ಹೊಳೆನರಸೀಪುರ: ಪಟ್ಟಣದ ಪುರಸಭೆಯ ಎರಡನೇ ವಾರ್ಡಿನಿಂದ ಹತ್ತೂಂಬತ್ತನೆ ವಾರ್ಡಿನವರೆಗೆ ಇರುವ ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ 4.5 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ನುಡಿದರು.
ಪಟ್ಟಣದ ಪುರಸಭೆ ಮುಂಭಾಗದಲ್ಲಿಏರ್ಪಡಿಸಿದ್ದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಈಗಾಗಲೇ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿಗಾಗಿ 65 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ. ಪಟ್ಟಣದಲ್ಲಿ ಕಳೆದ ಮೂವತ್ತ ವರ್ಷಗಳ ಹಿಂದೆ ಒಳಚರಂಡಿ ನಿರ್ಮಿಸಿತ್ತಾದರೂ ಸಹ ಬಹಳ ವರ್ಷಗಳಾಗಿರುವದರಿಂದ ಬಹಳಷ್ಟು ಕಡೆ ದುರಸ್ತಿಗೊಳಿಸಬೇಕಿದೆ.
ಸಾರ್ವಜನಿಕರು ಮತ್ತು ನಿವಾಸಿಗಳಿಗೆ ಭಾರೀ ತೊಂದರೆ ಉಂಟಾಗುತ್ತಿದ್ದು, ಸಮಸ್ಯೆ ಪರಿಹರಿಸುವ ಸಲುವಾಗಿ 95 ಕೋಟಿ ರೂ.ವೆಚ್ಚದಲ್ಲಿ ಹೊಸದಾಗಿ ಒಳಚರಂಡಿ ಕಾಮಗಾರಿ ನಡೆಸಿ, ಮುಂದಿನ ಐವತ್ತು ವರ್ಷಗಳಿಗೆ ಬೇಕಾಗುವ ಸವಲತ್ತು ನೀಡಲು ಉದ್ದೇಶಿಸಲಾಗಿದೆ. ಈ ಕಾಮಗಾರಿ ಈಗಾಗಲೆ ಆರಂಭವಾಗಿದೆ ಅದು ಸದ್ಯದಲ್ಲೆ ಪೂರ್ಣಗೊಳಿಸಿ ಒಳಚರಂಡಿ ಸಮಸ್ಯಗೆ ಶಾಶ್ವತ ಪರಿಹಾರ ನೀಡಲು ಉದ್ದೇಶಿಸಲಾಗಿದೆ ಎಂದರು. ಪ್ರಸ್ತುತ ಹೊಳೆ ಬೀದಿಯನ್ನು ಕಾಂಕ್ರಿಟೀಕರಣ ಮಾಡಲು 1.25 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೇರವೇರಿಸಲಾಗಿದೆ ಎಂದರು.
ಗುಣಮಟ್ಟದಲ್ಲೂ ರಾಜಿಯಿಲ್ಲ: ಕಾರ್ಯಕ್ರಮದಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಜೆಡಿಎಸ್ ನಾಯಕಿ ಭವಾನಿರೇವಣ್ಣ ಮಾತನಾಡಿ, ರೇವಣ್ಣ ಸಾಹೇಬರು ಮಾಡಿರುವ ಅಭಿವೃದ್ಧಿ ಕಾಮಗಾರಿಗಳು ಕೇವಲ ಜೆಡಿಎಸ್‌ನವರ ಅನುಭವಿಸುತ್ತಿಲ್ಲ, ತಾಲೂಕಿನ ಎಲ್ಲ ಜನರು ಅನುಭವಿಸುತ್ತಿದ್ದಾರೆ ಎಂಬು ದನ್ನು ನಮ್ಮನ್ನು ಟೀಕಿಸುವವರು ಅರಿಯಬೇಕೆಂದರು.
Related Articles
ನಮ್ಮ ಕುಟುಂಬ ಜಿಲ್ಲೆಯ ಅಭಿವೃದ್ಧಿ ಮಾಡಿರುವ ಅಭಿವೃದ್ಧಿ ಒಂದು ಪಕ್ಷದ ಜನರಿಗಾಗಿ ಆಲ್ಲ. ನಾವೀಗ ಮಾಡಿರುವ ಅಭಿವೃದ್ಧಿ ಗಳಲ್ಲಿ ಯಾವೊಂದು ನ್ಯೂನತೆಗಳು ದೊರಕಲು ಸಾಧ್ಯವೇ ಇಲ್ಲ. ಲೋಪದೋಷ ಕಂಡು ಹಿಡಿಯಲು ದುರ್ಬಿನುಹಿಡಿದು ಹುಡುಕಬೇಕಾಗಿದೆ. ಆದರೂ ನಮ್ಮನ್ನು ಟೀಕಿಸುವವರಿದ್ದಾರೆ ಎಂದರು.
