Advertisement

Washington; ಅಮೆರಿಕ ವಿಮಾನ ಪತನ: 4 ಸಾವು

01:11 AM Jun 06, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ ನಿರ್ಬಂಧಿತ ವಾಯುಪ್ರದೇಶ ಪ್ರವೇಶಿಸಿದ್ದ ಸಣ್ಣ ವಾಣಿಜ್ಯ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ನಾಲ್ಕೂ ಮಂದಿ ಮೃತ ರಾಗಿರುವ ಘಟನೆ ವರದಿಯಾಗಿದೆ.

Advertisement

ದಾರಿತಪ್ಪಿ ಬಂದಿದ್ದ ವಿಮಾನವನ್ನು ಎಚ್ಚರಿಸಲು ಅಮೆರಿಕ ಯುದ್ಧ ವಿಮಾನಗಳು ಹರಸಾಹಸ ಪಟ್ಟಿದ್ದು, ವಿಮಾನಗಳ ವೇಗದಿಂದಾದ ಶಬ್ದಕ್ಕೆ ಇಡೀ ನಗರದ ಜನರು ಬೆಚ್ಚಿ ಬಿದಿದ್ದಾರೆ.

“ಟೆನ್ನಿಸೀ’ಯ ಎಲಿಜಿಬತ್‌ ಟೌನ್‌ನಿಂದ-ಲಾಂಗ್‌ ಐಲ್ಯಾಂಡ್‌ನ‌ ಮ್ಯಾಕ್‌ಅರ್ಥರ್‌ ವಿಮಾನ ನಿಲ್ದಾಣಕ್ಕೆ 4 ಮಂದಿಯಷ್ಟೇ ಇದ್ದಂತ ಸಣ್ಣ ವಾಣಿಜ್ಯ ವಿಮಾನ ತೆರಳುತ್ತಿತ್ತು. ಈ ವೇಳೆ ಸಂಪರ್ಕ ಕಳೆದುಕೊಂಡಿದ್ದು ವಾಷಿಂಗ್ಟನ್‌ನ ನಿಷೇಧಿತ ವಾಯುನೆಲೆಯನ್ನು ಪ್ರವೇಶಿಸಿದೆ.

ಕೂಡಲೇ ವಾಯುಪಡೆ ವಿಮಾನದೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದೆ. ಅನಂತರ ಸಾಧ್ಯವಾಗದ ಕಾರಣ ಯುದ್ಧವಿಮಾನ ಎಫ್-16 ಖುದ್ದು ತಾನೇ ಹಾರಾಟ ನಡೆಸಿ ಎಚ್ಚರಿಸಲು ತೆರಳಿದೆ. ಆದರೆ ಆಗಲೂ ಪ್ರಯತ್ನ ವಿಫ‌ಲವಾಗಿದ್ದು, ಅನಂತರದ ಕೆಲವೇ ನಿಮಿಷಗಳಲ್ಲಿ ವಾಣಿಜ್ಯವಿಮಾನ ವರ್ಜೀನಿಯದ ಮಾಂಟೆಬೆಲ್ಲೋ ಪರ್ವತ ಪ್ರದೇಶದ ಬಳಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next