Advertisement

ಏಳು ತಿಂಗಳಲ್ಲಿ 377ರೈತರ ಆತ್ಮಹತ್ಯೆ ಪ್ರಕರಣ

06:37 AM Dec 15, 2018 | Team Udayavani |

ಸುವರ್ಣ ಸೌಧ (ವಿಧಾನಸಭೆ): ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯ ಹೊರತಾಗಿಯೂ ರಾಜ್ಯದಲ್ಲಿ ಕಳೆದ ಜೂನ್‌ನಿಂದ ಇಲ್ಲಿಯವರೆಗೆ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಅವರೇ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 377 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಉಪ ವಿಭಾಗ ಮಟ್ಟದ ಸಮಿತಿಯಲ್ಲಿ 227 ಅನ್ನು ಅರ್ಹ ಪ್ರಕರಣ ಎಂದು ಪರಿಗಣಿಸಲಾಗಿದೆ. 72 ಪ್ರಕರಣಗಳು ತಿರಸ್ಕೃತಗೊಂಡಿದ್ದರೆ, 78 ಪ್ರಕರಣಗಳು ಸಮಿತಿಯಲ್ಲೇ ಬಾಕಿ ಉಳಿದಿವೆ ಎಂದೂ ತಿಳಿಸಿದ್ದಾರೆ. ತಿರಸ್ಕೃತ ಪ್ರಕರಣಗಳಿಗೆ ಪರಿಹಾರ ಸಿಗುವುದಿಲ್ಲ ಎಂದಿದ್ದಾರೆ.

Advertisement

2018ರ ಜೂನ್‌ನಿಂದ ಡಿಸೆಂಬರ್‌ ವರೆಗಿನ ಸರ್ಕಾರದ ಅಧಿಕೃತ ಮಾಹಿತಿ ಇದಾಗಿದ್ದು, ಅಧಿವೇಶನ ನಡೆಯುತ್ತಿರುವ
ಸುವರ್ಣ ಸೌಧ ಇರುವ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು (44) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದಂತೆ
ವಿಜಯಪುರ, ಯಾದಗಿರಿ ತಲಾ 27, ಮೈಸೂರು 25, ಕಲಬುರಗಿ 24, ಬೀದರ್‌ 22, ದಾವಣಗೆರೆಯಲ್ಲಿ 21, ಧಾರವಾಡ 20, ಚಿಕ್ಕಮಗಳೂರಿನಲ್ಲಿ 17, ಮಂಡ್ಯ 16, ತುಮಕೂರು, ಬಾಗಲಕೋಟೆ ತಲಾ 14 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನೂ ಸರ್ಕಾರವೇ ಸದನಕ್ಕೆ ತಿಳಿಸಿದೆ.

ಸಾಲಮನ್ನಾ ಘೋಷಣೆ
ಮಾಡಿದರೂ ರೈತರ ಆತ್ಮಹತ್ಯೆ ವಿಷಯ ಅತ್ಯಂತ ಗಂಭೀರ ವಿಚಾರವಾಗಿದ್ದು, ಸರ್ಕಾರ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ವಿಫ‌ಲವಾಗಿದೆ.
 ●ಸಿ.ಟಿ.ರವಿ, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next