ನಾಮಫಲಕ ಹಾಕಿಸಿಕೊಳ್ಳುವ ಚಟ ಇಲ್ಲ: ಜೆಡಿಎಸ್ ಪಕ್ಷ ಜಿಲ್ಲೆ ಮತ್ತು ತಾಲೂಕಿಗೆ ಮಾಡಿರುವ ಕಾಮಗಾರಿ ಬಗ್ಗೆ ಸಾಲುಸಾಲಾಗಿ ತಿಳಿಸಿ ನಾವು ಮಾಡಿರುವ ಅಭಿವೃದ್ಧಿಗಳಿಗೆ ನಮ್ಮಗಳ ನಾಮಫಲಕ ಹಾಕಿದ್ದೇ ಆದಲ್ಲಿ ಜಿಲ್ಲೆಯಲ್ಲಿ ಬೇರೆಯವರು ನಾಮಫಲಕ ಹಾಕಲು ಸ್ಥಳವೇ ದೊರೆಯಲ್ಲ. ನಾಮಫಲಕ ಹಾಕಿಸಿಕೊಳ್ಳುವ ಚಟ ನಮ್ಮ ಕುಟುಂಬಕ್ಕೆ ಇಲ್ಲ ಎಂದು ತಿಳಿಸಿ, ನಮ್ಮನ್ನು ಟೀಕಿಸುವವರು ಆರ್ಥ ಮಾಡಿಕೊಳ್ಳಬೇಕು. ಜೊತೆಗೆ ನಾವು ಮಾಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಸುಣ್ಣಬಣ್ಣ ಮಾಡಿಸಲು ಸಹ ಕಷ್ಟವಾಗಲಿದೆ ಎಂದು ಭವಾನಿ ರೇವಣ್ಣ ಪರೋಕ್ಷವಾಗಿ ಸರ್ಕಾರಕ್ಕೆ ಟಾಂಗ್ ಕೊಟ್ಟರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಸುಧಾನಳಿನಿ ಅವರು ಮಾತನಾಡಿ, ಪುರಸಭೆಯಲ್ಲಿ ಅನೇಕ ಕಾಮಗಾರಿ ಮಾಡಿಸಬೇಕಿದ್ದು ಅದಕ್ಕೆ ತಾವು ಸರ್ಕಾರದಿಂದ ಅನುಧಾನ ತಂದುಕೊಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ತ್ರೀಲೋಚನಾ, ಮುಖ್ಯಾಧಿಕಾರಿ ಶಾಂತಲಾ ಹಾಗೂ ಪುರಸಭೆ ಸದಸ್ಯರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಆರು ಡಯಾಲಿಸಿಸ್ ಯಂತ್ರ ಅಳವಡಿಕೆ: ಭವಾನಿ ರೇವಣ್ಣ
ನಾವುಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಳವಡಿ ಸಿರುವ ಯಂತ್ರಗಳು ಜಿಲ್ಲೆಯಲ್ಲಿ ಯಾವ ಆಸ್ಪತ್ರೆಯಲ್ಲೂ ಇಲ್ಲ ಎಂದು ಉದಾಹರಣೆ ನೀಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಆಳವಡಿಸಿರುವ ಸಿಟಿ ಸ್ಕ್ಯಾನಿಂಗ್ ಜಿಲ್ಲೆಯ ಯಾವೊಂದು ಸರ್ಕಾರಿ ಆಸ್ಪತ್ರೆಯಲ್ಲೂ ಇಲ್ಲ. ಇಂತಹ ಸವಲತ್ತು ತಂದಿರುವುದು ಕೇವಲ ಜೆಡಿಎಸ್‌ನವರಿಗಾಗಿ ಆಲ್ಲ, ಇನ್ನು ಡಯಾಲಿಸಿಸ್ ಗಾಗಿ ಈಗಾಗಲೇ ಅರು ಯಂತ್ರಗಳನ್ನು ಆಳವಡಿಸಿದ್ದು ನಿತ್ಯ ಹತ್ತಾರು ಮಂದಿ ಡಯಾಲಿಸಿಸ್ ಒಳಗಾಗಿ ತಮ್ಮ ಅರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಹೇಳಿದರು.