Advertisement

Security Breach: ಸಂಸತ್‌ ನೊಳಗೆ ಬಣ್ಣದ ಹೊಗೆ… ಏನಿದು ಕಲರ್‌ ಗ್ಯಾಸ್‌ ಕ್ಯಾನಿಸ್ಟರ್?

06:28 PM Dec 13, 2023 | Team Udayavani |

ಲೋಕಸಭೆಯೊಳಗೆ ಬುಧವಾರ(ಡಿಸೆಂಬರ್‌ 13) ಇಬ್ಬರು ಯುವಕರು ನುಗ್ಗಿ ಹಳದಿ ಹೊಗೆಯನ್ನು ಹರಡುವ ಗಂಭೀರವಾದ ಭದ್ರತಾ ಲೋಪ ಎಸಗುವ ಮೂಲಕ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮೂಲದ ಮನೋರಂಜನ್‌, ಸಾಗರ್‌ ಶರ್ಮಾ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.‌ ಇದರಲ್ಲಿ ಇಬ್ಬರು ಪರಾರಿಯಾಗಿದ್ದಾರೆಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ರುಕ್ಮಿಣಿ ವಸಂತ್‌,ಸಿರಿ ರವಿಕುಮಾರ್..‌ 2023 ರಲ್ಲಿ ಅಮೋಘ ನಟನೆ ಮೂಲಕ ಗಮನ ಸೆಳೆದ 5 ನಟಿಯರು

ಲೋಕಸಭಾ ಕಾರ್ಯಾಲಯ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಒಬ್ಬ ಯುವಕ ಲೋಕಸಭಾ ಸಂಸದರ ಡೆಸ್ಕ್‌ ಹತ್ತಿ ಓಡಾಡುತ್ತಿದ್ದು, ನಂತರ ಹಳದಿ ಬಣ್ಣದ ಹೊಗೆಯ ಸ್ಪ್ರೇ ಮಾಡಿದ್ದರು. ಈ ಸಂದರ್ಭದಲ್ಲಿ ಕೆಲವು ಸಂಸದರು ಮತ್ತು ಭದ್ರತಾ ಸಿಬಂದಿಗಳು ಇಬ್ಬರನ್ನೂ ಸೆರೆ ಹಿಡಿದಿದ್ದರು.

ಏನಿದು ಕಲರ್‌ ಗ್ಯಾಸ್‌ ಕ್ಯಾನಿಸ್ಟರ್?

ಇಬ್ಬರು ಲೋಕಸಭೆಯೊಳಗೆ ಪ್ರವೇಶಿಸುವ ಮೊದಲು ಶೂನೊಳಗೆ ಹಳದಿ ಬಣ್ಣದ ಸ್ಮೋಕ್‌ ಕ್ಯಾನ್ಸ್‌ ಅಡಗಿಸಿಕೊಂಡು ಬಂದಿದ್ದರು. ನಂತರ ದಿಢೀರನೆ ಸರ್ವಾಧಿಕಾರ ನಡೆಯಲ್ಲ ಎಂದು ಘೋಷಣೆ ಕೂಗುತ್ತಾ ಸಂಸದರತ್ತ ದೌಡಾಯಿಸಿದ್ದರು.

Advertisement

ಹಾಗಾದರೆ ಈ ಇಬ್ಬರು ಯುವಕರು ಬಳಸಿದ ಕಲರ್‌ ಗ್ಯಾಸ್‌ ಕ್ಯಾನಿಸ್ಟರ್‌ ಅಂದರೆ ಏನು? ಇದು ಅಪಾಯಕಾರಿಯೇ ಎಂಬ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಸ್ಮೋಕ್‌ ಕ್ಯಾನ್ಸ್‌ ಅಥವಾ ಹೊಗೆ ಬಾಂಬ್‌ ಗಳು ಬಹುತೇಕ ಎಲ್ಲಾ ದೇಶಗಳಲ್ಲೂ ಕಾನೂನುಬದ್ಧವಾಗಿದೆ. ಇದು ಎಲ್ಲಾ ಚಿಲ್ಲರೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಗದಿತ ಉದ್ದೇಶಗಳಿಗೆ ಅನುಗುಣವಾಗಿ ಇದನ್ನು ಬಳಸಲಾಗುತ್ತದೆ. ಈ ಹೊಗೆ ಕ್ಯಾನಿಸ್ಟರ್‌ ಅನ್ನು ಸೈನಿಕರು ಹಾಗೂ ನಾಗರಿಕರು, ಫೋಟೋಶೂಟ್‌ ಸಂದರ್ಭದಲ್ಲಿ ಬಳಸುತ್ತಾರೆ.

ಮಿಲಿಟರಿ ಮತ್ತು ಪೊಲೀಸರ ಕಾರ್ಯಾಚರಣೆ ವೇಳೆ ಈ ಹೊಗೆ ಕ್ಯಾನಿಸ್ಟರ್‌ ಅನ್ನು ಬಳಸುತ್ತಾರೆ..ಇದರಿಂದ ದಟ್ಟನೆಯ ಹೊಗೆ ಹೊರ ಬರುತ್ತದೆ. ಈ ದಟ್ಟ ಹೊಗೆಯಿಂದಾಗಿ ಪ್ರತಿಭಟನಾಕಾರರು ಅಥವಾ ಶತ್ರುಗಳ ಕಣ್ಣಿಗೆ ಅಗೋಚರವಾಗುವಂತೆ ಮಾಡುತ್ತದೆ. ಈ ಹೊಗೆ ಕ್ಯಾನಿಸ್ಟರ್‌ ಅನ್ನು ವೈಮಾನಿಕ ದಾಳಿ ವಲಯ, ಸೇನಾ ಲ್ಯಾಂಡಿಂಗ್ಸ್‌ ಮತ್ತು ಸ್ಥಳಾಂತರದ ಸ್ಥಳವನ್ನು ಗುರುತಿಸಲು ಬಳಸಲಾಗುತ್ತದೆ. ಫೋಟೋಗ್ರಫಿ ಸಂದರ್ಭದಲ್ಲೂ ಹೆಚ್ಚು ಪರಿಣಾಮಕಾರಿ ಸನ್ನಿವೇಶ ಸೃಷ್ಟಿಸಲು ಸ್ಮೋಕ್‌ ಕ್ಯಾನಿಸ್ಟರ್‌ ಬಳಸುವುದು ಸಾಮಾನ್ಯವಾಗಿದೆ. ಅದೇ ರೀತಿ ಕ್ರೀಡೆಗಳಲ್ಲಿ ಮುಖ್ಯವಾಗಿ ಫುಟ್ಬಾಲ್‌ ಕ್ರೀಡೆಯ ಸಂದರ್ಭದಲ್ಲಿ ತಮ್ಮ ಕ್ಲಬ್‌ ಗಳನ್ನು ಬಿಂಬಿಸುವ ಬಣ್ಣದ ಸ್ಮೋಕ್‌ ಕ್ಯಾನಿಸ್ಟರ್‌ ಗಳನ್ನು ಅಭಿಮಾನಿಗಳು ಬಳಸುವುದು ಸಾಮಾನ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next