Advertisement
ಹೊಸದಿಲ್ಲಿ: ನೆರೆಯ ರಾಷ್ಟ್ರಗಳಾದ ಚೀನ ಮತ್ತು ಪಾಕಿಸ್ಥಾನ ಗಡಿಯಲ್ಲಿ ಪದೇ ಪದೆ ಕಾಲುಕೆರೆದು ಜಗಳ ಕಾಯು ತ್ತಿರುವ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸೇನೆಗೆ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನ, ಸಮರ ನೌಕೆ ಹಾಗೂ ಇತರ ಸೇನಾ ಪರಿಕರಗಳ ಖರೀದಿ ಸಹಿತ ಸೇನಾಪಡೆಗಳ ಬಲವರ್ಧ ನೆಗೆ ಕಳೆದ ವರ್ಷಕ್ಕಿಂತ ಶೇ. 19ರಷ್ಟು ಹೆಚ್ಚಿನ ಮೊತ್ತವನ್ನು ಮೀಸಲಿರಿಸಲಾಗಿದೆ.
Related Articles
Advertisement
ಪೊಲೀಸ್ ಪಡೆಗಳ ಬಲವರ್ಧನೆಗೆ ಒತ್ತು2021-22ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ ಗೃಹ ವ್ಯವಹಾರಗಳ ಖಾತೆಗೆ 1,66, 547 ಕೋ. ರೂ. ಅನುದಾನವನ್ನು ನೀಡ ಲಾ ಗಿದೆ. ಈ ಪೈಕಿ ಗರಿಷ್ಠ ಮೊತ್ತ ಪೊಲೀಸ್ ಪಡೆಗಳ ಬಲವರ್ಧನೆ ಮತ್ತು ಜನಗಣತಿ ಸಂಬಂಧಿ ಕಾರ್ಯಗಳಿಗೆ ವಿನಿಯೋಗವಾಗಲಿದೆ. ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್ ಮತ್ತಿತರ ಪೊಲೀಸ್ ಪಡೆಗಳಿಗೆ 1,03,802.52ಕೋ. ರೂ., ಹೊಸದಾಗಿ ರಚನೆ ಯಾದ ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಕ್ರಮವಾಗಿ 30,757 ಕೋ. ರೂ. ಮತ್ತು 5,958ಕೋ. ರೂ.ಗಳನ್ನು ಮೀಸಲಿಡಲಾಗಿದೆ. ಕೇಂದ್ರೀಯ ವಲಯದ ಯೋಜನೆಗಳಿಗೆ 1,641.12ಕೋ. ರೂ. ಮತ್ತು ವಿಪತ್ತು ನಿರ್ವ ಹಣೆಗೆ 481.61ಕೋ. ರೂ.ಗಳನ್ನು ನಿಗದಿಗೊಳಿ ಸಲಾಗಿದೆ. ಇನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಅರ್ಹತೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಲೋಕಪಾಲ್‌ಗೆ 39.67ಕೋ. ರೂ.
ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಯಾಗಿರುವ ಲೋಕಪಾಲ್‌ಗೆ ಕೇಂದ್ರ ಸರಕಾರ ತನ್ನ ಮುಂಬರುವ ಬಜೆಟ್‌ನಲ್ಲಿ ಸರಿಸುಮಾರು 40ಕೋ. ರೂ.ಗಳಷ್ಟು ಅನುದಾನವನ್ನು ಮೀಸಲಿರಿಸಿದೆ. ಲೋಕಪಾಲ್ ಸ್ಥಾಪನೆ ಮತ್ತು ನಿರ್ಮಾಣ ಸಂಬಂಧಿ ಕಾರ್ಯಗಳಿಗಾಗಿ ಈ ಬಾರಿ ಲೋಕ ಪಾಲ್‌ಗೆ 39.67ಕೋ. ರೂ. ತೆಗೆದಿರಿಸಲಾಗಿದೆ. ಇದೇ ವೇಳೆ ಕೇಂದ್ರೀಯ ಜಾಗೃತಿ ಆಯೋಗಕ್ಕೆ 38.67ಕೋ. ರೂ.ಗಳನ್ನು ಮುಂಬರುವ ಬಜೆಟ್‌ನಲ್ಲಿ ಕಾದಿರಿಸಲಾಗಿದೆ. ವರ್ಷಾಂತ್ಯದಲ್ಲಿ ಗಗನಯಾನ
ಇಸ್ರೋ ಕೈಗೊಳ್ಳಲುದ್ದೇಶಿಸಿರುವ ಮಹತ್ವಾಕಾಂಕ್ಷೆಯ ದೇಶದ ಪ್ರಪ್ರಥಮ ಮಾನವ ಸಹಿತ ಗಗನಯಾನ ಯೋಜನೆಯ ಭಾಗವಾಗಿ ಭಾರತದ ನಾಲ್ಕು ಗಗನಯಾನಿಗಳು ಇದೀಗ ರಷ್ಯಾದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಾಯೋಗಿಕವಾಗಿ ಗಗನಯಾನವನ್ನು ಕೈಗೊಳ್ಳಲುದ್ದೇಶಿಸಲಾಗಿದೆ. ಅಧಿಕಾರಿ ತರಬೇತಿಗೆ 257 ಕೋಟಿ ರೂ.
ಅಧಿಕಾರಿಗಳಿಗೆ ದೇಶದಲ್ಲಿ ಮತ್ತು ಅಗತ್ಯ ಬಿದ್ದರೆ ವಿದೇಶಿ ನೆಲದಲ್ಲಿ ತರಬೇತಿ ನೀಡಲು ಮತ್ತು ಮೂಲಸೌಕರ್ಯ ಗಳನ್ನು ಹೆಚ್ಚಿಸಲು 257 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. 257.35 ಕೋಟಿ ರೂ.ಗಳಲ್ಲಿ 178.32 ಕೋಟಿ ರೂ.ಗಳನ್ನು ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಮೀಸಲಿಡಲಾಗಿದೆ.