವರು ಕಟ್ಟುತ್ತಿದ್ದ ತೆರಿಗೆ) ಎಂದು ಕರೆದಿದ್ದಾರೆ.

ಇದನ್ನೂ ಓದಿ : ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

Advertisement
Advertisement

Udayavani is now on Telegram. Click here to join our channel and stay updated with the latest news.

Next