ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದಿಂದ 4 ಆನೆಗಳನ್ನು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದ ಮೇರೆಗೆ ಮಧ್ಯಪ್ರದೇಶಕ್ಕೆ ಹಸ್ತಾಂತರಿಸಲಾಗಿದೆ.
Advertisement
ಶಿಬಿರದ ಕೃಷ್ಣ, ಗಜ, ಮಹರ್ಷಿ ಮತ್ತು ಪೂಜಾ ಎಂಬ 4 ಆನೆಗಳನ್ನು ರವಾನಿಸಲಾಗಿದೆ. ಮಧ್ಯಪ್ರದೇಶದ ಹುಲಿ ಸಂರಕ್ಷಿತ ಪ್ರದೇಶಕ್ಕೆ 5 ಸಾಕಾನೆಗಳನ್ನು ಕಳುಹಿಸಲು ಚಿಂತಿಸಲಾಗಿತ್ತು.
ಆದರೆ ಗಣೇಶ ಆನೆ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಈಗ ಎರಡು ಗಂಡು ಹಾಗೂ ಎರಡು ಆನೆಗಳನ್ನು ರವಾನಿಸಲಾಗಿದೆ. ಕಳೆದ ತಿಂಗಳು ನಿಸರ್ಗ ಎಂಬ ಸಾಕಾನೆಯನ್ನೂ ಕಳುಹಿಸಲಾಗಿತ್ತು.