Advertisement

ಇರಾಕ್‌ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರ ಸಾವು: ಸುಷ್ಮಾ

11:33 AM Mar 20, 2018 | Team Udayavani |

ಹೊಸದಿಲ್ಲಿ : ಇರಾಕ್‌ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರಿಂದು ಮಂಗಳವಾರ ರಾಜ್ಯಸಭೆಗೆ ತಿಳಿಸಿದರು. 

Advertisement

ಮೃತ ಭಾರತೀಯರ ಕಳೇಬರಗಳನ್ನು ಪಡೆಯಲು ಸಚಿವ ವಿ ಕೆ ಸಿಂಗ್‌ ಅವರು ಇರಾಕ್‌ಗೆ ತೆರಳಲಿದ್ದಾರೆ. ಇರಾಕ್‌ನಿಂದ ಮರಳುವಾಗ ಅವರು ಮೊದಲು ಅಮೃತ್‌ಸರದಲ್ಲಿ  ಇಳಿಯುವರು. ಅನಂತರದಲ್ಲಿ ಇತರ ರಾಜ್ಯಗಳಿಗೆ ತೆರಳಿ ಶವಗಳನ್ನು ಸಂಬಂಧಿತರಿಗೆ ಒಪ್ಪಿಸುವರು ಎಂದು ಸ್ವರಾಜ್‌ ಹೇಳಿದರು. 

ಇರಾಕ್‌ ನ ಸಾಮೂಹಿಕ ಗೋರಿಗಳಲ್ಲಿದ್ದ 39 ಭಾರತೀಯರ ಶವಗಳನ್ನು ಮೇಲೆತ್ತಿ ಗುರುತಿಸುವ ಗುರುತರ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ನಡೆಸಿರುವ ಸಚಿವ ವಿ ಕೆ ಸಿಂಗ್‌ ಅವರಿಗೆ ನಾನು ಧನ್ಯವಾದ ಹೇಳಬಯಸುತ್ತೇನೆ ಎಂದು ಸ್ವರಾಜ್‌ ನುಡಿದರು.

ಮೃತ ಭಾರತೀಯ ಡಿಎನ್‌ಎ ಮಾದರಿ ಪಡೆಯಲು ನಾವು ನಾಲ್ಕು ರಾಜ್ಯಗಳಲ್ಲಿ ಹರಡಿಕೊಂಡಿರುವ ಅವರ ಕುಟುಂಬಗಳನ್ನು ಸಂಪರ್ಕಿಸಿ ಬಳಿಕ ಶವಗಳನ್ನು ಗುರುತಿಸುವುದಕ್ಕಾಗಿ ನಾವು ಅವರನ್ನು ಇರಾಕ್‌ಗೆ ಕಳುಹಿಸಿದೆವು ಎಂದು ಸ್ವರಾಜ್‌ ಹೇಳಿದರು. 

ಇರಾಕ್‌ನ ಸಮರ ತ್ರಸ್ತ ಮೊಸುಲ್‌ನಲ್ಲಿ 2014ರಿಂದ 39 ಭಾರತೀಯರು ನಾಪತ್ತೆಯಾಗಿದ್ದು ಅವರು ಮೃತಪಟ್ಟಿರುವುದು ಅನಂತರ ದೃಢಪಟ್ಟಿತು ಎಂದು ಸ್ವರಾಜ್‌ ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next