ದುಬಾೖ: ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನದ ಈ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಯುಎಇಯಲ್ಲಿನ ಭಾರತೀಯ ದೂತಾವಾಸ ಕಚೇರಿ ನಿರ್ಧರಿಸಿದೆ. ಅ.2ರಿಂದ ಮುಂದಿನ ವರ್ಷ ಜನವರಿ ಯವರೆಗೆ ಇಡೀ ಯುಎಇಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದಕ್ಕೆ ದುಬಾೖ ಕ್ರೀಡಾ ಇಲಾಖೆ ಹಾಗೂ ದುಬಾೖ ನಗರಾಡಳಿತ ಸಾಥ್ ನೀಡಲಿವೆ.
ಯುಎಇ ಅಧ್ಯಕ್ಷ ಶೇಖ್ ಖಲೀಫಾ ಅವರು, 2019ನೇ ವರ್ಷವನ್ನು “ಸಹಿಷ್ಣುತೆಯ ವರ್ಷ’ವೆಂದು ಘೋಷಿ ಸುವ ಮೂಲಕ ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸಿರು ವುದು ಕಾರ್ಯಕ್ರಮಗಳ ಆಯೋಜನೆಗೆ ಮತ್ತಷ್ಟು ಉತ್ಸಾಹ ತುಂಬಿದೆ. 2ರಂದು ದುಬಾೖನ ಝಬೀಲ್ ಪಾರ್ಕ್‌ನಲ್ಲಿ 4 ಕಿ.ಮೀ. “ಶಾಂತಿ ನಡಿಗೆ’ ಆಯೋಜಿಸ ಲಾಗುತ್ತದೆ. ಇದು ವಾಕಥಾನ್ ಮಾದರಿ ಸ್ಪರ್ಧೆಯಾಗಿದ್ದು, ವಿಜೇತರಿಗೆ ಭಾರತಕ್ಕೆ ಭೇಟಿ ನೀಡಲು ಉಚಿತ ಏರ್‌ಟಿಕೆಟ್ ನೀಡಲಾಗುತ್ತದೆ.
ಸೋಲಾರ್ ಲ್ಯಾಂಪ್ ತರಬೇತಿ: ಅದೇ ದಿನ, ಶಾಲಾ ಮಕ್ಕಳಿಗಾಗಿ ಸೋಲಾರ್ ಲ್ಯಾಂಪ್ ತಯಾರಿಕೆ ಕಲಿಕಾ ಕಾರ್ಯಾಗಾರ ಏರ್ಪಡಿಸಲಾಗುತ್ತದೆ. ಶಾರ್ಜಾ ಇಂಡಿಯನ್ ಸ್ಕೂಲ್‌ನ ಸುಮಾರು 1,000 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸುಮಾರು 200 ಸೋಲಾರ್ ಲ್ಯಾಂಪ್ ತಯಾರಿಕೆ ಗುರಿ ಹೊಂದ ಲಾಗಿದೆ. 5ರಂದು ದುಬಾೖನ ಇಂಡಿಯನ್ ಬ್ಯುಸಿನೆಸ್ ಆ್ಯಂಡ್ ಪ್ರೊಫೆಷನಲ್ ಕೌನ್ಸಿಲ್ ವತಿ ಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಪ್ರವಚನ, ಭಾಷಾ ಹಬ್ಬ: 17ರಂದು ಭಾರತದ ವಿದೇಶಾಂಗ ಇಲಾಖೆ ಸಹಾಯಕ ಸಚಿವ ವಿ. ಮುರಳೀಧರನ್‌ರವರ ಪ್ರವಚನ ಕಾರ್ಯ ಕ್ರಮವಿದೆ. ನ.8ರಿಂದ ಡಿ. 20ರವರೆಗೆ ಭಾರತೀಯ ಭಾಷಾ ಹಬ್ಬ ನಡೆಯಲಿದೆ. ಭಾರತೀಯ ದೂತಾವಾಸ ಕಚೇರಿಯಲ್ಲಿ ಗಾಂಧೀಜಿ ಜೀವನ ಗಾಥೆಗೆ ಸಂಬಂಧಿಸಿದ 100 ಅತಿ ಶ್ರೇಷ್ಠ ಫೋಟೋಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಹೀಗೆ, ನಾನಾ ಕಾರ್ಯಕ್ರಮಗಳು ಜ. 10ರಂದು ವಿಧ್ಯುಕ್ತವಾಗಿ ಕೊನೆಗೊಳ್ಳುತ್ತವೆ.
ಪ್ಲಾಸ್ಟಿಕ್ “ಚರಕ’ ಅನಾವರಣ: ಪ್ಲಾಸ್ಟಿಕ್ ತ್ಯಾಜ್ಯ ದಿಂದ ತಯಾರಿಸಲಾಗಿರುವ 1,650 ಕೆಜಿ ತೂಕದ ಚರಕವನ್ನು ನೋಯ್ಡಾದ ಸೆಕ್ಟರ್ 94ನಲ್ಲಿ ಸೋಮ ವಾರ ಅನಾವರಣ ಗೊಳಿಸಲಾಯಿತು.