Advertisement
ಶಾಸಕ ಡಿ. ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮಹತ್ವದ್ದು. ಮಂಗಳೂರಿನ ಕೆಎಂಸಿ ಆಸ್ಪತ್ರೆ ಮಹತ್ತರ ಸೇವೆ ಸಲ್ಲಿಸುತ್ತಿದ್ದು ಮಾದರಿ ಆರೋಗ್ಯ ಕಾರ್ಯ ನಡೆಸುತ್ತಿದೆ ಎಂದು ಶ್ಲಾಘಿಸಿದರು.
ಕೆಎಂಸಿ ಮಂಗಳೂರಿನ ವೈದ್ಯಕೀಯ ಅಧೀಕ್ಷಕ ಡಾ| ಜಾನ್ ಟಿ. ರಾಮಪುರಲ್ ಮಾತನಾಡಿ, ರೇಡಿಯೋಥೆರಪಿ ಮತ್ತು ಆಂಕೋಲಜಿ ವಿಭಾಗವು ಇದೀಗ ವಿವೋ ಡೋಸಿಮೆಟ್ರಿ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ 3ಡಿ ಹೈಡೋಸ್ ಪ್ರಮಾಣದ ಬ್ರಾಕಿಥೆರಪಿಯನ್ನು ನೀಡುತ್ತಿದೆ. ಈ ವಿಧಾನದಲ್ಲಿ ರೋಗಿಗೆ ನೀಡಬೇಕಾದ ವಿಕಿರಣದ ಪ್ರಮಾಣ ಮತ್ತು ಚಿಕಿತ್ಸೆಯನ್ನು ಅತ್ಯಂತ ನಿಖರವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನವು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಮೊದಲನೆಯ ಸಾಧನೆಯಾಗಿದೆ ಎಂದರು. ಬ್ರಾಕಿಥೆರಪಿ ವಿಧಾನವು ವಿಕಿರಣ ಚಿಕಿತ್ಸೆಯ ಒಂದು ರೂಪವಾಗಿದ್ದು, ಈ ವಿಧಾನದ ಮೂಲಕ ರೋಗಿಗೆ ನೀಡುವ ವಿಕಿರಣದ ಪ್ರಮಾಣ ಮತ್ತು ಚಿಕಿತ್ಸೆಯನ್ನು ಅತ್ಯಂತ ನಿಖರವಾಗಿ ನೀಡಲು ಸಾಧ್ಯವಾಗುತ್ತದೆ. ಈ ವಿಧಾನದ ಮೂಲಕ ರೋಗಿಗೆ ವೈದ್ಯಕೀಯ ವಿಕಿರಣ ಎಸೊಟೋಪ್ಸ್‌ಗಳಾದ (ಸಮಸ್ಥಾನಿ) ಕೋಬಾಲ್ಟ್ 60, ಇಂಡಿಯನ್ 192 ಮುಂತಾದವುಗಳನ್ನು ಟೊಳ್ಳಾದ ಲೋಹದ ಸೂಜಿಗಳು ಅಥವಾ ಪ್ಲಾಸ್ಟಿಕ್ ತೂರುನಳಿಕೆ ಮೂಲಕ ದೇಹದ ಒಳಗೆ ಅಥವಾ ದೇಹದ ಮೇಲ್ಮೈಯಲ್ಲಿ ಇಡುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ ಎಂದರು.
Related Articles
ಈ ಚಿಕಿತ್ಸೆ ನೋವು ರಹಿತವಾಗಿದ್ದು, ಹೆಚ್ಚಿನ ಪ್ರಮಾಣದ ವಿಕಿರಣವನ್ನು ನಿರ್ದಿಷ್ಟವಾಗಿ ಕ್ಯಾನ್ಸರ್ ಇರುವ ಭಾಗಗಳಿಗಷ್ಟೇ ನೀಡಲಾಗುತ್ತದೆ. ಇದರಿಂದ ದೇಹದ ಇತರ ಸಾಮಾನ್ಯ ಭಾಗಗಳು ವಿಕಿರಣದಿಂದ ಪಾರಾಗುತ್ತವೆ ಎಂದರು.
Advertisement
ಪಯ್ಯನೂರಿನ ಮಕ್ಕಳ ತಜ್ಞರಾದ ಡಾ| ಎಂ. ಹರಿದಾಸ್, ಉಪ್ಪಿನಂಗಡಿಯ ಭಟ್ ನರ್ಸಿಂಗ್ ಹೋಂ ಇದರ ವೈದ್ಯ ಡಾ| ಕೆ.ಜಿ. ಭಟ್, ಮೂಡುಬಿದಿರೆ ಜಿ.ವಿ. ಪೈ ಮೆಮೋರಿಯಲ್ ಆಸ್ಪತ್ರೆಯ ವೈದ್ಯ ಡಾ| ಜಯಗೋಪಾಲ್ ತೋಳ್ಪಾಡಿ, ಕೆಎಂಸಿಯ ಅಡಿಶನಲ್ ಡೀನ್ ಡಾ| ಆಲ್ಫೆ†ಡ್ ಆಗಸ್ಟಿನ್, ಅಸೋಸಿಯೇಟ್ ಡೀನ್ ಡಾ| ನೂತನ್ ಕಾಮತ್, ರೀಜನಲ್ ಸಿಇಒ ಸಗೀರ್ ಸಿದ್ದಿಕಿ ಉಪಸ್ಥಿತರಿದ್ದರು. ಸಹನಾ ಅವರು ಕಾರ್ಯಕ್ರಮ ನಿರೂಪಿಸಿದರು.