ಮೈಸೂರು: ಜಿಲ್ಲೆಯಲ್ಲಿ ಕೋವಿಡ್ 19 ವೈರಸ್ ಅಟ್ಟಹಾಸ ಮುಂದುವರಿದಿದ್ದು, ಶುಕ್ರವಾರ ಮೈಸೂರಿನ ಶಾಸಕರೊಬ್ಬರ ಇಬ್ಬರು ಆಪ್ತ ಸಹಾ ಯಕರು, ನಾಲ್ವರು ವಿಚಾರಣಾಧೀನ ಕೈದಿಗಳು, ಓರ್ವ ತರಬೇತಿ ನಿರತ ಡಿವೈಎಸ್ಪಿ ಸೇರಿದಂತೆ 51 ಮಂದಿಯಲ್ಲಿ ಸೋಂಕು ದೃಢ ಪಟ್ಟಿದ್ದರೆ, ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಅರ್ಧ ಶತಕ ಬಾರಿಸುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಬುಧವಾರ 59, ಗುರವಾರ 52 ಮಂದಿ ಸೋಂಕಿತರು ಪತ್ತೆಯಾ ಗಿದ್ದು, ಶುಕ್ರವಾರ 51 ಮಂದಿ ಸೇರಿದಂತೆ 162 ಮಂದಿ ಸೋಂಕಿತರು ಮೂರೇ ದಿನದಲ್ಲಿ ಪತ್ತೆಯಾದಂತಾಗಿದೆ. ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಕೋವಿಡ್ 19 ಮತ್ತಷ್ಟು ಆತಂಕ ಹೆಚ್ಚಿಸಿದೆ.
ಮಹಿಳೆ ಸೇರಿ 4 ಸಾವು: ಉಸಿರಾಟ, ಕಫ, ಜ್ವರದಿಂದ ಬಳಲುತ್ತಿದ್ದ 83, 42 ಹಾಗೂ 75 ವರ್ಷದ ಮೂವರು ಪುರುಷರು ಹಾಗೂ 65 ವರ್ಷದ ವೃದಟಛಿ ಮಹಿಳೆ ಶುಕ್ರವಾರ ಮೃತಪಟ್ಟಿ ದ್ದಾರೆ. ನಾಲ್ವರ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತವೇ ನೆರವೇರಿಸಿದೆ.
25 ಮಂದಿ ಗುಣಮುಖ: ಶುಕ್ರವಾರವೂ ಸೋಂಕು ಅರ್ಧಶತಕ ದಾಟಿದ್ದು, ಶಾಸಕ ರೊಬ್ಬರ ಇಬ್ಬರು ಆಪ್ತ ಸಹಾಯಕರು ಸೇರಿ ದಂತೆ 51 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾ ಗಿದೆ. 25 ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ. ಇದುವರೆಗೂ 361 ಮಂದಿ ಗುಣಮುಖವಾಗಿದ್ದು, 20 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಸೀಲ್‌ಡೌನ್ ಪ್ರದೇಶಗಳು: ಶುಕ್ರವಾರದ ಸೋಂಕಿನ ಪ್ರಕರಣಗಳಲ್ಲಿ ಕೇಂದ್ರ ಕಾರಾ ಗೃಹದ ನಾಲ್ವರು ಸಿಬ್ಬಂದಿಗೆ ಸೋಂಕು ತಗು ಲಿದೆ. ನಗರ ಪಾಲಿಕೆ ಸುತ್ತಮುತ್ತಲ ಪ್ರದೇಶ ದಲ್ಲೂ ಸೋಂಕು ಪತ್ತೆಯಾಗಿದೆ. ಸಯ್ನಾಜಿ ರಾವ್ ರಸ್ತೆ, ಹೆಬ್ಟಾಳು 2ನೇ ಹಂತದ 5ನೇ ಕ್ರಾಸ್, ಅಜೀಜ್ ನಗರ, ರಾಜೀವ್ ನಗರ ಬೀಡಿ ಕಾಲೋನಿ, ರಾಮಕೃಷ್ಣನಗರದ ವಾಸು ಲೇಔಟ್, ಮೇಟಗಳ್ಳಿ 2ನೇ ಮೇನ್, ಕುವೆಂಪುನಗರ ಮೊದಲನೇ ಹಂತ, ಅಶೋಕ ರಸ್ತೆಯ ಪಶ್ಚಿಮ ರಸ್ತೆ, ಮಂಡಿ ಮೊಹಲ್ಲಾದ 4ನೇ ಕ್ರಾಸ್,
ಅಶೋಕ ರಸ್ತೆಯ ಸೋಜಿ ಬೀದಿ, ವಿಜಯನಗರ 3ನೇ ಹಂತ, ಜೆ.ಪಿ. ನಗರ 9ನೇ ಕ್ರಾಸ್, ಪೊಲೀಸ್ ಅಕಾಡೆಮಿ, ಸೊಪ್ಪಿನಕೇರಿ, ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣೆ ಹತ್ತಿರ, ಗಾಂಧಿನಗರದ 3 ಹಾಗೂ 11ನೇ ಕ್ರಾಸ್, ಲಕ್ಷ್ಮೀಪುರಂ, ಕೆ.ಸಿ. ಲೇಔಟ್, ಶಕ್ತಿನಗರ, ರಾಮಾನುಜ ರಸ್ತೆ, ಸ್ಪಟಿಕ ಅಪಾರ್ಟ್‌ಮೆಂಟ್, ರಾಮೇನಹಳ್ಳಿ, ಬೆಳವತ್ತ ಗ್ರಾಮ, ಸರಗೂರು ಪೊಲೀಸ್ ಠಾಣೆ, ಕೆ.ಆರ್.ನಗರ, ತಿ.ನರಸೀಪುರ, ಸಾಲಿ ಗ್ರಾಮದಲ್ಲಿ ಸೋಂಕು ದೃಢಪಟ್ಟಿದ್ದು ಸೀಲ್ ಡೌನ್ ಮಾಡಲಾಗಿದೆ.