Advertisement
ಶಂಕಿತ ಡೆಂಗ್ಯೂ ಬಾಧಿತ ಪ್ರದೇಶ ಗಳಲ್ಲಿ ಫಾಗಿಂಗ್ ನಡೆಸಿರುವುದಲ್ಲದೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಬೇಸಗೆಯಲ್ಲಿ ನೀರಿನ ಅಭಾವ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ರೇಷನಿಂಗ್ ವ್ಯವಸ್ಥೆಯಲ್ಲಿ ನಾಲ್ಕು ದಿನ ನೀರು ಪೂರೈಕೆ, ಮೂರು ದಿನ ಸ್ಥಗಿತ ಮಾಡಲಾಗಿತ್ತು. ಈ ವೇಳೆ ನೀರನ್ನು ಜನ ವಿವಿಧ ಪಾತ್ರೆ, ಡ್ರಮ್, ಬಕೆಟ್ ಮುಂತಾದವುಗಳಲ್ಲಿ ಸಂಗ್ರಹಿಸಿಟ್ಟಿದ್ದರು. ಮಳೆ ಆರಂಭವಾದರೂ ಸಂಗ್ರಹಿಸಿರುವ ನೀರನ್ನು ಚೆಲ್ಲಿ ಶುಚಿ ಮಾಡದೇ ಇದ್ದದ್ದರಿಂದಲೂ ಡೆಂಗ್ಯೂ ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶೇಖರಿಸಿಟ್ಟ ಎಲ್ಲ ನೀರನ್ನು ಚೆಲ್ಲಿ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಎಲ್ಲ ಮನೆಮಂದಿಗೆ ಶಾಸಕರು ಮತ್ತು ಅಧಿಕಾರಿಗಳು ಸಲಹೆ ಮಾಡಿದ್ದಾರೆ.