ವಾಷಿಂಗ್ಟನ್ : ಅಮೆರಿಕದ ಸಂಸತ್ ಸಮಿತಿಗೆ ಭಾರತೀಯ ಮೂಲದ ನಾಲ್ವರನ್ನು ನೇಮಕ ಮಾಡಲಾಗಿದೆ. ಸಂಸತ್ ಸದಸ್ಯೆ ಪ್ರಮೀಳಾ ಜಯಪಾಲ್ ಅವರು
Advertisement
ನ್ಯಾಯಾಂಗ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಆ್ಯಮಿ ಬೆರಾ ಗುಪ್ತಚರ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳ ನಿರ್ವಹಣೆ ಸಮಿತಿಗೆ ಸದಸ್ಯರಾಗಿದ್ದಾರೆ. ಸಂಸದರಾಗಿರುವ ರಾಜ ಕೃಷ್ಣಮೂರ್ತಿ ಹಾಗೂ ರೋ ಖನ್ನಾ ಅವರು ಚೀನಾ ಮೇಲಿನ ಕಣ್ಗಾವಲಿಗಾಗಿ ಅಮೆರಿಕ ಸಂಸತ್ ರೂಪಿಸಿರುವ ಕಣ್ಗಾವಲು ಹಾಗೂ ಕಾರ್ಯತಂತ್ರ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.