Advertisement

ಪಶ್ಚಿಮ ಬಂಗಾಳ ಶಾಲೆಯಲ್ಲಿ ಬಾಂಬ್ ಸ್ಫೋಟ; ನಾಲ್ವರ ಬಂಧನ

02:31 PM Sep 18, 2022 | Team Udayavani |

ಕೋಲ್ಕತ: ಪಶ್ಚಿಮ ಬಂಗಾಳದ ಉತ್ತರ 24-ಪರಗಣ ಜಿಲ್ಲೆಯ ತಿಟಗಢ ಪ್ರದೇಶದ ಶಾಲೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

18 ರಿಂದ 19 ವರ್ಷ ವಯಸ್ಸಿನ ಆರೋಪಿಗಳನ್ನು ಮಧ್ಯರಾತ್ರಿ ಕಮರ್ಹಾಟಿ ಮತ್ತು ತಿಟಗಢ ಪ್ರದೇಶಗಳಿಂದ ಬಂಧಿಸಲಾಗಿದೆ ಎಂದು ಬ್ಯಾರಕ್‌ಪೋರ್ ಪೊಲೀಸ್ ಕಮಿಷನರೇಟ್‌ನ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಚೀನದಲ್ಲಿ ಬಸ್ ಪಲ್ಟಿಯಾಗಿ 27 ಜನ ಸಾವು, ಹಲವರಿಗೆ ಗಾಯ

“ನಾವು ಅವರನ್ನು ವಿಚಾರಣೆ ಮಾಡುವ ಮೂಲಕ ಎಲ್ಲಾ ಸಂಭಾವ್ಯ ಅಂಶಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇವೆ. ಬಂಧಿತರಲ್ಲಿ ಒಬ್ಬ ಕಮರ್ಹಾಟಿ ಮೂಲದವನಾಗಿದ್ದು, ಉಳಿದವರು ತಿಟಗಢ್‌ನವರು ಎಂದು ಅವರು ಹೇಳಿದರು.

ಶನಿವಾರ ತರಗತಿಗಳು ನಡೆಯುತ್ತಿರುವಾಗ ಶಾಲೆಯ ಕಟ್ಟಡದ ಮೇಲ್ಛಾವಣಿಯ ಮೇಲೆ ಕಚ್ಚಾ ಬಾಂಬ್ ಸ್ಫೋಟಗೊಂಡಿತ್ತು. ಮೂರು ಅಂತಸ್ತಿನ ಕಟ್ಟಡದ ಮೊದಲ ಎರಡು ಮಹಡಿಯಲ್ಲಿರುವ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದ ಕಾರಣ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಆರೋಪಿಗಳು ಪ್ರಬಲ ಕಚ್ಚಾ ಬಾಂಬ್‌ ಎಸೆಯಲು ತಮ್ಮ ಆರಂಭಿಕ ಯೋಜನೆಯನ್ನು ಬದಲಾಯಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ . ಕೃತ್ಯ ನಡೆಸಲು ಪಕ್ಕದ ಕಟ್ಟಡದ ಛಾವಣಿಯ ಮೇಲೆ ಹತ್ತಿದ್ದು, ಬಂಧಿತರಲ್ಲಿ ಮೂವರು ಶಾಲೆಯ ಹಳೆ ವಿದ್ಯಾರ್ಥಿಗಳು ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next