Advertisement

3.79 ಲಕ್ಷ ಉದ್ಯೋಗ ಸೃಷ್ಟಿ

01:10 AM Feb 11, 2019 | |

ಹೊಸದಿಲ್ಲಿ: ದೇಶದಲ್ಲಿ ಉದ್ಯೋಗ ಕೊರತೆ ಉಂಟಾಗಿದೆ ಎಂಬ ಆರೋಪದ ಮಧ್ಯೆಯೇ 2017 ರಿಂದ 2019ರ ವರೆಗೆ 3.79 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಮಧ್ಯಾಂತರ ಬಜೆಟ್‌ನ ದಾಖಲೆಗಳ ಪರಿಶೀಲನೆಯಲ್ಲಿ ತಿಳಿದುಬಂದಿದೆ. 

Advertisement

ಕೇಂದ್ರ ಸರ್ಕಾರದ ಅಡಿಯಲ್ಲಿ 2.51 ಲಕ್ಷ ಉದ್ಯೋಗವನ್ನು 2017 ಮತ್ತು 2018 ರಲ್ಲಿ ಸೃಷ್ಟಿಸಲಾಗಿದೆ. ಮಾರ್ಚ್‌ 2019 ರೊಳಗೆ ಈ ಸಂಖ್ಯೆ 3.79 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಸರ್ಕಾರದ ಬಜೆಟ್‌ನಲ್ಲಿ ವಿವರಿಸಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೆ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ ಸೃಷ್ಟಿಯಾಗಿದೆ. 2019 ಮಾರ್ಚ್‌ ವೇಳೆಗೆ 98,999 ಉದ್ಯೋಗ ರೈಲ್ವೆಯಲ್ಲಿ ಸೃಷ್ಟಿಯಾಗಲಿದೆ. ಪೊಲೀಸ್‌ ಇಲಾಖೆಯಲ್ಲಿ 79 ಸಾವಿರ, ನೇರ ತೆರಿಗೆ ಇಲಾಖೆಯಲ್ಲಿ 80 ಸಾವಿರ ಉದ್ಯೋಗ 2019 ಮಾರ್ಚ್‌ ವೇಳೆಗೆ ಸೃಷ್ಟಿಯಾಗಲಿದೆ.

ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳು ವಾಗ್ಧಾಳಿ ನಡೆಸುತ್ತಿರುವ ಮಧ್ಯೆ ಬಜೆಟ್‌ನಲ್ಲಿರುವ ಈ ವಿವರಗಳು ಮಹತ್ವ ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next