Advertisement

ನೇಪಾಳದಲ್ಲಿ ಸರೋವರಕ್ಕೆ ಬಿದ್ದ ಕಾರು : ಒಂದೇ ಕುಟುಂಬದ ನಾಲ್ವರು ಭಾರತೀಯರು ಸಾವು

08:35 PM Nov 14, 2021 | Team Udayavani |

ಕಠ್ಮಂಡು : ನೇಪಾಳದ ರೌತಹತ್‌ ಜಿಲ್ಲೆಯಲ್ಲಿ ಕಾರೊಂದು ಸರೋವರಕ್ಕೆ ಬಿದ್ದಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರನ್ನು ಬಿಹಾರ ಮೂಲದ ದೀನನಾಥ ಸಾಹ್‌(25), ಅರುಣ್‌ ಸಾಹ್‌(30), ದಿಲೀಪ್‌ ಮಹತೊ(28) ಮತ್ತು ಅಮಿತ್‌ ಮಹತೊ(27) ಎಂದು ಗುರುತಿಸಲಾಗಿದೆ.

Advertisement

ಅವರೆಲ್ಲರೂ ನೇಪಾಳದ ದೇವಾನಿ ಗೊನಾಹಿ ಜಿಲ್ಲೆಯ ಸಂಬಂಧಿಕರ ಮನೆಯಲ್ಲಿ ಛತ್‌ ಪೂಜೆ ಕಾರ್ಯಕ್ರಮಕ್ಕೆಂದು ತೆರಳಿದ್ದರು.

ಪೂಜೆ ಮುಗಿಸಿ ಶನಿವಾರ ರಾತ್ರಿ ಮದ್ಯಪಾನ ಸೇವಿಸಿ ಕಾರಿನಲ್ಲಿ ಹೊರಟಿದ್ದಾರೆ. ಝುಂಖುನ್ವಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ, ಕಾರು ಸರೋವರದೊಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಪಾಕ್‌ ಜೈಲಿನಿಂದ 20 ಭಾರತೀಯ ಮೀನುಗಾರರ ಬಿಡುಗಡೆ : ಸೋಮವಾರ ಭಾರತಕ್ಕೆ ಹಸ್ತಾಂತರ

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next